Search
  • Follow NativePlanet
Share
» »ಬೆಂಗಳೂರು - ಮಡಿಕೇರಿ – ಕಬಿನಿ ಪ್ರವಾಸ ಪ್ಲಾನ್‌ ಮಾಡಿ…ಸ್ಮರಣೀಯ ಕ್ಷಣಗಳನ್ನು ಕಳೆಯಿರಿ

ಬೆಂಗಳೂರು - ಮಡಿಕೇರಿ – ಕಬಿನಿ ಪ್ರವಾಸ ಪ್ಲಾನ್‌ ಮಾಡಿ…ಸ್ಮರಣೀಯ ಕ್ಷಣಗಳನ್ನು ಕಳೆಯಿರಿ

ಕಬಿನಿ ಕರ್ನಾಟಕದ ಅತ್ಯಂತ ಸುಂದರವಾದ ಮತ್ತು ಅತ್ಯುತ್ತಮ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಕಬಿನಿ ನದಿ ಕಾವೇರಿಯ ಉಪನದಿ. ಈ ಸ್ಥಳವು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ, ಬಂಡೀಪುರ ಅರಣ್ಯ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪರಿಧಿಯಲ್ಲಿದೆ. ಈ ಮೊದಲೇ ಹೇಳಿದ ಹಾಗೆ ಕಬಿನಿಯು ಕರ್ನಾಟಕದ ಒಂದು ಸೊಗಸಾದ, ರೋಮಾಂಚನಕಾರಿ ಸ್ಥಳವಾಗಿದ್ದು, ನೀವು ಸಾಹಸ ಉತ್ಸಾಹಿಗಳಾಗಿದ್ದರೂ, ಪ್ರಾಣಿಗಳನ್ನು ಪ್ರೀತಿಸುವವರಾಗಿದ್ದರೂ ಅಥವಾ ವಿರಾಮವನ್ನು ಇಷ್ಟಪಡುವವರಾಗಿದ್ದರೂ ನಿಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಭೇಟಿ ನೀಡಬೇಕು.

ಪರಿಪೂರ್ಣ ಹವಾಮಾನ, ಸಾಕಷ್ಟು ಚಟುವಟಿಕೆಗಳು, ಕ್ಯಾಂಪಿಂಗ್ ಆಯ್ಕೆಗಳು ಮತ್ತು ಹೆಚ್ಚಿನವುಗಳು ಕಬಿನಿಯನ್ನು ಪ್ರವಾಸಿಗರಿಗೆ ಪ್ರಿಯವಾಗಿಸುತ್ತವೆ. ಇಲ್ಲಿ ವನ್ಯಜೀವಿ ವೀಕ್ಷಣೆಗೆ ಬೇಸಿಗೆ ಉತ್ತಮವಾಗಿದೆ. ಇದಲ್ಲದೆ, ನೀವು ನದಿಯಲ್ಲಿ ಅಥವಾ ಹತ್ತಿರದ ಕಾಡುಗಳಲ್ಲಿ, ಸಫಾರಿಯಲ್ಲಿ ಹುಲಿಗಳು, ಚಿರತೆಗಳು, ಕಾಡು ಆನೆಗಳು, ವಿವಿಧ ಜಾತಿಯ ಜಿಂಕೆಗಳು, ಸಾಕಷ್ಟು ಪಕ್ಷಿಗಳನ್ನು ಸಹ ಕಾಣಬಹುದು. ಹಾಗಾದರೆ ಬನ್ನಿ ನೀವು ಕಬಿನಿಗೆ ಹೊರಡುವ ಪ್ಲಾನ್‌ ಮಾಡಿದರೆ ಏನೆಲ್ಲಾ ನೋಬಹುದು? ಹೇಗೆ ತೆರಳಬಹುದು? ನೋಡೋಣ....

ಎಷ್ಟು ದಿನ?

ಬೆಂಗಳೂರಿನಿಂದ ಕಬಿನಿಗೆ ನೀವು ಮೂರು ದಿನಗಳ ಪ್ಲಾನ್‌ ಮಾಡಿಕೊಳ್ಳಬಹುದು. ಹೇಗಿದ್ದರೂ ಈಗ ಆಗಸ್ಟ್‌ 15 ಸಮೀಪದಲ್ಲಿದ್ದು, ಕಡಿಮೆ ಎಂದರೂ ಮೂರು ದಿನಗಳ ರಜೆಗೆ ಕೊರತೆಯಿಲ್ಲ. ಈ ಅವಧಿಯಲ್ಲಿ ನೀವು ಕಬಿನಿಯ ವನ್ಯಜೀವಿಗಳನ್ನು ಅನ್ವೇಷಿಸುವುದಲ್ಲದೆ, ಆಹ್ಲಾದಕರವಾದ ಗಾಳಿಯೊಂದಿಗೆ ಪ್ರಕೃತಿ ಚಿಕಿತ್ಸೆ ತೆಗೆದುಕೊಳ್ಳಬಹುದು.

coorg3

ಮೊದಲನೆಯ ದಿನ

ನೀವು ಬೇರೆಡೆಯಿಂದ ಬೆಂಗಳೂರು ವಿಮಾನ ನಿಲ್ದಾಣ ಅಥವಾ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ನಂತರ ಹೋಟೆಲ್‌ ಅಥವಾ ನಿಮ್ಮ ಪರಿಚಯಸ್ಥರ ಮನೆಯಲ್ಲಿ ಉಳಿದು ರಿಫ್ರೆಶ್‌ ಆಗಿ. ಫ್ರೆಶ್‌ ಆದ ನಂತರ ಅಂದೇ ಬೆಂಗಳೂರಿನಿಂದ ನೀವು ಕಬಿನಿಗೆ ತೆರಳಿ. ಕಬಿನಿ ತಲುಪಿದ ನಂತರ, ನೀವು ನಿಮ್ಮ ಹೋಟೆಲ್‌ಗೆ ಚೆಕ್ ಇನ್ ಮಾಡಿ ಮತ್ತು ವಿಶ್ರಾಂತಿ ಪಡೆಯಿರಿ. ಸರ್ಕಾರದ ನಿರ್ದೇಶನದ ಪ್ರಕಾರ, ಎಲ್ಲಾ ಭಾರತೀಯ ನಾಗರಿಕರು ಹೋಟೆಲ್‌ನಲ್ಲಿ ಚೆಕ್-ಇನ್ ಮಾಡುವ ಹಂತದಲ್ಲಿ ಡ್ರೈವಿಂಗ್ ಲೈಸೆನ್ಸ್/ಪ್ಯಾನ್ ಕಾರ್ಡ್/ವೋಟರ್ ಐಡಿ ಕಾರ್ಡ್/ಪಾಸ್‌ಪೋರ್ಟ್‌ನಂತಹ ಅನುಮೋದಿತ ಗುರುತು ಚೀಟಿ ಕೊಡಬೇಕಾಗುತ್ತದೆ. ಸಂಸ್ಥೆಯ ಬುಕಿಂಗ್ ಸ್ವೀಕರಿಸುವ ಸಮಯದಲ್ಲಿ ಕೊಠಡಿಗಳು ಲಭ್ಯತೆಗೆ ಒಳಪಟ್ಟಿರುತ್ತವೆ. ಹೋಟೆಲ್‌ಗಳು ಲಭ್ಯವಿಲ್ಲದಿದ್ದಲ್ಲಿ, ಅದೇ ರೀತಿಯ/ಗುಣಮಟ್ಟದ ಹೋಟೆಲ್‌ಗಳು ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.

ಸಂಜೆ ವೇಳೆ ನೀವು ಮಾರ್ಗದರ್ಶಿ ಸಹಾಯ ಪಡೆದು ನೇಚರ್‌ ವಾಕಿಂಗ್, ಕೊರಾಕಲ್ ರೈಡಿಂಗ್ ಮತ್ತು ಇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಆಗ ಸಂಜೆ ತಡವಾಗಿರುತ್ತದೆ. ಪುನಃ ನೀವು ಉಳಿದಿರುವ ಹೋಟೆಲ್‌ಗೆ ಹಿಂತಿರುಗಿ, ರಾತ್ರಿ ಅಲ್ಲೇ ಉಳಿಯಿರಿ.

ಎರಡನೇ ದಿನ

ಬೆಳಗ್ಗೆ ಉಪಹಾರದ ನಂತರ, ನೀವು ಇಲ್ಲಿನ ಬುಡಕಟ್ಟು ಹಳ್ಳಿಯ ಜನರೊಂದಿಗೆ ಸಂವಹನ ನಡೆಸಬಹುದು, ಅವರ ಬಳಿ ಸ್ನೇಹಪರ ಆನೆಗಳಿವೆ. ಇದಲ್ಲದೆ, ನೀವು ಸುತ್ತಮುತ್ತಲಿನ ಇತರ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅಥವಾ ಜಂಗಲ್ ಸಫಾರಿಗೆ ಹೋಗಲು ಆಯ್ಕೆ ಮಾಡಬಹುದು. ಅಲ್ಲದೆ, ನಿಮ್ಮ ರೆಸಾರ್ಟ್‌ಗೆ ಹಿಂತಿರುಗಲು ನೀವು ಬಯಸಿದರೆ ಕಾಫಿಯನ್ನು ಹೀರುತ್ತಾ ಅಲ್ಲಿನ ಪ್ರಕೃತಿಯನ್ನು ಸವಿದು ದಿನವು ಕೊನೆಗೊಳ್ಳುತ್ತಿದ್ದಂತೆ ರಾತ್ರಿಯಿಡೀ ರೆಸಾರ್ಟ್‌ನಲ್ಲಿ ಕಳೆಯಿರಿ.

madikeri

ಮೂರನೇ ದಿನ

ಬೆಳಗಿನ ಉಪಾಹಾರದ ನಂತರ ಹೋಟೆಲ್‌ನಿಂದ ಚೆಕ್ ಔಟ್ ಮಾಡಿ, ವಿಮಾನ/ರೈಲು ಹತ್ತಲು ತೆರಳಿ.

ಬೆಂಗಳೂರು-ಮಡಿಕೇರಿ-ಕಬಿನಿ

ಬೆಂಗಳೂರಿನಿಂದ ಮಡಿಕೇರಿ ಆ ನಂತರ ಕಬಿನಿ ಪ್ರವಾಸ ಪ್ಲಾನ್‌ ಮಾಡಿದರೆ ಒಟ್ಟಾರೆ ಐದು ದಿನ ಪ್ಲಾನ್‌ ಮಾಡಬಹುದು. ಈ ಅವಧಿಯಲ್ಲಿ ಕೂರ್ಗ್‌ನ ಸಮೃದ್ಧ ಹಸಿರು, ಜನಪ್ರಿಯ ಕಬಿನಿ ರಾಷ್ಟ್ರೀಯ ಉದ್ಯಾನವನದಲ್ಲಿ ಜಂಗಲ್ ಸಫಾರಿ, ಕಬಿನಿಯ ಸ್ಥಳೀಯ ಬುಡಕಟ್ಟುಗಳೊಂದಿಗೆ ಸಂವಹನ, ಮಡಿಕೇರಿಯಲ್ಲಿ ಪಕ್ಷಿ ವೀಕ್ಷಣೆಯಲ್ಲಿ ಭಾಗಿಯಾಗಬಹುದು.

kabini safari

ಬೆಂಗಳೂರು - ಮಡಿಕೇರಿ

ನೀವು ನೇರವಾಗಿ ನಿಮ್ಮ ಸ್ಥಳದಿಂದ ಕೂರ್ಗ್‌ಗೆ ತೆರಳಬಹುದು. ಅಥವಾ ಬೆಂಗಳೂರಿಗೆ ಬಂದು ಕೂರ್ಗ್‌ಗೆ ಪ್ರಯಾಣಿಸಬಹುದು. ಕೂರ್ಗ್‌ ಹೋಟೆಲ್‌ನಲ್ಲಿ ಚೆಕ್-ಇನ್ ಮಾಡಿ, ರಾತ್ರಿ ಅಲ್ಲೇ ಉಳಿಯಿರಿ. ಎರಡನೇಯ ದಿನ ಉಪಹಾರದೊಂದಿಗೆ ಪ್ರಾರಂಭವಾಗುತ್ತದೆ. ಕೂರ್ಗ್ ಪಕ್ಷಿ ವೀಕ್ಷಕರಿಗೆ ಒಂದು ವರದಾನವಾಗಿದೆ, ಈ ಸ್ಥಳವು 25 ಪ್ರತಿಶತಕ್ಕಿಂತಲೂ ಹೆಚ್ಚಿನ ಪಕ್ಷಿ ಪ್ರಭೇದಗಳಿಗೆ ಆವಾಸಸ್ಥಾನವಾಗಿದೆ. ಅಲ್ಲದೆ, ನೀವು ಪಟ್ಟಣದ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಅನ್ವೇಷಿಸಬಹುದು. ನೀವು ಬಯಸಿದರೆ ರೆಸಾರ್ಟ್‌ನಲ್ಲಿ ಉಳಿಯಲು ಆಯ್ಕೆ ಮಾಡಬಹುದು. ಸಂಜೆ ಕಾಫಿ ಮತ್ತು ಮಸಾಲೆ ತೋಟಕ್ಕೆ ಭೇಟಿ ನೀಡಬಹುದು. ದಿನವು ಕೊನೆಗೊಳ್ಳುತ್ತಿದ್ದಂತೆ, ನೀವು ರಾತ್ರಿಯಿಡೀ ರೆಸಾರ್ಟ್‌ನಲ್ಲಿ ಇರಿ.

kabini wildlife

ಮಡಿಕೇರಿ - ಕಬಿನಿ

ಮೂರನೇಯ ದಿನ ಬೆಳಗಿನ ಉಪಾಹಾರದ ನಂತರ, ನೀವು ಹೋಟೆಲ್‌ನಿಂದ ಚೆಕ್ ಔಟ್ ಮಾಡಿ, ಕಬಿನಿಗೆ ಹೊರಡಿ. ಈ ಎರಡೂವರೆ ಗಂಟೆಗಳ ರೋಡ್ ಟ್ರಿಪ್ ನೀವು ಯಾವಾಗಲೂ ಹಿಂತಿರುಗಿ ನೋಡುವಂತಿರುತ್ತದೆ. ನೀವು ಕಬಿನಿ ತಲುಪುತ್ತಿದ್ದಂತೆ, ರೆಸಾರ್ಟ್‌ನಲ್ಲಿ ಚೆಕ್ ಇನ್ ಮಾಡಿ ಮತ್ತು ರಾತ್ರಿ ರೆಸ್ಟ್‌ ಮಾಡಿ. ನಾಲ್ಕನೇಯ ದಿನ ಉಪಹಾರದೊಂದಿಗೆ ದಿನವನ್ನು ಪ್ರಾರಂಭಿಸಿ, ಬಿಡುವಿನ ಸಮಯದಲ್ಲಿ ಇಲ್ಲಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ನೀವು ನೇಚರ್‌ ವಾಕಿಂಗ್ ಸವಿಯಬಹುದು. ಸ್ಥಳೀಯರು ಮತ್ತು ಆನೆಗಳೊಂದಿಗೆ ಸಂವಹನ ನಡೆಸಲು ಬುಡಕಟ್ಟು ಗ್ರಾಮಕ್ಕೆ ಭೇಟಿ ನೀಡುವುದು, ಜಂಗಲ್ ಸಫಾರಿ ಅಥವಾ ಕೊರಾಕಲ್ ಸವಾರಿ ಮಾಡುವುದು ಅಥವಾ ರೆಸಾರ್ಟ್‌ಗೆ ಹಿಂತಿರುಗಿ, ಸುತ್ತಮುತ್ತಲಿನ ಸ್ಥಳವನ್ನು ಆನಂದಿಸುವಂತಹ ಹಲವಾರು ಇತರ ಆಯ್ಕೆಗಳಿವೆ. ನಂತರ ನೀವು ರೆಸಾರ್ಟ್‌ನಲ್ಲಿ ರಾತ್ರಿಯಿಡಿ ಕಳೆಯಿರಿ. ಐದನೇಯ ದಿನ ಬೆಳಗಿನ ಉಪಾಹಾರದ ನಂತರ ಹೋಟೆಲ್‌ನಿಂದ ಚೆಕ್ ಔಟ್ ಮಾಡಿ, ವಿಮಾನ/ರೈಲು ಹತ್ತಲು ನಿಲ್ದಾಣಕ್ಕೆ ತೆರಳಿ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+