Search
  • Follow NativePlanet
Share
» »"ಬುಗ್ಯಾಲಗಳು" ಎಂಬ ನೈಸರ್ಗಿಕ ಉದ್ಯಾನಗಳು

"ಬುಗ್ಯಾಲಗಳು" ಎಂಬ ನೈಸರ್ಗಿಕ ಉದ್ಯಾನಗಳು

By Vijay

ಭಾರತದ "ದೇವ ಭೂಮಿ" ಎಂದೆ ಜನಜನಿತವಾಗಿರುವ ಉತ್ತರಾಖಂಡ ರಾಜ್ಯವು ಅಕ್ಷರಶಃ ತನ್ನ ಶ್ರೀಮಂತ ಹಾಗೂ ರಮಣೀಯವಾದ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುತ್ತದೆ. ಹಿಮಾಲಯದ ಪರ್ವತಗಳಿಗೆ ಹತ್ತಿರದಲ್ಲಿರುವುದರಿಂದ ಹಾಗೂ ಸಮುದ್ರ ಮಟ್ಟದಿಂದ ಸಾವಿರಾರು ಮೀಟರುಗಳಷ್ಟು ಎತ್ತರವಿರುವುದರಿಂದ ಇಲ್ಲಿನ ವಾತಾವರಣ ನಿಶ್ಕಲ್ಮಶವಾಗಿದ್ದು, ತಂಪು ತಂಪಾಗಿರುತ್ತದೆ.

ಮಾನವ ನಿರ್ಮಿತ ಕೃತಕ ಉದ್ಯಾನಗಳು ಒಂದು ಆಕರ್ಷಣೆಯಾದರೆ, ಪ್ರಕೃತಿಯಿಂದಲೇ ರಚಿತವಾದ ಉದ್ಯಾನಗಳು ಹೇಗಿರಬೇಡ? ಹೌದು ಇಂತಹ ಕಣ್ಮನ ಸೆಳೆಯುವ ಸುಂದರ ಹಸಿರಿನ ಹುಲ್ಲುಗಾವಲಿನ ಪ್ರದೇಶಗಳು ಈ ರಾಜ್ಯದಲ್ಲಿದ್ದು ವಿದೇಶಿ ಪ್ರವಾಸಿಗರನ್ನೂ ಸಹ ಹೆಚ್ಚಾಗಿ ಆಕರ್ಷಿಸುತ್ತವೆ.

ವಿಶೇಷ ಲೇಖನ : ಭಾರತದ ಎರಡು ಲಗೂನುಗಳ ಕುರಿತು ಗೊತ್ತೆ?

ಉತ್ತರಾಖಂಡ ರಾಜ್ಯದಲ್ಲಿ ಹಿಂದಿ ಭಾಷೆಯು ಪ್ರಚಲಿತದಲ್ಲಿದ್ದರೂ ಕುಮೌನಿ, ಗಡ್ವಾಲಿ ಎಂಬ ಸ್ಥಳೀಯ ಭಾಷೆಗಳು ಹೆಚ್ಚಾಗಿ ಬಳಸಲ್ಪಡುತ್ತವೆ. ಈ ಸ್ಥಳೀಯ ಭಾಷೆಯಲ್ಲಿ ಬುಗ್ಯಾಲ ಎಂದರೆ ಎತ್ತರದಲ್ಲಿರುವ ಹಸಿರು ಹುಲ್ಲುಗಾವಲಿನ ಪ್ರದೇಶ ಎಂಬ ಅರ್ಥ ಕೊಡುತ್ತದೆ. ಹಾಗಾಗಿ ಇಲ್ಲಿನ ಕೆಲವು ಅದ್ಭುತ ಪ್ರವಾಸಿ ಆಕರ್ಷಣೆಯ ಹುಲ್ಲುಗಾವಲಿನ ಪ್ರದೇಶಗಳನ್ನು ಬುಗ್ಯಾಲ ಎಂತಲೆ ಕರೆಯುತ್ತಾರೆ.

ಈ ಬುಗ್ಯಾಲಗಳು ಬಟಾನು ಬಯಲ ಪ್ರದೇಶದಲ್ಲಿ, ಸುತ್ತಲೂ ಪರ್ವತಗಳಿಂದ ಸುತ್ತುವರೆದಿದ್ದು ಒಂದು ರೀತಿಯ ಕಣಿವೆ ಪ್ರದೇಶಗಳ ಹಾಗಿದ್ದು ಸೊಂಪಾಗಿ ಬೆಳೆದು ಕಂಗೊಳಿಸುವ ಹಸಿರು ಹಾಸಿನ ಹುಲ್ಲುಗಳು ಹಾಗೂ ಇತರೆ ಚಿಕ್ಕ ಪುಟ್ಟ ಸಸ್ಯಗಳಿಂದಲೆ ತುಂಬಿರುತ್ತದೆ. ದೊಡ್ಡ ಗಿಡ-ಮರಗಳು ಕಂಡುಬರುವುದು ಅಪರೂಪ.

ನಿಮಗಿಷ್ಟವಾಗಬಹುದಾದ ಲೇಖನ : ಹೂವಿನ ಧಾಮ : ಎಲ್ಲಿ ನೋಡಿದರಲ್ಲಿ ಅರಳಿ ನಿಂತ ಹೂವುಗಳು

ಬಯಲು ಪ್ರದೇಶದ ಮೇಲೆ ಪ್ರಕೃತಿಯೆ ಹಸಿರಿನ ಚಾಪೆಯನ್ನು ಹಾಸಿ ಮನುಷ್ಯನಿಗೆ "ಬಾ ವಿಶ್ರಾಂತಿ ಪಡೆ" ಎನ್ನುವ ಹಾಗೆ ಈ ಬುಗ್ಯಾಲಗಳು ಪ್ರವಾಸಿಗರನ್ನು ಭೇಟಿ ನೀಡಿದವರನ್ನು ಆಹ್ವಾನಿಸುವಂತಿರುತ್ತದೆ. ಈ ಲೇಖನದ ಮೂಲಕ ಉತ್ತರಾಖಂಡಲ್ಲಿರುವ ಕೆಲವು ಸುಂದರ ಬುಗ್ಯಾಲಗಳ ದರ್ಶನ ಮಾಡಿ ಆನಂದ ಹೊಂದಿ.

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ಔಲಿ ಬುಗ್ಯಾಲ : ಈ ಸುಂದರ ಪ್ರಕೃತಿ ಸಹಜ ಉದ್ಯಾನವು ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿದೆ. ಗಡ್ವಾಲ್ ಹಿಮಾಲಯ ಭಾಗದಲ್ಲಿ ಬರುವ ಈ ಹುಲ್ಲುಗಾವಲಿನ ಪ್ರದೇಶವನ್ನು ಭೂಮಿಯ ಮೇಲಿನ ಸ್ವರ್ಗವೆಂದೆ ಸ್ಥಳೀಯವಗಿ ಸಂಭೋದಿಸಲಾಗುತ್ತದೆ.

ಚಿತ್ರಕೃಪೆ: Induhari

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ಈ ಹುಲ್ಲುಗಾವಲು ಪ್ರದೇಶದ ಅದಿ ಬದಿಗಳಲ್ಲಿ ನೂರಾರು ಸಂಖ್ಯೆಯಲ್ಲಿ ಓಕ್ ಹಾಗೂ ದೇವದಾರು ಮರಗಳು ಸೊಂಪಾಗಿ ಬೆಳೆದು ಪ್ರದೇಶದ ಸೌಂದರ್ಯಕ್ಕೆ ಮತ್ತಷ್ಟು ಇಂಬು ನೀಡಿವೆ. ಅಲ್ಲದೆ ಕೈಗೆಟುಕುವಂತೆ ಭಾಸ ಮೂಡಿಸುವ ಎತ್ತರದಲ್ಲಿ ಮೋಡಗಳ ಮಾದಕ ನೋಟವು ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತವೆ.

ಚಿತ್ರಕೃಪೆ: Sandeep Brar Jat

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ಔಲಿ ಬುಗ್ಯಾಲವು ಹಿನ್ನಿಲೆಯಲ್ಲಿ ನಂದಾ ದೇವಿ ಪರ್ವತ, ದುನಗಿರಿ ಹತಿ ಹಾಗೂ ಮನ ಪರ್ವತಗಳನ್ನು ಹೊಂದಿರುವುದರಿಂದ ನೋಡಲು ಬಲು ಆಕರ್ಷಕವಾಗಿದೆ. ಅಲ್ಲದೆ ಚಿತ್ರಪ್ರೀಯ ಪ್ರವಾಸಿಗರಿಗಂತೂ ಇದು ಭುವಿಯ ಮೇಲಿರುವ ಸ್ವರ್ಗದ ಹಾಗೆಯೆ ಗೋಚರಿಸುತ್ತದೆ. ಎತ್ತರದ ಕೇಬಲ್ ಕಾರುಗಳ ಮೇಲೆ ಸಾಗುವಾಗ ಇದರ ಅಂದ ಚೆಂದವು ಖಂಡಿತವಾಗಿಯೂ ಬೆರಗಾಗುವಂತೆ ಮಾಡುತ್ತದೆ.

ಚಿತ್ರಕೃಪೆ: Raghavan Prabhu

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ಪ್ರವಾಸಿಗರ ಬಹು ನೆಚ್ಚಿನ ಚಟುವಟಿಕೆಯಾದ ಕೇಬಲ್ ಕಾರುಗಳ ಮೂಲಕ ಔಲಿಯ ಪ್ರದೇಶದಲ್ಲಿ ಸಾಗುವಾಗ ಸುತ್ತಮುತ್ತಲಿನ ರಮಣೀಯ ದೃಶ್ಯಾವಳಿಗಳು ಪ್ರತಿಯೊಬ್ಬರನ್ನು ರೋಮಾಂಚನಗೊಳಿಸುತ್ತವೆ.

ಚಿತ್ರಕೃಪೆ: Anuj Kumar Garg

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ಬೇದಿನಿ ಬುಗ್ಯಾಲ : ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಹಿಮಾಲಯದ ಅಲ್ಪೈನ್ ಪ್ರಸ್ಥಭೂಮಿ ಇದಾಗಿದೆ. ನೋಡಲು ಅತ್ಯಾಕರ್ಷಕವಾದ ಈ ಬುಗ್ಯಾಲವು ಸಮುದ್ರ ಮಟ್ಟದಿಂದ 11000 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿದೆ.

ಚಿತ್ರಕೃಪೆ: Sandeep Brar Jat

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ಉತ್ತರಾಖಂಡದ ರಹಸ್ಯ ಕೆರೆ ಎಂದೆ ಬಿಂಬಿತವಾದ ರೂಪಕುಂಡ ಸರೋವರಕ್ಕೆ ಹೊಗುವ ಮಾರ್ಗದಲ್ಲಿ ವಾನ್ ಎಂಬ ಹಳ್ಳಿಯ ಸನಿಹ ಹಚ್ಚ ಹಸಿರಿನಿಂದ ಸಂಪದ್ಭರಿತವಾದ ಬೇದಿನಿ ಬುಗ್ಯಾಲವು ಕಂಡುಬರುತ್ತದೆ.

ಚಿತ್ರಕೃಪೆ: Schwiki

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ಈ ಬುಗ್ಯಾಲದಲ್ಲಿ ಕಂಡುಬರುವ ಅಪರುಪದ ಸಸ್ಯಗಳು ಹಾಗೂ ರಂಗು ರಂಗಾದ ವಿಶಿಷ್ಟ ಹೂವುಗಳು ಎಂಥವರನ್ನಾದರೂ ಆಕರ್ಷಿಸಬಲ್ಲುದು.

ಚಿತ್ರಕೃಪೆ: Abhijeet Rane

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ಇನ್ನೊಂದು ವಿಶೇಷವೆಂದರೆ ಈ ಬುಗ್ಯಾಲದಿಂದ ತ್ರಿಶೂಲ್ ಹಾಗೂ ನಂದಾ ಘಂಟಿ ಎಂಬ ಆಕರ್ಷಕ ಹಿಮ ಪರ್ವತಗಳು ಅತ್ಯದ್ಭುತವಾಗಿ ಗೋಚರಿಸುತ್ತವೆ. ಅದರಲ್ಲೂ ವಿಶೇಷವಾಗಿ ತ್ರಿಶೂಲ್ ಪರ್ವತದ ಮೆಲೆ ಸೂರ್ಯೋದಯವಾಗುವಾಗ ಕಂಡುಬರುವ ನೋಟ ವರ್ಣನಾತೀತ.

ಚಿತ್ರಕೃಪೆ: Michael Scalet

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ಈ ಬುಗ್ಯಾಲದಲ್ಲಿರುವ ಬೇದಿನಿ ಕುಂಡ ಎಮ್ಬ ಹೆಸರಿನ ಸರೋವರವು ಸ್ಥಳೀಯವಾಗಿ ಧಾರ್ಮಿಕ ಮಹತ್ವವುಳ್ಳ ಕೆರೆಯಾಗಿದೆ. ಪ್ರತಿ ವರ್ಷ ಸ್ಥಳೀಯರು ಈ ಕೆರೆಯ ಗೌರವಾರ್ಥವಾಗಿ ಉತ್ಸವವೊಂದನ್ನು ಆಯೋಜಿಸುತ್ತಾರೆ ಹಾಗೂ ಬ್ಮಾ ಭಗವತಿ ಮತ್ತಿ ಶಿವನನ್ನು ಆರಾಧಿಸುತ್ತಾರೆ. ಇದರ ಸ್ಫಟಿಕದಂತಹ ಸ್ವಚ್ಛವಾಗಿರುವ ನೀರಿನ ಮೇಲ್ಮೈ ಮೇಲೆ ತ್ರಿಶೂಲ್ ಪರ್ವತದ ಪ್ರತಿಬಿಂಬ ಅತ್ಯಂತ ಆಕರ್ಷಕವಾಗಿರುತ್ತದೆ.

ಚಿತ್ರಕೃಪೆ: Abhijith Shastry

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ತುಂಗನಾಥ ಬುಗ್ಯಾಲ : ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯಲ್ಲಿರುವ ಪಂಚ ಕೇದಾರಗಳ ಪೈಕಿ ಒಂದಾದ ತುಂಗನಾಥವೂ ಸಹ ತನ್ನ ವಲಯದಲ್ಲಿ ಬುಗ್ಯಾಲ ಭೂಮಿಯನ್ನು ಹೊಂದಿದೆ. ಈ ಬುಗ್ಯಾಲವೂ ಸಹ ವೈವಿಧ್ಯಮಯ ಸಸ್ಯ ಹೂವುಗಳಿಂದ ಕೂಡಿದ್ದು ಪ್ರವಾಸಿಗರ ಮೈಮನಗಳನ್ನು ಪುಳಕಿತಗೊಳಿಸುತ್ತದೆ.

ಚಿತ್ರಕೃಪೆ: Travelling Slacker

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ತುಂಗನಾಥದ ವಿಶೇಷವೆಂದರೆ, ಇಲ್ಲಿ ಶಿವನ ದೇವಾಲಯವಿದ್ದು ಇಲ್ಲಿ ನೆಲೆಸಿರುವ ಶಿವನು ಜಗತ್ತಿನಲ್ಲೆ ಅತಿ ಎತ್ತರದಲ್ಲಿ ನೆಲೆಸಿರುವ ದೇವನೆಂಬ ಖ್ಯಾತಿ ಪಡೆದಿದ್ದಾನೆ. ತುಂಗನಾಥಕ್ಕೆ ಭೇಟಿ ನೀಡಲು ಟ್ರಕ್ಕಿಂಗ್ ಮಾಡಬೇಕಿದ್ದು ಆ ಮೂಲಕ ತುಂಗನಾಥ ಬುಗ್ಯಾಲದ ಮಧ್ಯದಲ್ಲೆ ಸಾಗಬೇಕು.

ಚಿತ್ರಕೃಪೆ: Travelling Slacker

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ಹಿಮಪಾತದ ಸಂದರ್ಭದಲ್ಲೂ ಸಹ ತುಂಗನಾಥ ಬುಗ್ಯಾಲವು ಶ್ವೇತ ವರ್ಣದ ಹಾಸಿಗೆಯಿಂದ ಮೈದುಂಬಿಕೊಂಡು ಪ್ರವಾಸಿಗರನ್ನು ಚುಂಬಕದಂತೆ ಆಕರ್ಷಿಸುತ್ತದೆ.

ಚಿತ್ರಕೃಪೆ: Arun Katiyar

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ಉತ್ತರಕಾಶಿ ಜಿಲ್ಲೆಯಲ್ಲಿರುವ ದಯಾರಾ ಬುಗ್ಯಾಲವು ಪ್ರವಾಸಿಗರನ್ನು ಸಾಕಷ್ಟು ಆಕರ್ಷಿಸುವ ಸುಂದರ ಭೂಪ್ರದೇಶವಾಗಿದೆ. ಸ್ಕೀ ಚಟುವಟಿಕೆಯ ವಿಶ್ರಾಂತ ಧಾಮವಾಗಿಯೂ ಇದನ್ನು ರೂಪಿಸಬೇಕೆಂಬುವ ಯೋಜನೆಯನ್ನು ಸರ್ಕಾರ ಹೊಂದಿದೆ. ಇಲ್ಲಿನ ಪರಿಸರ ಸಾಕಷ್ಟು ಮನೋಜ್ಞವಾಗಿದ್ದು ಪ್ರಶಾಂತತೆಯಿಂದ ಕೂಡಿದೆ.

ಚಿತ್ರಕೃಪೆ: Pradeep Kumbhashi

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

ಮನ ಕದಿಯುವ ನೈಸರ್ಗಿಕ ಬುಗ್ಯಾಲಗಳು:

28 ಚ.ಕಿ.ಮೀ ಗಳಷ್ಟು ವಿಸ್ತಾರದಲ್ಲಿ ಆವರಿಸಿರುವ ಈ ಬುಗ್ಯಾಲವನ್ನು ಉತ್ತರಕಾಶಿಯಿಂದ ತಲುಪಬಹುದಾಗಿದೆ. ಮೊದಲಿಗೆ ಬಸ್ರು ಎಂಬ ಗ್ರಾಮಕ್ಕೆ ರಸ್ತೆಯ ಮುಖಾಂತರ ತಲುಪಿ ನಂತರ ಅಲ್ಲಿಂದ ಸುಮಾರು ಆರು ಕಿ.ಮೀ ಗಳಷ್ಟು ಚಾರಣ ಮಾಡುತ್ತ ಈ ಬುಗ್ಯಾಲಕ್ಕೆ ತಲುಪಬಹುದು.

ಚಿತ್ರಕೃಪೆ: Curious Eagle

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+