Search
  • Follow NativePlanet
Share
» »125 ರ ವಸಂತದಲ್ಲಿ ಚಾಮರಾಜಪೇಟೆ!

125 ರ ವಸಂತದಲ್ಲಿ ಚಾಮರಾಜಪೇಟೆ!

ಬೆಂಗಳೂರಿಗೆ ಸಾಂಸ್ಕೃತಿಕವಾಗಿ ಶ್ರೀಮಂತಿಕೆಯನ್ನು ಕರುಣಿಸಿರುವ ಹಲವಾರು ಸಾಂಪ್ರದಾಯಿಕ ಬಡಾವಣೆಗಳ ಪೈಕಿ ಚಾಮರಾಜಪೇಟೆ ಬಡಾವಣೆಯೂ ಸಹ ಒಂದಾಗಿದೆ

By Divya

ಭಾರತದ 5ನೇ ಮಹಾ ನಗರ ಎನ್ನುವ ಖ್ಯಾತಿಗೆ ಒಳಗಾದ ಬೆಂಗಳೂರು ಅನೇಕ ವಿಚಾರಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ವರ್ಷಪೂರ್ತಿ ಆಹ್ಲಾದಕರ ವಾತಾವರಣ ಹೊಂದಿರುವ ಈ ನಗರದಲ್ಲಿ ವಿಶೇಷವಾದ ಪ್ರವಾಸಿ ಸ್ಥಳಗಳನ್ನು ನೋಡಬಹುದು.

ಅದಕ್ಕಾಗಿಯೇ ಬೆಂಗಳೂರನ್ನು ಪ್ರವಾಸಿಗಳ ಸ್ವರ್ಗದ ಊರು ಎಂದು ಕರೆಯುತ್ತಾರೆ. ಇದು ಬರೇ ಪ್ರವಾಸಿಗಳಿಗೆ ಅಷ್ಟೇ ಸೀಮಿತವಾಗಿರದೆ ಕೆಲಸ ಅರಸಿ ಬಂದವರಿಗೂ ಆಶ್ರಯ ನೀಡುತ್ತದೆ. ಹೀಗೆ ಬಂದವರಿಗೆಲ್ಲ ಜಾಗ ನೀಡಿದ ಬೆಂಗಳೂರು ಜನ ಸಾಂದ್ರತೆಯ ಜೊತೆಗೆ ಪ್ರದೇಶ ವ್ಯಾಪ್ತಿ ಹಾಗೂ ಊರಿನ ವಿಶೇಷತೆಗಳನ್ನು ಬೆಳೆಸಿಕೊಳ್ಳುತ್ತಾ ಬಂದಿದೆ. ಅಂತಹ ಒಂದು ಊರಿನ ಬದಲಾವಣೆ ಹಾಗೂ ಪ್ರಸಿದ್ಧಿಗೆ ಕನ್ನಡಿ ಹಿಡಿಯುವ ಪ್ರದೇಶ ಎಂದರೆ ಚಾಮರಾಜಪೇಟೆ.

125 ರ ವಸಂತದಲ್ಲಿ ಚಾಮರಾಜಪೇಟೆ!

ಚಾಮರಾಜಪೇಟೆಯ ರಾಮಕೃಷ್ಣಾಶ್ರಮ, ಚಿತ್ರಕೃಪೆ: Purshi

ಚಾಮರಾಜಪೇಟೆ

ಚಾಮರಾಜಪೇಟೆ ಬೆಂಗಳೂರಿನ ಮಧ್ಯ ಭಾಗದಲ್ಲಿರುವ ಒಂದು ಪ್ರದೇಶ. ಬಸವನಗುಡಿ, ಚಿಕ್ಕಪೇಟೆ, ಮೆಜೆಸ್ಟಿಕ್‍ನ ಗಡಿಯಲ್ಲಿ ಬರುತ್ತದೆ. ಇದು ಬೆಂಗಳೂರಿನ ಅತ್ಯಂತ ಹಳೆಯ ಬಡಾವಣೆ ಎಂದು ಈಗಲೂ ಗುರುತಿಸಲಾಗುತ್ತದೆ. ಇದೀಗ 125ನೇ ವರ್ಷಕ್ಕೆ ಕಾಲಿಟ್ಟಿರುವುದು ಹೆಮ್ಮೆಯ ವಿಚಾರ.

ಇತಿಹಾಸ

1892ರ ಕಾಲದಲ್ಲಿ ಈ ಪ್ರದೇಶವನ್ನು ಮೈಸೂರು ಒಡೆಯರು ಅಭಿವೃದ್ಧಿ ಪಡಿಸಿದ್ದರು ಎನ್ನಲಾಗುತ್ತದೆ. ಈ ಪ್ರದೇಶದ ಆಗು-ಹೋಗುಗಳನ್ನು ನೋಡಿಕೊಳ್ಳುತ್ತ, ಇಲ್ಲಿ ಆಡಳಿತ ನಡೆಸಿದವರು ಚಾಮರಾಜೇಂದ್ರ ಒಡೆಯರು. ಹಾಗಾಗಿಯೇ ಈ ಊರಿಗೆ ಚಾಮರಾಜೇಂದ್ರ ಪೇಟೆ ಎಂದು ಕರೆಯಲಾಯಿತು.

ನಂತರದ ದಿನಗಳಲ್ಲಿ ಅದನ್ನು ಚಾಮರಾಜ್ ಪೇಟೆ ಎಂಬು ಕರೆಯಲು ಪ್ರಾರಂಭಿಸಿದರು. ಆ ಕಾಲದಿಂದ ಇಂದಿನ ವರೆಗೂ ತನ್ನದೇ ಆದ ಖ್ಯಾತಿಯನ್ನು ಉಳಿಸಿಕೊಂಡಿರುವ ಈ ಪೇಟೆಯ ಜನಸಾಂದ್ರತೆಯನ್ನು ಗಮನಿಸಿದರೆ ದಶಕದಿಂದೀಚೆಗೆ ಶೇ.30 ರಷ್ಟು ಹೆಚ್ಚಿದೆ ಎನ್ನಬಹುದು.

125 ರ ವಸಂತದಲ್ಲಿ ಚಾಮರಾಜಪೇಟೆ!

ಕರ್ನಾಟಕ ಭೇಲ್ ಹೌಸ್

ಕೆಂಪಾಂಬುಧಿ ಕೆರೆ

20ನೇ ಶತಮಾನದ ಇತಿಹಾಸವನ್ನು ಹೊಂದಿದ್ದ ಕೆಂಪಾಂಬುಧಿ ಇದೀಗ ತನ್ನ ಒಡಲಲ್ಲಿ ನೀರಿಲ್ಲದೆ ಮುಚ್ಚಿ ಹೋಗಿದೆ. ದಶಕಗಳ ಹಿಂದೆ ಕೆಂಪಾಂಬುಧಿ ಹೆಚ್ಚು ನೀರನ್ನು ಹೊಂದಿರುವ ಕೆರೆಗಳಲ್ಲಿ ಒಂದಾಗಿತ್ತು. ಚಾಮರಾಜ ಪೇಟೆಯ ಆವೃತ್ತಿಯಲ್ಲಿ ಇರುವ ಈ ಕೆರೆ ನೀರನ್ನು ಜನರು ದಿನ ಬಳಕೆಯ ಉಪಯೋಗಕ್ಕೆ ಬಳಸುತ್ತಿದ್ದರು ಎನ್ನಲಾಗುತ್ತದೆ. ನಗರೀಕರಣ ಬೆಳೆದಂತೆ ನೀರಿನ ಮಟ್ಟ ತಗ್ಗಿದ್ದರಿಂದ ಈ ಕೆರೆಯ ಸ್ವಲ್ಪ ಭಾಗ ಮುಚ್ಚಲಾಯಿತು. ಇದೀಗ ಆ ಪ್ರದೇಶದಲ್ಲಿ ಕೆಂಪಾಂಬುಧಿ ಕೆರೆಯ ಚಿಕ್ಕದಾದ ಪಾರ್ಕ್(ಉದ್ಯಾನವನ)ಅನ್ನು ನೋಡಬಹುದಷ್ಟೆ.

ಆಕರ್ಷಣೆಗಳು

ವಿಠ್ಠಲ ದೇಗುಲ, ಶಾರದಾಂಬೆ ದೇವಸ್ಥಾನ, ಕೆಂಪಾಂಬುಧಿ ಕೆರೆ ಪಾರ್ಕ್, ಶ್ರೀಪಾದರಾಜ ಮಠಗಳು ಚಾಮರಾಜ ಪೇಟೆಯಲ್ಲಿಯೇ ಇರುವುದರಿಂದ ಇದರ ಮೆರಗನ್ನು ಹೆಚ್ಚಿಸುತ್ತವೆ.

ಹತ್ತಿರದ ಪ್ರದೇಶ

ಚಾಮರಾಜಪೇಟೆ ಕೇವಲ ತನ್ನ ಮಿತಿಯಲ್ಲಿರುವ ಪ್ರದೇಶಗಳಿಂದಷ್ಟೇ ಅಲ್ಲ ಹತ್ತಿರದಲ್ಲಿರುವ ರಾಮಕೃಷ್ಣಾಶ್ರಮ, ಬಂಡೆ ಮಹಾಕಾಳಿ ದೇಗುಲ, ಗವಿ ಗಂಗಾಧರೇಶ್ವರ ದೇವಸ್ಥಾನದಿಂದಲೂ ಆಕರ್ಷಿತಗೊಂಡಿದೆ.

125 ರ ವಸಂತದಲ್ಲಿ ಚಾಮರಾಜಪೇಟೆ!

ಕರ್ನಾಟಕ ಭೇಲ್ ಹೌಸ್ ತಿಂಡಿ

ರುಚಿಯಾದ ತಿಂಡಿ

ಚಾಮರಾಜ ಪೇಟೆಗೆ ಸುತ್ತಾಡಲು ಬಂದಾಗ ಮರೆಯದೆ ಸವಿಯ ಬೇಕಾದದ್ದು ಕರ್ನಾಟಕ ಬೇಲ್ ಹೌಸ್‍ನಲ್ಲಿ ಸಿಗುವ ಚಾಟ್ಸ್‌ಗಳು

ಬೆಂಗಳೂರಿನ ಝಗಮಗಿಸುವ ಬಡಾವಣೆಗಳು

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+