Search
  • Follow NativePlanet
Share
» »ಶಾಪಿಂಗ್ ಮಾಡೋಕೆ ಚೀಪ್ & ಬೆಸ್ಟ್ ಶಾಪಿಂಗ್‌ ಮಾರ್ಕೇಟ್ ಇಲ್ಲಿದೆ

ಶಾಪಿಂಗ್ ಮಾಡೋಕೆ ಚೀಪ್ & ಬೆಸ್ಟ್ ಶಾಪಿಂಗ್‌ ಮಾರ್ಕೇಟ್ ಇಲ್ಲಿದೆ

ಶಾಪಿಂಗ್ ಮಾಡೋದಂದ್ರೆ ಯಾರಿಗೇ ತಾನೇ ಇಷ್ಟ ಇಲ್ಲ. ಅದರಲ್ಲೂ ಹೆಣ್ಮಕ್ಕಳಿಗಂತೂ ಶಾಪಿಂಗ್ ಅಂದ್ರೆ ತುಂಬಾನೇ ಇಷ್ಟ ಇರುತ್ತೆ. ಕಡಿಮೆ ಹಣದಲ್ಲಿ ಬೇಕಾದಷ್ಟು ಶಾಪಿಂಗ್ ಮಾಡಬಹುದೆಂದರೆ ಯಾರು ತಾನೇ ಮಿಸ್ ಮಾಡ್ಕೋತ್ತಾರೇ ಹೇಳಿ.

 ಕಡಿಮೆ ಬೆಲೆಯಲ್ಲಿ ಬ್ರಾಂಡೆಡ್ ಬಟ್ಟೆ

ಕಡಿಮೆ ಬೆಲೆಯಲ್ಲಿ ಬ್ರಾಂಡೆಡ್ ಬಟ್ಟೆ

ಇಂದು ನಾವು ನಿಮಗೆ ಕಡಿಮೆ ಹಣದಲ್ಲಿ ನಿಮಗಿಷ್ಟವಾದಂತಹ ವಸ್ತುಗಳನ್ನು ಕೊಳ್ಳಬಹುದಾದ ಅದರಲ್ಲೂ ಬಟ್ಟೆ ಬರೆಗಳನ್ನು ಕೊಳ್ಳಬಹುದಾದಂತಹ ಕೆಲವು ಸ್ಥಳಗಳ ಬಗ್ಗೆ ತಿಳಿಸಲಿದ್ದೇವೆ. ಸ್ಟ್ರೀಟ್‌ ಶಾಪಿಂಗ್ ಹಾಗೂ ಕಡಿಮೆ ಬೆಲೆಗೆ ಶೋ ರೂಂನಲ್ಲಿ ಸಿಗುವಂತಹ ಬಟ್ಟೆ ಬರೆಗಳನ್ನು ಎಲ್ಲಿ ಕೊಂಡುಕೊಳ್ಳಬಹುದು ಅನ್ನೋದು ಹೆಚ್ಚಿನವರಿಗೆ ಗೊತ್ತು . ಸಾಮಾನ್ಯವಾಗಿ ಮುಂಬೈ, ದೆಹಲಿಯಲ್ಲಿ ಈ ಕಡಿಮೆ ಬೆಲೆಗೆ ಬಟ್ಟೆಗಳು ಸಿಗುತ್ತದೆ.

ಶಾಪಿಂಗ್ ಮಾರ್ಕೇಟ್‌ಗಳು

ಶಾಪಿಂಗ್ ಮಾರ್ಕೇಟ್‌ಗಳು

ಇಂದು ನಾವು ದೆಹಲಿಯಲ್ಲಿ ಎಲ್ಲೆಲ್ಲಾ ನಿಮಗೆ ಇಷ್ಟವಾಗುಂತಹ ಫ್ಯಾಶನೇಬಲ್ ಬಟ್ಟೆಗಳನ್ನು ಕೊಂಡುಕೊಳ್ಳಬಹುದು ಎನ್ನುವುದರ ಬಗ್ಗೆ ನಾವಿಂದು ತಿಳಿಸಲಿದ್ದೇವೆ. ಹಾಗಾಗಿ ನೀವು ಯಾವತ್ತಾದರೂ ದೆಹಲಿಗೆ ಭೇಟಿ ನೀಡಿದಾಗ ಈ ತಾಣಗಳಿಗೆ ಹೋಗಿ ಶಾಪಿಂಗ್ ಮಾಡೋದನ್ನು ಮಾತ್ರ ಮರೆಯಬೇಡಿ.

ಸೆಂಟ್ರಲ್ ಮಾರ್ಕೇಟ್

ಸೆಂಟ್ರಲ್ ಮಾರ್ಕೇಟ್

ದಕ್ಷಿಣ ದೆಹಲಿಯಲ್ಲಿರುವ ಈ ಮಾರ್ಕೇಟ್ ಬಹಳ ದೊಡ್ಡ ಶಾಪಿಂಗ್ ಮಾರುಕಟ್ಟೆಯಾಗಿದೆ. ಇಲ್ಲಿ ನೀವು ಕಡಿಮೆ ಬೆಲೆಯಿಂದ ಹಿಡಿದು ಅಧಿಕ ಬೆಲೆಯ ವರೆಗಿನ ಎಲ್ಲಾ ಫ್ಯಾಶನೇಬಲ್ ವಸ್ತುಗಳನ್ನು ಕೊಂಡುಕೊಳ್ಳಬಹುದು. ಸೆಂಟ್ರಲ್ ಮಾರ್ಕೇಟ್‌ನಲ್ಲಿ ನಿಮಗೆ ಬಟ್ಟೆ ಬರೆ ಜೊತೆಗೆ ಚಪ್ಪಲ್ ಮನೆ ಅಲಂಕಾರಿಕ ವಸ್ತುಗಳೂ ಕಡಿಮೆ ಬೆಲೆಗೆ ಸಿಗುತ್ತವೆ.

ಜನಪಥ

ಜನಪಥ

ಪೂರ್ವ ದೆಹಲಿಯಲ್ಲಿರುವ ಈ ಮಾರ್ಕೇಟ್ ಫ್ಯಾಶನ್‌ ಟ್ರೆಂಡ್‌ಗೆ ಹೆಸರುವಾಸಿಯಾಗಿದೆ. ಇಲ್ಲಿ ನಿಮಗೆ ಬ್ರಾಂಡೆಡ್ ಬಟ್ಟೆ ಕಡಿಮೆ ಬೆಲೆಗೆ ಸಿಗುತ್ತದೆ. ಇಲ್ಲಿ ನೀವು ಶಾಪಿಂಗ್ ಮಾಡಬೇಕಾದ್ರೆ ನಿಮಗೆ ಚೌಕಾಶಿ ಮಾಡಲು ತಿಳಿದಿರಬೇಕು.

ಕರೇಲಾ ಬಾಗ್

ಕರೇಲಾ ಬಾಗ್

ಕರೇಲಾ ಬಾಗ್‌ ಶಾಪಿಂಗ್ ಮಾರ್ಕೇಟ್‌ನಲ್ಲಿ ಎಲ್ಲರಿಗೂ ಎಲ್ಲವೂ ಸಿಗುತ್ತದೆ. ಅದು ಕೂಡಾ ಅತೀ ಕಡಿಮೆ ಬೆಲೆಯಲ್ಲಿ . ಇಲ್ಲಿ ನಿಮಗೆ ಅಂತರಾಷ್ಟ್ರೀಯ ಬ್ರಾಂಡೆಡ್ ಬಟ್ಟೆ ಕೂಡಾ ಕಡಿಮೆ ಬೆಲೆಗೆ ಸಿಗುತ್ತದೆ. ಕಡಿಮೆ ಬೆಲೆಗೆ ಬ್ರಾಂಡೆಡ್ ಹಾಗೂ ಟ್ರೆಂಡಿ ಬಟ್ಟೆಗಳು ಸಿಗುತ್ತದೆ.

ಸರೋಜಿನಿ ನಗರ್ ಮಾರ್ಕೇಟ್

ಸರೋಜಿನಿ ನಗರ್ ಮಾರ್ಕೇಟ್

ವೆರೈಟಿ, ಲುಕ್, ಟ್ರೆಂಡಿ ಬಟ್ಟೆಗಳ ವಿಷ್ಯದಲ್ಲಿ ಮೊದಲ ಸ್ಥಾನದಲ್ಲಿರುವ ಮಾರ್ಕೇಟ್ ಎಂದರೆ ಸರೋಜಿನಿ ನಗರ್ ಮಾರ್ಕೇಟ್. ಇಲ್ಲಿ ಕಡಿಮೆ ಬೆಲೆಗೆ ಬ್ರಾಂಡೆಡ್, ವಿನೂತನ ಶೈಲಿಯ ಬಟ್ಟೆಗಳು ಸಿಗುತ್ತವೆ. ಟಿವಿಯಲ್ಲಿ ನೋಡಬಹುದಾದಂತಹ ಸ್ಟೇಲಿಶ್ ವಸ್ತ್ರಗಳು ನಿಮಗೆ ಈ ಮಾರ್ಕೇಟ್‌ನಲ್ಲಿ ಕಾಣಸಿಗುತ್ತದೆ.

ಚಾಂದ್ನಿ ಚೌಕ್

ಚಾಂದ್ನಿ ಚೌಕ್

ಚಾಂದ್ನಿ ಚೌಕ್ ದೆಹಲಿಯಲ್ಲಿರುವ ಅತ್ಯಂತ ಹಳೆಯ ಹಾಗೂ ದೊಡ್ಡ ಶಾಪಿಂಗ್ ಮಾರ್ಕೇಟ್ ಆಗಿದೆ. ಇಲ್ಲಿ ನೀವು ನಿಮಗೆ ಬೇಕಾದಂತಹ ಫ್ಯಾಶನ್ ಬಟ್ಟೆಯನ್ನು ಹುಡುಕಬೇಕು. ಯುವ ಜನತೆಗೆ ಬೇಕಾಗಿರುವಂತಹ ಟ್ರೆಂಡಿ ಬಟ್ಟೆಗಳನ್ನು ನಾವಿಲ್ಲಿ ಕಾಣಬಹುದು.

ಕಮಲಾ ನಗರ್

ಕಮಲಾ ನಗರ್

ಕಮಲಾ ನಗರ್ ಬಟ್ಟೆಗೆ ಫೇಮಸ್‌ ತಾಣವಾಗಿದೆ. ಇಲ್ಲಿ ಬಟ್ಟೆಯಷ್ಟೇ ಅಲ್ಲದೆ ಕಡಿಮೆ ಬೆಲೆಗೆ ಆಭರಣಗಳನ್ನೂ ಖರೀದಿಸಬಹುದಾಗಿದೆ. ಇಲ್ಲಿ ವಿಭಿನ್ನ ಸ್ಟೇಲಿಶ್ ಆಭರಣಗಳು ೬೦ರಿಂದ ೧೦೦ ರೂ. ಒಳಗೆ ಸಿಗುತ್ತದೆ.

ದಿಲ್ಲಿಹಟ್

ದಿಲ್ಲಿಹಟ್

ಇಲ್ಲಿ ಅತ್ಯಂತ ಕಡಿಮೆ ಬೆಲೆಗೆ ಆಭರಣಗಳು ಸಿಗುತ್ತದೆ. ಸಂಪ್ರದಾಯಿಕ ಆಭರಣಗಳಿಂದ ಹಿಡಿದು ಸ್ಟೇಲಿಶ್ ಆಭರಣಗಳು, ಜುಮ್ಕಿಗಳು ಇಲ್ಲಿ ಸಿಗುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+