Search
  • Follow NativePlanet
Share
» »ಹಿಮಗಿರಿ ಸೊಗಸನ್ನು ಒಮ್ಮೆಯಾದರು ನೋಡಿದ್ದೀರಾ?

ಹಿಮಗಿರಿ ಸೊಗಸನ್ನು ಒಮ್ಮೆಯಾದರು ನೋಡಿದ್ದೀರಾ?

By Sowmyabhai

ಟ್ರೆಕ್ಕಿಂಗ್ ಯುವಕರಿಗೆ ಅಚ್ಚು-ಮೆಚ್ಚಿನ ಸಾಹಸ ಪ್ರವಾಸ. ಟ್ರೆಕ್ಕಿಂಗ್‍ನ ಮೇಲೆ ಆಸಕ್ತಿಯನ್ನು ಹೊಂದಿರುವವರು ಅದರಲ್ಲೂ ಕೆಲವರು ಅನುಭವವನ್ನು ಸಾಧಿಸಿದವರು ಹಿಮಾಲಯದಲ್ಲಿನ ಕೆಲವು ಟ್ರೆಕ್ಕಿಂಗ್ ಮಾರ್ಗದಲ್ಲಿ ಪ್ರಯಾಣಿಸಬೇಕು ಎಂದು ಆಸೆಯನ್ನು ಹೊಂದಿರುತ್ತಾರೆ. ಹಿಮಾಲಯದಲ್ಲಿ ಟ್ರೆಕ್ಕಿಂಗ್ ಸ್ವಲ್ಪ ಕಠಿಣ ಎಂದೇ ಹೇಳಬಹುದು. ಅಷ್ಟೇ ಅಲ್ಲದೇ, ವಾತಾವರಣ ಕೂಡ ನಮಗೆ ಪರೀಕ್ಷೆಯನ್ನು ಒಡ್ಡುತ್ತದೆ. ಆದರೆ ನಿಪುಣರ ಸಾಹಯದಿಂದ ಈ ಸೆಪ್ಟೆಂಬರ್‍ನಿಂದ ನವೆಂಬರ್ ತಿಂಗಳ ಸಮಯದಲ್ಲಿ ಇಲ್ಲಿಗೆ ಟ್ರೆಕ್ಕಿಂಗ್‍ಗೆ ಭೇಟಿ ನೀಡುತ್ತಿರುತ್ತಾರೆ. ಈ ಲೇಖನದ ಮೂಲಕ ಹಿಮಾಲಯದಲ್ಲಿನ ಅತಿ ಮುಖ್ಯವಾದ ಟ್ರೆಕ್ಕಿಂಗ್ ಮಾರ್ಗಗಳ ಬಗ್ಗೆ ಸಂಕ್ಷೀಪ್ತವಾಗಿ ಲೇಖನದ ಮೂಲಕ ಮಾಹಿತಿಯನ್ನು ಪಡೆಯಿರಿ.

1.ಅನ್ನಪೂರ್ಣ ಬೆಸ್ ಕ್ಯಾಂಪ್

1.ಅನ್ನಪೂರ್ಣ ಬೆಸ್ ಕ್ಯಾಂಪ್

PC:YOUTUBE

ಹಿಮಾಲಯದಲ್ಲಿನ ಅನ್ನಪೂರ್ಣ ಬೆಸ್ ಕ್ಯಾಂಪ್ ಸೆಪ್ಟೆಂಬರ್ ತಿಂಗಳಿನಲ್ಲಿ ಟ್ರೆಕ್ಕಿಂಗ್ ಮಾಡಲು ಉತ್ತಮವಾದ ಆಯ್ಕೆ. ಸ್ವಲ್ಪ ಕಠಿಣವಾದರು ಕೂಡ ಈ ಮಾರ್ಗದಲ್ಲಿ ಪ್ರಯಾಣ ಮಾಡುವುದು ಜೀವನದಲ್ಲಿ ಎಂದಿಗೂ ಮರೆಯಲಾಗದಂತಹ ಅನುಭೂತಿಯನ್ನು ಉಂಟು ಮಾಡುತ್ತದೆ. ಈ ಸಮಯದಲ್ಲಿ ವಾತಾವರಣ ಅನುಕೂಲಕರವಾಗಿರುವುದೇ ಅಲ್ಲದೇ, ಸೂರ್ಯೋದಯ ಹಾಗು ಸೂರ್ಯಾಸ್ತದ ಸಮಯವನ್ನು ಅತ್ಯಂತ ಸುಂದರವಾದ ದೃಶ್ಯವನ್ನು ಕಣ್ಣಾರೆ ಕಂಡು ಆನಂದಿಸಬಹುದು. ಒಟ್ಟು 9 ದಿನಗಳ ಕಾಲ ಟ್ರೆಕ್ಕಿಂಗ್ ಸಾಗುತ್ತದೆ.

2.ಕುವಾರಿ ಪಾಸ್

2.ಕುವಾರಿ ಪಾಸ್

PC:YOUTUBE

ನಂದಾದೇವಿ ಅಭಯಾರಣ್ಯದಲ್ಲಿ ಕುವಾರಿ ಪಾಸ್ ಟ್ರೆಕ್ಕಿಂಗ್ ಸಾಗುತ್ತದೆ. ಒಟ್ಟು 6 ದಿನಗಳ ಕಾಲ ಸಾಗುವ ಈ ಟ್ರೆಕ್ಕಿಂಗ್ ಅಳಿವಿನಂಚಿನಲ್ಲಿರುವ ಅನೇಕ ಸುಂದರವಾದ ಪಕ್ಷಿಗಳನ್ನು ಹಾಗು ಪ್ರಾಣಿಗಳನ್ನು ಕಾಣಬಹುದು. ಅಷ್ಟೇ ಅಲ್ಲದೇ ಅವುಗಳ ಅವಾಸಗಳನ್ನು ಕೂಡ ಕಾಣಬಹುದು.

3.ಗೋಮುಖ್ ತಪೋವನ್

3.ಗೋಮುಖ್ ತಪೋವನ್

PC:YOUTUBE

ಸ್ವಲ್ಪ ಕಠಿಣವಾದ ಟ್ರೆಕ್ ಮಾರ್ಗ ಈ ಗೋಮುಖ್ ತಪೋವನ. ಹಿಮಾಲಯದಲ್ಲಿನ ಸುಂದರವಾದ ಪರ್ವತ ಶಿಖರದ ಪಕ್ಕದಲ್ಲಿಯೇ ಈ ಭಗೀರಥಿ ಪರ್ವತ ಶಿಖರ ಮಾರ್ಗದಲ್ಲಿ ಈ ಗೋಮುಖ್ ತಪೋವನವಿದೆ. ಇಲ್ಲಿ ಮೌಂಟ್ ಶಿವಲಿಂಗ್, ಮೌಂಟ್ ಸುದರ್ಶನ್, ಮೌಂಟ್ ಪರ್ವತ ಕೂಡ ಇವೆ. ಒಟ್ಟು 8 ದಿನಗಳ ಕಾಲ ಟ್ರೆಕ್ಕಿಂಗ್ ಸಾಗುತ್ತದೆ.

4.ಚಂದ್ರಶೀಲ ಶಿಖರ

4.ಚಂದ್ರಶೀಲ ಶಿಖರ

PC:YOUTUBE

ಉಳಿದ ಹಿಮಾಲಯ ಟ್ರೆಕ್‍ಗಳಿಗೆ ಹೋಲಿಸಿದರೆ ಇದು ಸ್ವಲ್ಪ ಭಿನ್ನವಾಗಿರುತ್ತದೆ. ಸುತ್ತ ಮಂಜಿನ ಪರ್ವತಗಳಿಂದಲೇ ಅಲ್ಲದೇ ಹಚ್ಚ ಹಸಿರಿನಿಂದ ಕೂಡ ವೃಕ್ಷಗಳು ಕೂಡ ಕಾಣಿಸುತ್ತವೆ. ಈ ಮಾರ್ಗದಲ್ಲಿ ನಮಗೆ ಅತ್ಯಂತ ವಿಶಿಷ್ಟವಾದ ಹಿಮಾಲಯ ಪರ್ವತ ಪ್ರದೇಶದಲ್ಲಿ ಮಾತ್ರವೇ ಬೆಳೆಯುವ ರೆಡ್ ರಾಡೋ ಹೂವುಗಳು ಆಹ್ವಾನಿಸುತ್ತವೆ. ಒಟ್ಟು 6 ದಿನಗಳ ಕಾಲ ಟ್ರೆಕ್ ಸಾಗುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+