Search
  • Follow NativePlanet
Share
» »ಭಕ್ತರು ತಮ್ಮ ಕೋರಿಕೆಯನ್ನು ದೇವರ ಕಿವಿಯಲ್ಲಿ ಹೇಳ್ತಾರೆ ಇಲ್ಲಿ!

ಭಕ್ತರು ತಮ್ಮ ಕೋರಿಕೆಯನ್ನು ದೇವರ ಕಿವಿಯಲ್ಲಿ ಹೇಳ್ತಾರೆ ಇಲ್ಲಿ!

ಭಾರತವು ದೇವಾಲಯಗಳ ನೆಲೆಯಾಗಿದೆ. ಈ ದೇಶದಲ್ಲಿ ಮೊದಲ ಪೂಜೆಯನ್ನು ವಿನಾಯಕನಿಗೆ ಅರ್ಪಿಸಲಾಗುತ್ತದೆ. ಇಂದು ನಾವು ಒಂದು ಗಣೇಶನ ದೇವಾಲಯದ ಬಗ್ಗೆ ತಿಳಿಸಲಿದ್ದೇವೆ. ಇಲ್ಲಿಗೆ ಸಾವಿರಾರು ಭಕ್ತರು ದೇಶ, ವಿದೇಶದಿಂದ ಬರುತ್ತಾರೆ. ಕಾರಣ ಇಲ್ಲಿ ನೀವು ನಿಮ್ಮ ಕೋರಿಕೆಗಳನ್ನು ನೇರವಾಗಿ ದೇವರ ಕಿವಿಯಲ್ಲಿ ಹೇಳಬಹುದಂತೆ.

ದೇವರ ದರ್ಶನ

ದೇವರ ದರ್ಶನ

PC: youtube

ಹೆಚ್ಚಿನ ದೇವಾಲಯಗಳಲ್ಲಿ ಗರ್ಭಗುಡಿಯ ಹೊರಗಿನಿಂದಲೇ ದೇವರ ದರ್ಶನ ಪಡೆಯಬೇಕು. ಇನ್ನು ನಿಮ್ಮ ಕೋರಿಕೆಯನ್ನು ದೇವರ ಕಿವಿಯಲ್ಲಿ ಹೇಳಲು ಬಿಡುತ್ತಾರಾ ಹೇಳಿ. ಆದರೆ ಈ ದೇವಾಲಯದಲ್ಲಿ ಪ್ರತಿಯೊಬ್ಬರು ದೇವರ ಕಿವಿಯಲ್ಲಿ ಕೋರಿಕೆಯನ್ನು ಹೇಳಬಹುದು.

ಎಲ್ಲಿದೆ ಈ ದೇವಾಲಯ

ಎಲ್ಲಿದೆ ಈ ದೇವಾಲಯ

PC: youtube

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಬಿಕಾಬಾಲೋ ಗ್ರಾಮದಲ್ಲಿ ಈ ಗಣಪತಿ ದೇವಾಲಯವಿದೆ. ಅತ್ಯಂತ ಶಕ್ತಿಯುತ ದೇವಾಲಯವಾಗಿದೆ. ಇಲ್ಲಿನ ಮೂರ್ತಿಯು ಸ್ವಯಂಭೂ ವಾಗಿದೆ.

ಚಾಲುಕ್ಯರು ನಿರ್ಮಿಸಿದರು

ಚಾಲುಕ್ಯರು ನಿರ್ಮಿಸಿದರು

PC: youtube
ಈ ದೇವಾಲಯವನ್ನು 840 ನೇ ಇಸವಿಯಲ್ಲಿ ಚಾಲುಕ್ಯರು ನಿರ್ಮಿಸಿದ ರು ಎನ್ನಲಾಗುತ್ತದೆ. ಸ್ಥಳೀಯ ಕಥೆಯ ಪ್ರಕಾರ, ಈ ದೇವಾಲಯವನ್ನು ಮೊದಲು ನೆಲಕ್ಕೆ ಇಳಿದಿದೆ ಎಂದು ಹೇಳಲಾಗುತ್ತದೆ.

ಕನಸಿನಲ್ಲಿ ಬಂದ ಗಣೇಶ

ಕನಸಿನಲ್ಲಿ ಬಂದ ಗಣೇಶ

PC: youtube
ಒಂದು ದಿನ ಸ್ವಾಮಿ ನೇರವಾಗಿ ಭಕ್ತನ ಕನಸಿನಲ್ಲಿ ಬಂದು ತನ್ನ ಸ್ಥಳವನ್ನು ವಿವರಿಸಿದರು. ನಂತರ ಭಕ್ತ ತನ್ನ ಸ್ನೇಹಿತರ ಮೂಲಕ ಕನಸಿನಲ್ಲಿ ನಡೆದದ್ದನ್ನು ತಿಳಿಸಿದನು. ಗ್ರಾಮಸ್ಥರು ಒಟ್ಟಾಗಿ ಸೇರಿ ಈ ಈ ಪ್ರತಿಮೆಯನ್ನು ಭೂಮಿಯಿಂದ ಹೊರಗೆ ತೆಗೆದರು ಎನ್ನಲಾಗುತ್ತದೆ.

ಬೆಳೆಯುವ ಗಣೇಶ

ಬೆಳೆಯುವ ಗಣೇಶ

PC: youtube
ನೆಲದಿಂದ ಹೊರಬಂದ ಈ ಗಣೇಶನ ವಿಗ್ರಹವು ದಿನದಿಂದ ದಿನಕ್ಕೆ ಒಂದಿಷ್ಟು ಬೆಳೆಯುತ್ತಿದೆ ಎನ್ನಲಾಗುತ್ತದೆ. ಗಣಪತಿಯ ಈ ಮೂರ್ತಿ ಬೆಳೆಯುತ್ತಿರುವುದನ್ನೂ ನೀವು ಗಮನಿಸಬಹುದಾಗಿದೆ.

ಕಿವಿಯಲ್ಲಿ ಹೇಳುವುದು

ಕಿವಿಯಲ್ಲಿ ಹೇಳುವುದು

PC: youtube

ಇಲ್ಲಿನ ವಿಶೇಷವೆಂದರೆ ಭಕ್ತರು ತಮ್ಮ ಇಚ್ಛೆಯನ್ನು ದೇವರ ಕಿವಿಯಲ್ಲಿ ಹೇಳುತ್ತಾರೆ. ಹಾಗೆ ಹೇಳಿದ ಬೇಡಿಕೆಗಳೆಲ್ಲಾ ಈಡೇರುತ್ತದೆ ಎನ್ನುವುದು ಭಕ್ತರ ನಂಬಿಕೆ. ಇದಕ್ಕೆ ಸಂಬಂಧಿಸಿದ ಅನೇಕ ಪುರಾವೆಗಳೂ ಇವೆ.

ಪಾಪಗಳು ಪರಿಹಾರವಾಗುತ್ತದೆ

ಪಾಪಗಳು ಪರಿಹಾರವಾಗುತ್ತದೆ

PC: youtube
ಅದೇ ರೀತಿ ಇಲ್ಲಿರುವ ನಂದಿ, ಭುಲಿಂಗೇಶ್ವರ ಸ್ವಾಮಿಗಳ ದರ್ಶನ ಪಡೆದ್ರೆಎಲ್ಲಾ ಪಾಪಗಳು ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಭಕ್ತರದ್ದು. ಬಿಕಾವೋ ಗ್ರಾಮದಲ್ಲಿ ಪೂರ್ವ ಚಾಲುಕ್ಯರು ನಿರ್ಮಿಸಿದ ಅನೇಕ ದೇವಾಲಯಗಳಿವೆ.

ಹಳ್ಳಿಗೆ ಹೆಸರು ಬಂದಿದ್ದು

ಹಳ್ಳಿಗೆ ಹೆಸರು ಬಂದಿದ್ದು

PC: youtube
ಈ ಹಳ್ಳಿಯು 849 ಮತ್ತು 892 AD ನಡುವೆ ಪ್ರದೇಶವನ್ನು ಆಳಿದ ಚಾಲುಕ್ಯ ರಾಜ 3 ನೇ ಗುಣ ವಿಜಯಾದಿತ್ಯನ ಹೆಸರಿನಿಂದ ಈ ಗ್ರಾಮಕ್ಕೆ ಆ ಹೆಸರು ಬಂದಿದ್ದು ಎನ್ನಲಾಗುತ್ತದೆ. ಶ್ರೀ ರಾಜಾ ರಾಜೇಶ್ವರಿ ದೇವಸ್ಥಾನ ಮತ್ತು ಶ್ರೀ ಚಂದ್ರಶೇಖರ ಸ್ವಾಮಿ ದೇವಸ್ಥಾನ ಅವರ ಆಳ್ವಿಕೆಯಲ್ಲಿ ಕಟ್ಟಲಾದ ಅನೇಕ ದೇವಾಲಯಗಳಲ್ಲಿ ಒಂದಾಗಿದೆ.

ಗಣಪತಿ ಹೋಮ

ಗಣಪತಿ ಹೋಮ

PC: youtube
ಗಣಪತಿ ಉತ್ಸವವನ್ನು ನಿರ್ವಹಿಸುವಾಗ ಸುಬ್ರಹ್ಮಣ್ಯ ಸ್ವಾಮಿ ಈ ಸಂದರ್ಭದಲ್ಲಿ ಆಚರಿಸುತ್ತಾರೆ. ಇಲ್ಲಿ ಗಣಪತಿ ಗೌರವಾರ್ಪಣೆ ಮನೆಯಲ್ಲಿ ತೊಂದರೆಗಳಿಲ್ಲ ಎಂದು ಹೇಳಲಾಗುತ್ತದೆ. ಇಲ್ಲಿ ಗಣಪತಿ ಹೋಮ ನಡೆಸಿದ್ರೆ ನಿಮ್ಮ ಮನೆಗೆ ಯಾವುದೇ ಕೆಡುಕಾಗುವುದಿಲ್ಲ ಎನ್ನಲಾಗುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+