ಹೆಸರೆ ಸೂಚಿಸುವ ಹಾಗೆ, ಯಾವಾಗಲೂ ಹಿಮದಿಂದ ಕೂಡಿರುವ ಹಿಮಾಚಲ ಪ್ರದೇಶವು ಭವ್ಯ ಭಾರತದ ಉತ್ತರ ದಿಕ್ಕಿನಲ್ಲಿ ನೆಲೆಸಿದೆ. ತನ್ನಲ್ಲಿರುವ ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳಿಂದಾಗಿ ಇಂದು ಹಿಮಾಚಲ ಪ್ರದೇಶವು ಕೇವಲ ಭಾರತ ಮಾತ್ರವಲ್ಲದೆ, ಜಗತ್ತಿನೆಲ್ಲೆಡೆಯಿಂದ ಬಹು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಸಂಕ್ರಾಂತಿ, ಲೋರಿ ಉತ್ಸವದ ಅಂಗವಾಗಿ ಫ್ಲೈಟ್, ಬಸ್ ಮತ್ತು ಹೋಟೆಲ್ ಬುಕ್ಕಿಂಗ್ ಮೇಲೆ 50% ವಿನಾಯಿತಿ ಪಡೆಯಿರಿ
ಇಲ್ಲಿನ ಪ್ರವಾಸೋದ್ಯಮವು ದಿನೆ ದಿನೆ ಬೆಳೆಯುತ್ತಿದ್ದು, ರಾಜ್ಯದ ಬೊಕ್ಕಸಕ್ಕೆ ತನ್ನದೆ ಆದ ಕೊಡುಗೆಯನ್ನು ಹೆಚ್ಚಿನ ಗಾತ್ರದಲ್ಲಿ ನೀಡುತ್ತಿದೆ. ಈ ಬೆಳವಣಿಗೆಗೆ ಪೂರಕವೆಂಬಂತೆ ಬಹುಸಂಖ್ಯೆಯಲ್ಲಿ ಸಣ್ಣಪುಟ್ಟ ರಿಸಾರ್ಟ್ ಗಳು, ಹೋಟೆಲ್ಗಳು ರೂಪಗೊಳ್ಳುತ್ತಿದ್ದು, ಪ್ರವಾಸದ ಒಂದು ಉತ್ಕೃಷ್ಟ ಅನುಭವಕ್ಕೆ ಸಾಕ್ಷಿಯಾಗುವಂತಾಗಿದೆ.
ವಿಶೇಷ ಲೇಖನ : ರುದ್ರಮಯ ನುಬ್ರಾ ಕಣಿವೆ
ಭೌಗೋಳಿಕ ಹಿನ್ನಿಲೆಯಿಂದ ನೋಡಿದಾಗ ಹಿಮಾಚಲ ಪ್ರದೇಶವು ಪೂರ್ವದಲ್ಲಿ ಟಿಬೇಟ್, ಪಶ್ಚಿಮದಲ್ಲಿ ಪಂಜಾಬ್ ಮತ್ತು ಉತ್ತರದಲ್ಲಿ ಜಮ್ಮು ಹಾಗು ಕಾಶ್ಮೀರಗಳಿಂದ ಸುತ್ತುವರೆದಿದೆ. ಇಲ್ಲಿ ಪವಿತ್ರವಾಗಿರುವ ಸಾಕಷ್ಟು ಕೆರೆಗಳನ್ನು ಕಾಣಬಹುದಾಗಿದೆ. ಅವುಗಳಲ್ಲಿ ಕೆಲವು ಕೆರೆಗಳನ್ನು ಟ್ರೆಕ್ ಮಾಡುತ್ತಲೆ ತಲುಪ್ ಬೇಕಾಗಿರುವುದು ವಿಶೇಷ. ಇನ್ನೂ ಹಲವು ಕೆರೆಗಳು ಸಾಕಷ್ಟು ಪೌರಾಣಿಕ ಘಟನೆಗಳ ನಂಟನ್ನೂ ಸಹ ಹೊಂದಿದೆ. ಪ್ರಸ್ತುತ ಲೇಖನದ ಮೂಲಕ ಹಿಮಾಚಲ ಪ್ರದೇಶ ರಾಜ್ಯದ ಕೆಲ ವಿಶಿಷ್ಟ ಸರೋವರ ಅಥವಾ ಕೆರೆಗಳ ಕುರಿತು ತಿಳಿಯೋಣ.
ವಿಶೇಷ ಲೇಖನ : ಸುಂದರ ಸ್ಪಿತಿ ಕಣಿವೆಯ ಅದ್ಭುತ ಸೌಂದರ್ಯ

ಹಿಮಾಚಲದ ಅದ್ಭುತ ಕೆರೆಗಳು:
ನಾಕೊ ಕೆರೆ : ಹಿಮಾಚಲ ಪ್ರದೇಶ ರಾಜ್ಯದ ಕಿನ್ನೌರ್ ಜಿಲ್ಲೆಯ ಉಪಭಾಗವಾದ ಪೂಹ್ ನ ನಾಕೊ ಗ್ರಾಮದಲ್ಲಿದೆ ಈ ಸುಂದರ, ಬಿಡಿಸಿದ ವರ್ಣಚಿತ್ರ ಹಾಗೆ ಮನಸೆಳೆವ ನಾಕೊ ಕೆರೆ. ಸಮುದ್ರ ಮಟ್ಟದಿಂದ ಬರೋಬ್ಬರಿ 12,014 ಅಡಿಗಳಷ್ಟು ಎತ್ತರದಲ್ಲಿ ಇದು ಸ್ಥಿತವಿದೆ.
ಚಿತ್ರಕೃಪೆ: Sayantan Bhattacharya

ಹಿಮಾಚಲದ ಅದ್ಭುತ ಕೆರೆಗಳು:
ಈ ಸುಂದರ ಕೆರೆಯು ಸುತ್ತಲೂ ಪೊಪ್ಲಾರ್ ಮರಗಳು ಹಾಗೂ ಬೌದ್ಧ ದೇವಾಲಯಗಳಿಂದ ಸುತ್ತುವರೆದಿದೆ. ಕೆರೆಯ ಬಳಿ ಒಂದು ಪಾದದ ಗುರುತಿದ್ದು ಬೌದ್ಧ ಸಂತ ಪದ್ಮಸಂಭವರ ಪಾದದ ಗುರು ಇದಾಗಿದೆಯೆಂದು ಇಲ್ಲಿನ ಸ್ಥಳೀಯರು ನಂಬುತಾರೆ.
ಚಿತ್ರಕೃಪೆ: Snotch

ಹಿಮಾಚಲದ ಅದ್ಭುತ ಕೆರೆಗಳು:
ಬೃಘು ಸರೋವರ : ಹಿಮಾಚಲ ಪ್ರದೇಶ ರಾಜ್ಯದ ಕುಲ್ಲು ಜಿಲ್ಲೆಯಲ್ಲಿ ಕಂಡುಬರುವ ಬೃಘು ಸರೋವರವು ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿ ನೆಲೆಸಿರುವ ಹಿಮ ಸರೋವರವಾಗಿದೆ. ಪ್ರಖ್ಯಾತ ರೋಹ್ತಂಗ್ ಪಾಸ್ ನ ಪೂರ್ವಕ್ಕಿರುವ ಈ ಕೆರೆಯು ಗುಲಾಬಾ ಎಂಬ ಗ್ರಾಮದಿಂದ ಕೇವಲ ಆರು ಕಿ.ಮೀ ದೂರದಲ್ಲಿದೆ. ಹಿಂದಿನ ಕಾಲದಲ್ಲಿ ಬೃಘು ಮಹಾಮುನಿಯ ನಂಟನ್ನು ಹೊಂದಿರುವ ಈ ಕೆರೆಯು ಹಿಂದೂ ಭಕ್ತರಲ್ಲಿ ಪವಿತ್ರ ಎಮ್ದು ಪರಿಗಣಿಸಲ್ಪಟ್ಟಿದೆ.
ಚಿತ್ರಕೃಪೆ: DarthTang

ಹಿಮಾಚಲದ ಅದ್ಭುತ ಕೆರೆಗಳು:
ಢಂಕಾರ್ ಕೆರೆ : ಹಿಮಾಚಲ ರಾಜ್ಯದ ಸ್ಪಿತಿ ಜಿಲ್ಲೆಯ ಢಂಕಾರ್ ಎಂಬಲ್ಲಿ ಒಂದು ಬೌದ್ಧ ಮಠವಿದ್ದು ಅಲ್ಲಿಂದ ಚಾರಣದ ಮೂಲಕ ಈ ಸುಂದರ ಕೆರೆಗೆ ತಲುಪಬಹುದು. ಈ ಕೆರೆಯವರೆಗಿನ ಚಾರಣವು ಅದ್ಭುತ ಗಿರಿ ಪರ್ವತಗಳ ಸಾಲುಗಳಿಂದ ಕೂಡಿದ್ದು, ಈ ಕೆರೆಯ ನೀರು ಸಾಕಷ್ಟು ತಂಪಾಗಿರುತ್ತದೆ ಹಾಗೂ ಈಜ ಬೇಕೆನ್ನುವವರಿಗೆ ದೊಡ್ಡ ಸವಾಲೆಸೆಯುತ್ತದೆ.
ಚಿತ್ರಕೃಪೆ: 4ocima

ಹಿಮಾಚಲದ ಅದ್ಭುತ ಕೆರೆಗಳು:
ಕರೇರಿ ಕೆರೆ : ಹಿಮಾಚಲ ಪ್ರದೇಶದ ಧೌಲಾಧರ್ ಪರ್ವತ ಶ್ರೇಣಿಗಳಲ್ಲಿ ಕಂಡುಬರುವ ಶುಭ್ರ ನೀರಿನ ಕೆರೆ ಇದಾಗಿದೆ. ಸುತ್ತಮುತ್ತಲಿರುವ ಹಿಮಚ್ಛಾದಿತ ಪರ್ವತಗಳು ಈ ಕೆರೆಗೆ ಮುಖ್ಯ ನೀರಿನ ಮೂಲವಾಗಿದೆ. ಈ ಕೆರೆಗೆ ಕೇವಲ ಚಾರಣದ ಮೂಲಕ ಮಾತ್ರವೆ ತಲುಪಬಹುದಾಗಿದ್ದು, ಧರ್ಮಶಾಲಾ ಬಳಿಯಿರುವ ಘೇರಾ ಎಂಬ ಗ್ರಾಮವು ಇದಕ್ಕೆ ಹತ್ತಿರವಾಗಿದೆ ಹಾಗೂ ಈ ಗ್ರಾಮವನ್ನು ವಾಹನಗಳ ಮೂಲಕ ತಲುಪಬಹುದಾಗಿದೆ. ಒಂದೊಮ್ಮೆ ಘೇರಾ ತಲುಪಿದರೆ ಅಲ್ಲಿಂದ ಮಾರ್ಗದರ್ಶಿಯ ಸಹಾಯ ಪಡೆದು ಟ್ರೆಕ್ ಮಾಡುತ್ತ ಈ ಕೆರೆಗೆ ತಲುಪಬಹುದು. ಅಷ್ಟೊಂದು ಆಳವಿಲ್ಲದ ಈ ಕೆರೆಯ ನೀರು ಎಷ್ಟೊಂದು ಪಾರದರ್ಶಕವಾಗಿದೆಯೆಂದರೆ ಅದರ ತಳವನ್ನೂ ಸಹ ಸುಲಭವಾಗಿ ನೋಡಬಹುದು. ಈ ಕೆರೆಯ ಬಳಿಯಿರುವ ಬೆಟ್ಟವೊಂದರ ಮೇಲೆ ಶಿವನ ದೇವಸ್ಥಾನವಿದ್ದು ಬೇಕಾದರೆ ತಂಗಲೂ ಬಹುದು.
ಚಿತ್ರಕೃಪೆ: Shalabh

ಹಿಮಾಚಲದ ಅದ್ಭುತ ಕೆರೆಗಳು:
ಟ್ರೆಕ್ ಪ್ರಾರಂಭದ ತಾಣವಾದ ಘೇರಾ ಗ್ರಾಮ. ಧರ್ಮಶಾಲಾದಿಂದ ಇಲ್ಲಿಯವರೆಗೆ ರಸ್ತೆಯ ಮಾರ್ಗವಿದ್ದು ವಾಹನಗಳ ಮೂಲಕ ಬರಬಹುದು. ನಂತರ ಇಲ್ಲಿಂದ ಟ್ರೆಕ್ ಮಾರ್ಗವು ಬೆಟ್ಟ ಪರ್ವತಗಳ ಮಧ್ಯದಿಂದ ಅದ್ಭುತವಾಗಿ ಸಾಗುತ್ತದೆ.
ಚಿತ್ರಕೃಪೆ: Ashish Gupta

ಹಿಮಾಚಲದ ಅದ್ಭುತ ಕೆರೆಗಳು:
ಕರೇರಿ ಕೆರೆಗೆ ಕರೆದೊಯ್ಯುವ ಅದ್ಭುತ ಟ್ರೆಕ್ ಮಾರ್ಗ. ಇದು ಟ್ರೆಕ್ ಮಾರ್ಗವು ಘೇರಾದಿಂದ ಸುಮಾರು 13 ಕಿ.ಮೀ ಗಳಷ್ಟು ದೂರವಿದ್ದು ಅಷ್ಟೊಂದು ಕಷ್ಟಕರವಾಗಿಲ್ಲ.
ಚಿತ್ರಕೃಪೆ: Ashish Gupta

ಹಿಮಾಚಲದ ಅದ್ಭುತ ಕೆರೆಗಳು:
ಕರೇರಿ ಕೆರೆಯ ಸುತ್ತಮುತ್ತಲಿನಲ್ಲಿ ಅಲ್ಲಲ್ಲಿ ಕೆಲವು ಪಾಳು ಬಿದ್ದ ಕೋಣೆಗಳ ರೀತಿಯ ರಚನೆಗಳಿದ್ದು ಊಟ, ತಿಂಡಿಗಳನ್ನು ತಯಾರಿಸಲು ಬಳಸಿಕೊಳ್ಳಲಾಗುತ್ತದೆ.
ಚಿತ್ರಕೃಪೆ: Ashish Gupta

ಹಿಮಾಚಲದ ಅದ್ಭುತ ಕೆರೆಗಳು:
ಕರೇರಿ ಕೆರೆ ಬಳಿಯ ಚಿಕ್ಕ ಬೆಟ್ಟವೊಂದರ ಮೇಲೆ ನಿರ್ಮಿಸಲಾಗಿರುವ ಶಿವನ ಪುಟ ದೇಗುಲ.
ಚಿತ್ರಕೃಪೆ: Ashish Gupta

ಹಿಮಾಚಲದ ಅದ್ಭುತ ಕೆರೆಗಳು:
ಟ್ರೆಕ್ ಪ್ರವಾಸಿಗರ ಅನುಕೂಲಕ್ಕೆಂದು ನಿರ್ಮಿಸಲಾಗಿರುವ ಕೆರೆಯ ಬಳಿಯಿರುವ ಶೌಚಾಲಯ ವ್ಯವಸ್ಥೆ.
ಚಿತ್ರಕೃಪೆ: Ashish Gupta

ಹಿಮಾಚಲದ ಅದ್ಭುತ ಕೆರೆಗಳು:
ಮಹಾರಾಣಾ ಪ್ರತಾಪ ಸಾಗರ : ಪಾಂಗ್ ಜಲಾಶಯ ಎಂತಲೂ ಕರೆಯಲ್ಪಡುವ ಹಿಮಾಚಲ ಪ್ರದೇಶದ ಈ ಸುಂದರ ಕೃತಕ ಕೆರೆಯು ಬಿಯಾಸ್ ನದಿಯಿಂದ ರೂಪಿತವಾಗಿದೆ. ಹಿಮಾಚಲ ಪ್ರದೇಶ ಕಂಗ್ರಾ ಜಿಲ್ಲೆಯ ಶಿವಾಲಿಕ್ ಪರ್ವತ ಶ್ರೇಣಿಗಳಲ್ಲಿ ನಿರ್ಮಿಸಲಾಗಿರುವ ಈ ಜಲಾಶಯ ಅಥವಾ ಕೆರೆಯು ಹಿಮಾಚಲ್ ರಾಜ್ಯದಲ್ಲಿ ಮೀನುಗಳ ಸಾಗಾಟಕ್ಕೆ ಪ್ರಮುಖ ಮೂಲವಾಗಿದೆ.
ಚಿತ್ರಕೃಪೆ: Vikasjariyal

ಹಿಮಾಚಲದ ಅದ್ಭುತ ಕೆರೆಗಳು:
ಹಿಮಾಚಲ ಪ್ರದೇಶ ಚಂಬಾ ಜಿಲ್ಲೆಯ ಭರ್ಮೌರ್ ಪ್ರಾಂತ್ಯದ ಹಿಮಾಲಯ ಶ್ರೇಣಿಗಳಲ್ಲಿರುವ ಪೀರ್ ಪಾಂಜಾಲ್ ವಲಯದಲ್ಲಿ ಸ್ಥಿತವಿರುವ ಕೆರೆಯೆ ಮಣಿಮಹೇಶ ಕೆರೆ. ಇದನ್ನು ದಾಲ್ ಸರೋವರ ಎಂತಲೂ ಕರೆಯಲಾಗುತ್ತದೆ. (ಶ್ರೀನಗರದಲ್ಲಿರುವ ಪ್ರಖ್ಯಾತ ದಾಲ್ ಕೆರೆ ಬೇರೆ) ಈ ಕೆರೆಯ ಭೇಟಿಯನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಎಂದು ನಂಬಲಾಗಿದ್ದು ಹಿಂದೂ ಕ್ಯಾಲೆಂಡರಿನ ಅನ್ವಯ ಭಾಡೋನ್ ಮಾಸದಲ್ಲಿ ಅಂದರ ಅಗಸ್ಟ್/ಸೆಪ್ಟಂಬರ್ ತಿಂಗಳಿನಲ್ಲಿ ಈ ಕೆರೆಗೆ ಯಾತ್ರೆ ಹೊರಡಲಾಗುತ್ತದೆ. ಹಿಮಾಚಲ ಸರ್ಕಾರವು ಈ ಯಾತ್ರೆಯನ್ನು ರಾಜ್ಯದ ಅಧಿಕೃತ ತೀರ್ಥ ಯಾತ್ರೆ ಎಂದು ಘೋಷಿಸಿದೆ. ಮಣಿಮಹೇಶ ಯಾತ್ರೆ ಎಂದು ಕರೆಯಲಾಗುತ್ತದೆ.
ಚಿತ್ರಕೃಪೆ: Vinod Rana

ಹಿಮಾಚಲದ ಅದ್ಭುತ ಕೆರೆಗಳು:
ಪಂಡೋಹ್ ಕೆರೆ : ಹಿಮಾಚಲದ ಮಂಡಿ ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ಪಂಡೋಹ್ ಆಣೆಕಟ್ಟಿನಿಂದ ಈ ಕೆರೆಯು ರೂಪಿತವಾಗಿದೆ. ಈ ಅಣೆಕಟ್ಟೆಯ ವಿಶೇಷವೆಂದರೆ ಇದು ಬಿಯಾಸ್ ನದಿಯ ದಿಕ್ಕನ್ನು ಬದಲಿಸಿ ಅದು ಸಟ್ಲೇಜ್ ನದಿಯಲ್ಲಿ ಸೇರುವ ಹಾಗೆ ಮಾಡುತ್ತದೆ.
ಚಿತ್ರಕೃಪೆ: Biswarup Ganguly

ಹಿಮಾಚಲದ ಅದ್ಭುತ ಕೆರೆಗಳು:
ಪ್ರಶಾರ್ ಕೆರೆ : ಹಿಮಾಚಲ ಪ್ರದೇಶದ ಮಂಡಿ ಪಟ್ಟಣದ ಉತ್ತರಕ್ಕೆ ಸುಮಾರು 49 ಕಿ.ಮೀ ಗಳಷ್ಟು ದೂರದಲ್ಲಿ ಈ ಸುಂದರ ಕೆರೆಯನ್ನು ಕಾಣಬಹುದಾಗಿದೆ. ಪ್ರಶಾರ ಮುನಿಗಳು ಹಿಂದೆ ಈ ಕೆರೆಯ ತಟದಲ್ಲಿ ತಪಗೈದಿದ್ದರಿಂದ ಇದನ್ನು ಪವಿತ್ರ ಕೆರೆ ಎಂದು ಭಾವಿಸಲಾಗುತ್ತದೆ. ಇದರ ತಟದಲ್ಲಿ ದೇವಾಲಯವೊಂದಿದ್ದು ಇದನ್ನು 13 ನೆಯ ಶತಮಾನದಲ್ಲಿ ನಿರ್ಮಿಸಿದರೆನ್ನಲಾಗಿದೆ. ಆಸಕ್ತಿಕರ ವಿಷಯವೆಂದರೆ ಈ ಕೆರೆಯ ಮೇಲೆ ತೇಲುವ ನಡುಗಡ್ಡೆಯೊಂದಿದ್ದು ಇನ್ನೂ ವರೆಗೂ ಇದರ ಸ್ಪಷ್ಟವಾದ ಆಳ ತಿಳಿಯಲಾಗಿಲ್ಲ.

ಹಿಮಾಚಲದ ಅದ್ಭುತ ಕೆರೆಗಳು:
ಫೆಬ್ರುವರಿ 2014 ರಲ್ಲಿ ಚಿತ್ರದಲ್ಲಿ ಸೆರೆ ಹಿಡಿಯಲಾದ ಪ್ರಶಾರ್ ಕೆರೆಯ ನೋಟ.
ಚಿತ್ರಕೃಪೆ: Manojkhurana

ಹಿಮಾಚಲದ ಅದ್ಭುತ ಕೆರೆಗಳು:
ರೇಣುಕಾ ಕೆರೆ : ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿದೆ ಈ ಪವಿತ್ರ ಕೆರೆ. ಪೌರಾಣಿಕ ಕಥೆಯ ಪ್ರಕಾರ, ಪರಶುರಾಮರ ತಾಯಿಯಾದ ರೇಣುಕಾ ದೇವಿಯು ಮಗನಿಂದ ವಧಿಸಲ್ಪಡುವ ಸಂದರ್ಭದಲ್ಲಿ ಕೆರೆಯ ರೂಪ ಹೊಂದಿದಳು ಎನ್ನಲಾಗಿದೆ. ಆದ್ದರಿಂದ ಹಿಂದೂ ಧರ್ಮದಲ್ಲಿ ಈ ಕೆರೆಗೆ ಪ್ರಮುಖವಾದ ಸ್ಥಾನವಿದೆ.
ಚಿತ್ರಕೃಪೆ: Fred Hsu

ಹಿಮಾಚಲದ ಅದ್ಭುತ ಕೆರೆಗಳು:
ರೇವಾಲ್ಸರ್ ಕೆರೆ : ಹಿಮಾಚಲದ ಮಂಡಿ ಜಿಲ್ಲೆಯ ರೇವಾಲ್ಸರ್ ನಲ್ಲಿರುವ ಈ ಕೆರೆಯು ಬೌದ್ಧರಿಗೆ ಪವಿತ್ರವಾದ ಕೆರೆಯಾಗಿದೆ. ಈ ಕೆರೆಯು ಮಹಾಭಾರತದಲ್ಲಿ ಪಾಂಡವರು ಮೇಣದ ಅರಮ್ನೆ ಹೊತ್ತುರಿಯುತ್ತಿದ್ದಾಗ ತಪ್ಪಿಸಿಕೊಂಡುದದರ ಪ್ರಸಂಗದ ನಂಟನ್ನು ಹೊಂದಿದೆ ಎನ್ನಲಾಗಿದೆ. ಬೌದ್ಧರಲ್ಲದೆ ಹಿಂದೂಗಳು ಹಾಗೂ ಸಿಖ್ಖರಿಗೂ ಸಹ ಈ ಕೆರೆ ಪವಿತ್ರವಾಗಿದೆ.
ಚಿತ್ರಕೃಪೆ: Hellknight mnd

ಹಿಮಾಚಲದ ಅದ್ಭುತ ಕೆರೆಗಳು:
ಸೂರ್ಯ ಅಥವಾ ಸೂರಜ್ ತಾಲ್ : ಹಿಮಾಚಲದ ಲಾಹೌಲ್ ಮತ್ತು ಸ್ಪಿತಿ ಕಣಿವೆಯ ಬಾರಾ ಲಾಚಾ ಲಾ ಪಾಸ್ ನಲ್ಲಿ ಈ ಪವಿತ್ರ ಕೆರೆಯು ಸ್ಥಿತವಿದೆ. ಅಕ್ಷರಶಃ ಅರ್ಥೈಸಿದರೆ ಇದನ್ನು ಸೂರ್ಯನ ಕೆರೆ ಎಂದು ಅರ್ಥೈಸಿಕೊಳ್ಳಬಹುದಾಗಿದೆ. ಇದೊಂದು ಹಿಮಕೆರೆಯಾಗಿದ್ದು ಭಾಗ ನದಿಯ ಮೂಲವಾಗಿದೆ.
ಚಿತ್ರಕೃಪೆ: Hiranmay

ಹಿಮಾಚಲದ ಅದ್ಭುತ ಕೆರೆಗಳು:
ಚಂದ್ರ ತಾಲ್ : ಸೂರ್ಯ ತಾಲ್ ನಂತೆಯೆ ಸ್ಪಿತಿ ಜಿಲ್ಲೆಯಲ್ಲಿ ಚಂದ್ರ ತಾಲ್ ಕೆರೆಯನ್ನು ಕಾಣಬಹುದು. ಇದರ ಅರ್ಧ ಚಂದ್ರಾಕೃತಿಯೆ ಇದಕ್ಕೆ ಈ ಹೆಸರು ಬರಲು ಕಾರಣವಾಗಿದೆ. ಪ್ರವಾಸಿಗರ, ಟ್ರೆಕ್ ಮಾಡುವವರ ನೆಚ್ಚಿನ ತಾಣ ಇದಾಗಿದ್ದು ಸ್ಪಿತಿಯ ಕುಂಜುಮ್ ಪಾಸ್ ಮೂಲಕ ಟ್ರೆಕ್ ಮಾಡುತ್ತ ಇಲ್ಲಿಗೆ ತಲುಪಬಹುದಾಗಿದೆ.
ಚಿತ್ರಕೃಪೆ: Christopher L Walker


Click it and Unblock the Notifications
















