Search
  • Follow NativePlanet
Share
» »ಭಾರತದ ಯಾವ ಸ್ಥಳದಲ್ಲಿ ಏನು ತಿನ್ನಲೇಬೇಕು?, ಇಲ್ಲಿದೆ ರುಚಿಕರ ಭಕ್ಷ್ಯಗಳ ಫುಲ್ ಡಿಟೇಲ್ಸ್         

ಭಾರತದ ಯಾವ ಸ್ಥಳದಲ್ಲಿ ಏನು ತಿನ್ನಲೇಬೇಕು?, ಇಲ್ಲಿದೆ ರುಚಿಕರ ಭಕ್ಷ್ಯಗಳ ಫುಲ್ ಡಿಟೇಲ್ಸ್         

ಪ್ರವಾಸಿ ಪ್ರಿಯರಿಗೆ ಒಮ್ಮೆ ಇಡೀ ದೇಶ ಸುತ್ತಬೇಕು ಎಂಬ ಆಸೆ ಇರುತ್ತದೆ. ಹೀಗೆ ಪ್ರವಾಸ ಹೊರಡುವಾಗ ನಮ್ಮ ರಾಜ್ಯವಾದರೆ ಓಕೆ. ಆದರೆ ಬೇರೆ ರಾಜ್ಯಗಳಲ್ಲಿ ಎಲ್ಲಿ, ಏನು ತಿನ್ನಬೇಕು ಎಂಬ ಗೊಂದಲವಿರುತ್ತದೆ. ಉತ್ತರದಲ್ಲಿ ಎತ್ತರದ ಪರ್ವತಗಳನ್ನು ಅನ್ವೇಷಿಸುತ್ತಿರಲಿ, ದಕ್ಷಿಣದ ಕಡಲತೀರಗಳಲ್ಲಿ ಸೂರ್ಯನ ಸ್ನಾನ ಮಾಡುತ್ತಿರಲಿ ಒಟ್ಟಾರೆ ನೀವು ಪ್ರಯಾಣಿಸುವಾಗ ಆಹಾರ ಬೇಕೆ ಬೇಕು.

ಆದರೆ ಬೇರೆ ಬೇರೆ ರಾಜ್ಯಗಳಲ್ಲಿ ಸಂಸ್ಕೃತಿಯೊಂದಿಗೆ ಆಹಾರವು ಬದಲಾಗುತ್ತದೆ. ಮಸಾಲೆಯುಕ್ತ ಸಮೋಸಾ, ಸಿಹಿಯಾದ ಲಸ್ಸಿ, ಬಟರ್ ಚಿಕನ್‌, ಬಿರಿಯಾನಿ ಹೀಗೆ ಬಗೆ ಬಗೆಯ ಖಾದ್ಯಗಳು ನಮ್ಮ ಭಾರತದ ವಿವಿಧ ಭಾಗದಲ್ಲಿ ಲಭ್ಯವಿದೆ. ಹಾಗಾಗಿ ಯಾವ ಭಾಗದಲ್ಲಿ ಯಾವ ಆಹಾರ ಜನಪ್ರಿಯ, ಉತ್ತಮವಾದ ತಿನಿಸು ಯಾವುದು ಎಂಬುದನ್ನು ತಿಳಿದುಕೊಳ್ಳೋಣ. ಇಲ್ಲಿ ಅತ್ಯುತ್ತಮ ಭಾರತೀಯ ಭಕ್ಷ್ಯಗಳ ಪಟ್ಟಿಯಿದೆ ನೋಡಿ...

ಈ ಬೆಳಗಿನ ತಿಂಡಿಗಳು ಎಲ್ಲೆಡೆ ಲಭ್ಯ

ಈ ಬೆಳಗಿನ ತಿಂಡಿಗಳು ಎಲ್ಲೆಡೆ ಲಭ್ಯ

ಪಾವ್ ಬಾಜಿ ಮಹಾರಾಷ್ಟ್ರದಲ್ಲಿ ದೊರೆಯುವ ಮಸಾಲೆಯುಕ್ತ ಆಹಾರ. ಆದರೆ ನೀವು ಭಾರತದ ಪ್ರತಿಯೊಂದು ಮೂಲೆಯಲ್ಲಿಯೂ ಕಾಣಬಹುದು, ಪಾವ್ ಬಾಜಿ ಬೆಣ್ಣೆಯ ಬ್ರೆಡ್ (ಪಾವ್) ಮತ್ತು ತರಕಾರಿ ಕರಿ (ಬಾಜಿ) ಅನ್ನು ಕತ್ತರಿಸಿದ ಈರುಳ್ಳಿ ಮತ್ತು ನಿಂಬೆ ತುಂಡುಗಳೊಂದಿಗೆ ಬಡಿಸಲಾಗುತ್ತದೆ. ಇದು ಉಪಹಾರಕ್ಕೆ ಸೂಕ್ತವಾಗಿದೆ. ಇಡ್ಲಿ-ಸಾಂಬಾರ್ ಮತ್ತು ಉತ್ತಪಂ ದಕ್ಷಿಣ ಭಾರತದ ಉಪಹಾರ.

ಸಾಮಾನ್ಯವಾಗಿ ಇಡ್ಲಿ ಜೊತೆಗೆ ಸಾಂಬಾರ್ ಮತ್ತು ಬಿಳಿ ತೆಂಗಿನಕಾಯಿ ಚಟ್ನಿ ಇರುತ್ತದೆ. ಇದು ಭಾರತದಾದ್ಯಂತ ಕಂಡುಬಂದರೂ, ಭಾರತದ ದಕ್ಷಿಣ ರಾಜ್ಯಗಳಲ್ಲಿ ಇದು ಅತ್ಯುತ್ತಮ ರುಚಿಯನ್ನು ಹೊಂದಿರುತ್ತದೆ. ನಿಜವಾದ ಅಗ್ಗದ ಲಘು ಉಪಹಾರ ಎನ್ನಬಹುದು. ಚೋಲೇ ಭಟುರೆ ವಿಶಿಷ್ಟವಾದ ಪಂಜಾಬಿ ಉಪಹಾರವಾಗಿದ್ದು, ದೇಶಾದ್ಯಂತ ವಿಶೇಷವಾಗಿ ಉತ್ತರ ಭಾಗಗಳಲ್ಲಿ ಸ್ಟ್ರೀಟ್ ಫುಡ್ ಆಗಿ ಲಭ್ಯವಿದೆ. ಮಸಾಲ ದೋಸೆ ಎಲ್ಲಾ ಸಮಯದಲ್ಲಿಯೂ ಲಭ್ಯವಿದ್ದು, ಭಾರತದಾದ್ಯಂತ ಕಂಡುಬಂದರೂ, ಇದು ವಿಶೇಷವಾಗಿ ಭಾರತದ ದಕ್ಷಿಣ ರಾಜ್ಯಗಳಲ್ಲಿ ಹೆಚ್ಚು ರುಚಿಯಾಗಿ ಸಿಗುತ್ತದೆ.

ಊಟದ ಸಮಯಕ್ಕೆ ಸಿಗುತ್ತೆ

ಊಟದ ಸಮಯಕ್ಕೆ ಸಿಗುತ್ತೆ

ಸಾಮಾನ್ಯವಾಗಿ ಉತ್ತರ ಭಾರತೀಯ ಥಾಲಿ, ದಕ್ಷಿಣ ಭಾರತೀಯ ಥಾಲಿ ಭಾರತದಾದ್ಯಂತ ಲಭ್ಯವಿದೆ. ಇದನ್ನು ಹೊರತುಪಡಿಸಿ ನೀವು ಸಾಸಿವೆ ಪೇಸ್ಟ್‌ನಲ್ಲಿ ಮಾಡಿದ ಸಾಂಪ್ರದಾಯಿಕ ಮೀನಿನ ಕರಿಯನ್ನು ಸಾಮಾನ್ಯವಾಗಿ ಅನ್ನದೊಂದಿಗೆ ಬಡಿಸಲಾಗುತ್ತದೆ. ಹಾಗಾಗಿ ಕೋಲ್ಕತ್ತಾದಲ್ಲಿ ಮರೆಯದೆ ಮೀನಿನ ಊಟ ಮಾಡಿ. ಜೊತೆಗೆ ಮಚರ್ ಜೋಲ್ ಕೂಡ ಜನಪ್ರಿಯ. ಬಾಟಿ-ಚುರ್ಮಾ ಎಂಬ ರಾಜಸ್ಥಾನಿ ಸ್ಪೆಷಲ್ ಸಖತ್ ಟೇಸ್ಟಿ. ಆದರೆ ತುಂಬಾ ಕೊಬ್ಬು. ಹಾಗೆಯೇ ರಾಜಸ್ಥಾನಿ ಗಟ್ಟೆ ಕಿ ಸಬ್ಜಿಯನ್ನು ಮರೆಯದೆ ಸೇವಿಸಿ.

ರೋಗನ್ ಜೋಶ್ ಇದು ಕಾಶ್ಮೀರಿಯ ಪ್ರಧಾನ ಆಹಾರ. ಮುಖ್ಯವಾಗಿ ಕಾಶ್ಮೀರಿ ಕೆಂಪು ಮೆಣಸಿನಕಾಯಿಗಳು ಭಕ್ಷ್ಯಕ್ಕೆ ವಿಶಿಷ್ಟವಾದ ಕೆಂಪು ಬಣ್ಣವನ್ನು ನೀಡುತ್ತದೆ. ಹೈದರಾಬಾದ್ ಮಟನ್ ಬಿರಿಯಾನಿ ಹಲವು ರೂಪಾಂತರಗಳೊಂದಿಗೆ ಭಾರತದಾದ್ಯಂತ ಲಭ್ಯವಿದೆ. ನೀವು ಕೂಡ ಇದನ್ನು ಮರೆಯದೆ ಸೇವಿಸಿ. ದಾಲ್ ಮಖಾನಿ ಪಂಜಾಬ್‌ನ ಸಿಗ್ನೇಚರ್ ಫುಡ್. ಮಲೈ ಕೋಫ್ತಾ ಉತ್ತರ ಭಾರತದ ವಿಶೇಷತೆಯಾಗಿದೆ. ನಾನ್ ಅಥವಾ ಪರಾಠ, ರುಮಾಲಿ ರೋಟಿ, ಶೀರ್ಮಾಲ್(ಲಕ್ನೋ ಮತ್ತು ಹೈದರಾಬಾದಿ ಭಕ್ಷ್ಯ) ಕೂಡ ನಿಮ್ಮ ಪಟ್ಟಿಯಲ್ಲಿರಲಿ.

ಸಂಜೆ ವೇಳೆ ಚಹಾ ಸಮಯದ ತಿನಿಸುಗಳು

ಸಂಜೆ ವೇಳೆ ಚಹಾ ಸಮಯದ ತಿನಿಸುಗಳು

ಸಮೋಸಾ ಭಾರತದಲ್ಲಿನ ಜನಪ್ರಿಯ ತಿಂಡಿ. ಚಹಾ ಸಮಯದಲ್ಲಿ ಕೊಡಲಾಗುತ್ತದೆ. ಈರುಳ್ಳಿ ಮತ್ತು ಬಟಾಣಿಗಳನ್ನು ಹೊಂದಿರುವ ಆಲೂಗೆಡ್ಡೆ ಸ್ಟಫಿಂಗ್‌ನಿಂದ ಮಾಡಿದ ಹುರಿದ ಅಥವಾ ಬೇಯಿಸಿದ ಈ ತ್ರಿಕೋನಾಕಾರದ ತಿಂಡಿಯನ್ನು ಪುದೀನಾ ಅಥವಾ ಟೊಮೆಟೊ ಚಟ್ನಿಯೊಂದಿಗೆ ಬಡಿಸಲಾಗುತ್ತದೆ.

ಪಾನಿಪುರಿ ಅಥವಾ ಗೋಲ್ ಗಪ್ಪ ಸಹ ಭಾರತದಾದ್ಯಂತ ಲಭ್ಯವಿದೆ. ಭೇಲ್ ಪುರಿ ಕೂಡ ಭಾರತದಾದ್ಯಂತ ಕಂಡುಬರುವ ಪ್ರಸಿದ್ಧ ಚಹಾ ಸಮಯದ ತಿಂಡಿಯಾಗಿದೆ. ವಡಾ ಪಾವ್ ಕೂಡ ದಕ್ಷಿಣ ಭಾರತೀಯ ತಿಂಡಿ. ಸಾಮಾನ್ಯವಾಗಿ ಚಟ್ನಿಯೊಂದಿಗೆ ತಿನ್ನಲಾಗುತ್ತದೆ. ಹಾಗೆಯೇ ಮುಂಬೈನಲ್ಲಿ ಪ್ರಸಿದ್ಧವಾಗಿದೆ.

ಉತ್ತರ ಭಾರತದಲ್ಲಿ ಸೇವಿಸಲೇಬೇಕಾದ ತಿಂಡಿಗಳು

ಉತ್ತರ ಭಾರತದಲ್ಲಿ ಸೇವಿಸಲೇಬೇಕಾದ ತಿಂಡಿಗಳು

ಧೋಕ್ಲಾ ಗುಜರಾತ್‌ನ ತಿಂಡಿ ಅಥವಾ ಉಪಹಾರ. ಇದು ಭಾರತದ ಬಹುತೇಕ ಭಾಗಗಳಲ್ಲಿ ಕಂಡುಬಂದರೂ, ಗುಜರಾತ್‌ನಲ್ಲಿ ಸೇವಿಸುವುದು ಉತ್ತಮ. ಪ್ಯಾಜ್ ಕಿ ಕಚೋರಿ ಉತ್ತರ ಭಾರತದಲ್ಲಿ ಕಂಡುಬರುವ ಜನಪ್ರಿಯ ಉಪಹಾರ ಅಥವಾ ಸಂಜೆಯ ತಿಂಡಿ. ಇದನ್ನು ಪುದೀನಾ ಚಟ್ನಿಯೊಂದಿಗೆ ತಿನ್ನಲಾಗುತ್ತದೆ. ಮಾವ ಕಚೋರಿ ರಾಜಸ್ಥಾನದಲ್ಲಿ ಮಾತ್ರ ಕಂಡುಬರುತ್ತದೆ.

ನೀವು ಜೈಪುರ/ಜೋಧ್‌ಪುರ/ಉದೈಪುರ ಪ್ರವಾಸದಲ್ಲಿದ್ದಾಗ ಸೇವಿಸುವುದನ್ನು ಮರೆಯದಿರಿ. ಹಾಗೆಯೇ ಮಿರ್ಚಿ ವಡಾ. ಇದು ರಾಜಸ್ಥಾನದ ಜನಪ್ರಿಯ ಮಸಾಲೆಯುಕ್ತ ಸ್ಟ್ರೀಟ್ ಫುಡ್. ಮಿರ್ಚಿ ವಡಾ ಸೇವಿಸಲು ಜೋಧ್‌ಪುರ ಉತ್ತಮ ಸ್ಥಳವಾಗಿದೆ. ಕಚೋರಿ ವಿಶೇಷವಾಗಿ ದೆಹಲಿ ಮತ್ತು ಆಗ್ರಾ ಪ್ರದೇಶದಲ್ಲಿ ಉತ್ತರ ಭಾರತೀಯರ ಪ್ರಸಿದ್ಧ ಬೆಳಗಿನ ಉಪಹಾರ. ದಹಿ ವಡಾ ಅನ್ನು ಚಾಟ್ ಆಗಿ ಸೇವಿಸಲಾಗುತ್ತದೆ.

ಉಪ್ಪಿನಕಾಯಿ, ಚಟ್ನಿ, ಹಪ್ಪಳ

ಉಪ್ಪಿನಕಾಯಿ, ಚಟ್ನಿ, ಹಪ್ಪಳ

ಈ ಮೂರು ಭಾರತದಾದ್ಯಂತ ಲಭ್ಯವಿದೆ. ಉಪ್ಪಿನಕಾಯಿ ನಮ್ಮ ಆಹಾರದ ರುಚಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸಾಮಾನ್ಯವಾಗಿ ಉಪ್ಪಿನಕಾಯಿಯನ್ನು ನಿಂಬೆ, ಮಾವಿನಕಾಯಿ, ವಿವಿಧ ತರಕಾರಿಗಳು ಮತ್ತು ಹಣ್ಣುಗಳನ್ನು ಬಳಸಿ ಮಾಡುತ್ತಾರೆ. ಆಯಾ ಪ್ರದೇಶಕ್ಕೆ ಹೋದಂತೆ ಉಪ್ಪಿನಕಾಯಿ ಕೂಡ ವಿವಿಧ ಮಸಾಲೆಗಳ ಸಂಯೋಜನೆಗಳನ್ನು ಹೊಂದಿರುತ್ತವೆ. ಇವುಗಳನ್ನು ದೀರ್ಘಕಾಲದವರೆಗೆ ಸಂರಕ್ಷಿಸಲು ಎಣ್ಣೆಯನ್ನು ಸೇರಿಸುತ್ತಾರೆ.

ಭಾರತದಲ್ಲಿ ಚಟ್ನಿಯನ್ನು ಸಾಮಾನ್ಯವಾಗಿ ಮುಖ್ಯ ಭಕ್ಷ್ಯಗಳೊಂದಿಗೆ ಅಥವಾ ದೋಸೆ, ಇಡ್ಲಿ, ಪೂರಿಯೊಂದಿಗೆ ಬಡಿಸಲಾಗುತ್ತದೆ ಇದು ಕೂಡ ಭಾರತದಾದ್ಯಂತ ಲಭ್ಯವಿದೆ. ಉತ್ತರ ಭಾರತದಲ್ಲಿ ಪಾಪಡ್ ಎಂದೂ ಜನಪ್ರಿಯವಾಗಿರುವ ನಮ್ಮ ಹಪ್ಪಳವನ್ನು ಸಾಮಾನ್ಯವಾಗಿ ಊಟದ ಜೊತೆ ಬಡಿಸಲಾಗುತ್ತದೆ ಅಥವಾ ಸ್ನಾಕ್ಸ್ ಆಗಿಯೂ ಬಳಸಲಾಗುತ್ತದೆ. ಇದಕ್ಕೆ ಕತ್ತರಿಸಿದ ಈರುಳ್ಳಿ, ಕ್ಯಾರೆಟ್‌ಗಳು, ಚಟ್ನಿಗಳು ಅಥವಾ ಇತರ ಮಸಾಲೆ ಕರಿಯೊಂದಿಗೂ ಬಡಿಸಲಾಗುತ್ತದೆ. ಉತ್ತರ ಭಾರತದಲ್ಲಿ ಹೆಚ್ಚಾಗಿ ಲಭ್ಯವಿದೆ.

ರುಚಿಯಾದ ಸಿಹಿತಿಂಡಿಗಳು

ರುಚಿಯಾದ ಸಿಹಿತಿಂಡಿಗಳು

ಪಶ್ಚಿಮ ಬಂಗಾಳದ ಮಿಶ್ತಿ ದೋಯಿ, ಗುಲಾಬ್ ಜಾಮುನ್, ರಸಗುಲ್ಲಾ, ಕುಲ್ಫಿ, ರಸ್ಮಲೈ, ಜಿಲೇಬಿ, ಪೇಡಾ, ಸ್ವೀಟ್ ರಬ್ಡಿ, ಲಡ್ಡು ಎಲ್ಲಾ ಸಮಯದಲ್ಲಿ ದೇಶದ ಯಾವುದೇ ಭಾಗಕ್ಕೆ ಹೋದರೂ ಲಭ್ಯವಿದೆ. ಕ್ಯಾರೆಟ್ ಹಲ್ವಾ ವರ್ಷಪೂರ್ತಿ ಲಭ್ಯವಿದ್ದರೂ ಚಳಿಗಾಲದಲ್ಲಿ ಉತ್ತಮ ರುಚಿಯನ್ನು ಹೊಂದಿರುತ್ತದೆ. ಘೇವರ್ ಇದು ರಾಜಸ್ಥಾನಿ ಸಿಹಿಯಾಗಿದ್ದು, ಡಿಸ್ಕ್-ಆಕಾರದಲ್ಲಿದೆ. ಜುಲೈ - ಆಗಸ್ಟ್ ತಿಂಗಳುಗಳಲ್ಲಿ ಮಾತ್ರ ಲಭ್ಯವಿರುತ್ತದೆ, ಇದು ಉತ್ತರ ಪ್ರದೇಶ, ಹರಿಯಾಣ, ದೆಹಲಿ, ಗುಜರಾತ್, ಮಧ್ಯಪ್ರದೇಶದ ಪಕ್ಕದ ರಾಜ್ಯಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ.

ವೆರೈಟಿ ಪಾನೀಯಗಳು

ವೆರೈಟಿ ಪಾನೀಯಗಳು

ಲಸ್ಸಿ - ಶೇಕ್ ಭಾರತದ ಜನಪ್ರಿಯ ಪಾನೀಯವಾಗಿದೆ. ಆಮ್ ಪನ್ನಾ ಈ ಪಾನೀಯವನ್ನು ಮುಖ್ಯವಾಗಿ ಭಾರತದ ಉತ್ತರ ಭಾಗದಲ್ಲಿ ಸೇವಿಸಲಾಗುತ್ತದೆ. ಇದು ಜಠರಗರುಳಿನ ಸಮಸ್ಯೆಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಈ ಪಾನೀಯವು ವಿಟಮಿನ್ ಬಿ 1 ಮತ್ತು ಬಿ 2 ನ ಉತ್ತಮ ಮೂಲವಾಗಿದೆ ಮತ್ತು ಸಾಕಷ್ಟು ಪ್ರಮಾಣದ ನಿಯಾಸಿನ್ ಅನ್ನು ಹೊಂದಿರುತ್ತದೆ ಹಾಗೂ ಹಸಿ ಮಾವಿನ ಹಣ್ಣಿನಿಂದ ತಯಾರಿಸಲ್ಪಟ್ಟಿರುವುದರಿಂದ ಇದು ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದೆ. ಶಿಕಂಜಿ ಇದು ಉತ್ತರ ಭಾರತದ ಸಾಂಪ್ರದಾಯಿಕ ನಿಂಬೆ ಪಾನಕವಾಗಿದೆ.

ಬೀಡಾ

ಬೀಡಾ

ಇದು ಕೂಡ ಭಾರತದ ಯಾವುದೇ ಭಾಗಕ್ಕೆ ಹೋದರೂ ನಿಮಗೆ ಲಭ್ಯ. ಅಡಿಕೆ ಮತ್ತು ವೀಳ್ಯದೆಲೆಯ ಮಿಶ್ರಣವನ್ನು ಜಗಿಯುವುದು ಸಾವಿರಾರು ವರ್ಷಗಳ ಹಿಂದಿನ ಸಂಪ್ರದಾಯ. ತಂಬಾಕು ಇಲ್ಲದೆ ಸೇವಿಸಿ. ಇದು ಮುಖ್ಯವಾಗಿ ಊಟದ ನಂತರ ಮೌತ್ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+