Search
  • Follow NativePlanet
Share
» »ಕೂರ್ಗ್‌ಗೆ ಹೋದಾಗ ಇದನ್ನೆಲ್ಲಾ ನೋಡೋದು, ಸವಿಯೋದು ಮಿಸ್‌ ಮಾಡಬೇಡಿ…!

ಕೂರ್ಗ್‌ಗೆ ಹೋದಾಗ ಇದನ್ನೆಲ್ಲಾ ನೋಡೋದು, ಸವಿಯೋದು ಮಿಸ್‌ ಮಾಡಬೇಡಿ…!

ಕೂರ್ಗ್ ಅಥವಾ ಕೊಡಗು ಹೆಸರು ಕೇಳಿದರೆ ಒಬ್ಬೊಬ್ಬರಿಗೆ ಒಂದೊಂದು ವಿಷಯಗಳು ಕಣ್ಮುಂದೆ ಬರುತ್ತವೆ. ಕಾಫಿ ತೋಟಗಳು, ಮಸಾಲೆ ತೋಟಗಳು, ಗಿರಿ ತೊರೆಗಳು, ಜಲಪಾತಗಳು ಒಂದೇ ಎರಡೇ... ಈ ಸಣ್ಣ ಗಿರಿಧಾಮ ತನ್ನ ನೈಸರ್ಗಿಕ ಸೌಂದರ್ಯದಿಂದ ಎಂಥವರನ್ನು ತನ್ನೆಡೆಗೆ ಸೆಳೆಯುತ್ತದೆ. ಮತ್ತೆ ಮತ್ತೆ ಈ ಸ್ಥಳಕ್ಕೆ ಬರುವಂತೆ ಮಾಡುತ್ತದೆ. ಕಾಫಿ ಪ್ರಿಯರಿಗೆ ಅದರ ಘಮ ಇಲ್ಲಿಗೆ ಕಾಲಿಡುತ್ತಿದ್ದಂತೆಯೇ ತಟ್ಟಿದರೆ, ಆಹಾರ ಪ್ರಿಯರಿಗೆ ರೊಟ್ಟಿ, ಪಂದಿ ಕರಿ ವಾಸನೆ ಮೂಗಿಗೆ ಬಡಿಯುತ್ತದೆ. ಹೀಗೆ ಎಲ್ಲರಿಗೂ ಒಂದೊಂದು ವಿಷಯಕ್ಕೆ ಫೇವರಿಟ್‌ ಆಗಿರುವ ಕೊಡಗಿನ ಬಗ್ಗೆ ಈಗಾಗಲೇ ಸಾಕಷ್ಟು ಕೇಳಿದ್ದರೂ, ಹೋಗಿ ಬಂದಿದ್ದರೂ ಮತ್ತೆ ಮತ್ತೆ ನೋಡಬೇಕೆನ್ನುವವರಿಗಾಗಿ ಈ ಲೇಖನ...

ವಿಶ್ವದಾದ್ಯಂತ ಜನಪ್ರಿಯವಾಗಿರುವ ಕಾಫಿ ತೋಟಗಳು

ಕೊಡಗು ಕರ್ನಾಟಕ ರಾಜ್ಯದ ಸುಂದರವಾದ ಜಿಲ್ಲೆ. ಕಾವೇರಿ ನದಿಯ ಮೂಲ. ಇದು ಸಮುದ್ರ ಮಟ್ಟದಿಂದ 1525 ಮೀಟರ್ ಎತ್ತರದಲ್ಲಿದೆ. ಪರ್ವತಗಳು, ಹಸಿರು ಕಾಡುಗಳು ಮತ್ತು ಕಾಫಿ ತೋಟಗಳಿಂದ ವರ್ಷಪೂರ್ತಿ ಜನರನ್ನು ಆಕರ್ಷಿಸುತ್ತದೆ. ಕಾಫಿ ವಿಶ್ವದ ಅತ್ಯಂತ ಜನಪ್ರಿಯ ಪಾನೀಯಗಳಲ್ಲಿ ಒಂದಾಗಿದೆ. ಹೆಚ್ಚಿನ ಜನರು ಇದರೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಕಾಫಿಯಲ್ಲಿರುವ ಕೆಫೀನ್ ವ್ಯಕ್ತಿಯನ್ನು ಸಕ್ರಿಯವಾಗಿರಿಸಲು ಸಹಾಯ ಮಾಡುತ್ತದೆ. ಮತ್ತೆ ಹೆಚ್ಚು ಹಾನಿಕಾರಕ ಪರಿಣಾಮಗಳನ್ನು ಹೊಂದಿರುವುದಿಲ್ಲ.

ಕೂರ್ಗ್‌ ಕಾಫಿ ತೋಟಗಳು ವಿಶ್ವದಾದ್ಯಂತ ಜನಪ್ರಿಯವಾಗಿದ್ದು, ಅತ್ಯಂತ ಸುಂದರವಾದ ದೃಶ್ಯವನ್ನು ನೀವಿಲ್ಲಿ ಕಣ್ತುಂಬಿಕೊಳ್ಳಬಹುದು. ಪ್ರತಿ ಉಸಿರಾಟದಲ್ಲೂ ಕಾಫಿಯ ವಾಸನೆ ಅನುಭವಿಸಬಹುದು. ಹಾಗಾಗಿಯೇ ಕೊಡಗು ತನ್ನ ಗುಣಮಟ್ಟ, ರುಚಿ ಮತ್ತು ಸಾಂಸ್ಕೃತಿಕ ಮಹತ್ವಕ್ಕಾಗಿ ಹೆಸರುವಾಸಿಯಾಗಿದೆ. 19 ನೇ ಶತಮಾನದಲ್ಲಿ ಬ್ರಿಟಿಷರು ಇಲ್ಲಿ ಸಾಕಷ್ಟು ಉದ್ಯಾನಗಳನ್ನು ಮಾಡಿದರು ಎಂದು ನಂಬಲಾಗಿದೆ. ಈ ಪ್ರದೇಶದ ತಂಪಾದ ವಾತಾವರಣವು ಕಾಫಿಗೆ ಸಾಕಷ್ಟು ಸೂಕ್ತವಾಗಿದೆ. ಕೊಡವ ಸಮುದಾಯದವರು ಇಲ್ಲಿ ಕೃಷಿ ಮಾಡುತ್ತಾರೆ. ಇಲ್ಲಿ ಅನೇಕ ಕಾಫಿ ಫಾರ್ಮ್‌ಗಳಿವೆ. ಕೂರ್ಗ್‌ನಲ್ಲಿ ಅರೇಬಿಕಾ ಮತ್ತು ರೋಬಸ್ಟಾ ಎಂಬ ಎರಡು ಬಗೆಯ ಕಾಫಿಗಳನ್ನು ತಯಾರಿಸಲಾಗುತ್ತದೆ.

coorg sunset

ಇಲ್ಲಿ ಏನೆಲ್ಲಾ ನೋಡಬಹುದು?

ಕೂರ್ಗ್‌ನಲ್ಲಿ ನೋಡಬಹುದಾದ ಅನೇಕ ಸ್ಥಳಗಳಿವೆ. ಕೂರ್ಗ್‌ನ ನೈಸರ್ಗಿಕ ಸೌಂದರ್ಯವೇ ಇಲ್ಲಿನ ಪ್ಲಸ್‌ ಪಾಯಿಂಟ್.‌ ಇಲ್ಲಿ ಅಬ್ಬೆ ಫಾಲ್ಸ್, ಮಾಂದಲ್ ಪಟ್ಟಿ ವ್ಯೂ ಪಾಯಿಂಟ್, ನಾಮಡ್ರೋಲಿಂಗ್ ಮಠ, ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ, ಇರಪ್ಪು ಜಲಪಾತ ಇತ್ಯಾದಿಗಳು ಭೇಟಿ ನೀಡಲೇಬೇಕಾದ ಸ್ಥಳಗಳಾಗಿವೆ.

ಹೇಗೆ ಹೋಗಬೇಕು, ಯಾವಾಗ ಹೋಗಬೇಕು?

ಕೊಡಗಿಗೆ ಹತ್ತಿರದ ಸ್ಥಳವೆಂದರೆ ಮೈಸೂರು. ಇದು 120 ಕಿಮೀ ದೂರದಲ್ಲಿದೆ ಮತ್ತು ಮಂಗಳೂರು 135 ಕಿಮೀ ದೂರದಲ್ಲಿದೆ. ರೈಲಿನ ಮೂಲಕ ತೆರಳುವವರಿಗೆ ಹತ್ತಿರದ ರೈಲು ನಿಲ್ದಾಣಗಳು ಮೈಸೂರು, ಮಂಗಳೂರು ಮತ್ತು ಹಾಸನ. ಹತ್ತಿರದ ವಿಮಾನ ನಿಲ್ದಾಣವೆಂದರೆ ಬೆಂಗಳೂರು, ಮೈಸೂರು.

coffee-plantation

ಭೇಟಿ ನೀಡುವ ಸಮಯ

ಮಳೆಗಾಲದಲ್ಲಿ ಅಲ್ಲಲ್ಲಿ ಭೂಕುಸಿತದಂತಹ ಅಪಾಯ ಹೊರತುಪಡಿಸಿ ವರ್ಷವಿಡೀ ಕೂರ್ಗ್‌ಗೆ ಭೇಟಿ ನೀಡಬಹುದು. ಇಲ್ಲಿನ ತಾಪಮಾನವು ಇಪ್ಪತ್ತರಿಂದ ಮೂವತ್ತು ಡಿಗ್ರಿಗಳ ನಡುವೆ ಇರುತ್ತದೆ.

coffee-beans

ಏನೆಲ್ಲಾ ಸವಿಯಬಹುದು?

ಕೂರ್ಗ್ ಪ್ರವಾಸೋದ್ಯಮ ತಾಣ. ಇಲ್ಲಿ ನಿಮಗೆ ಎಲ್ಲಾ ರೀತಿಯ ಆಹಾರ ಲಭ್ಯವಿದೆ. ಹಾಗಾಗಿ ನೀವು ಕೂರ್ಗ್‌ಗೆ ಭೇಟಿ ನೀಡಿದರೆ ಪ್ರಕೃತಿಯ ಜತೆಗೆ ತಿನಿಸುಗಳ ರುಚಿಯೊಂದಿಗೆ ಹೊರಬರಬೇಕು. ಇಲ್ಲಿನ ಆಹಾರ ಕೊಡವ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಇಲ್ಲಿ ನೀವು ರಾಗಿ ಅಥವಾ ಅಕ್ಕಿ ರೊಟ್ಟಿ, ಕೂಟ್ ಕರಿ, ಪುಟ್ಟು ಮತ್ತು ಸಿಹಿ ಹಲಸಿನ ಪುಟ್ಟು ಮತ್ತು ಬಾಳೆಹಣ್ಣು ಸಿಹಿ ತಂಬಿಟ್ಟುಗಳನ್ನು ಪ್ರಯತ್ನಿಸಬೇಕು. ಮಡಿಕೇರಿಯಲ್ಲಿ ಮಾಂಸಾಹಾರಿಗಳಿಗೆ ಸಮುದ್ರಾಹಾರವೂ ಲಭ್ಯವಿದೆ.

More News

Read more about: kodagu karnataka ಕೊಡಗು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+