ಹಿಂದೂ ಪುರಾಣಗಳ ಪ್ರಕಾರ ದಾಕ್ಷಾಯಿಣಿ, ಸತಿದೇವಿ ಶರೀರ ಭಾಗಗಳಾಗಿ ಅನೇಕ ಪ್ರಾಂತ್ಯಗಳಲ್ಲಿ ಬಿದ್ದಿದ್ದು ಆ ಜಾಗವೇ ಶಕ್ತಿಪೀಠಗಳಾಗಿವೆ. ಶಕ್ತಿಪೀಠಗಳಾಗಿ ಪ್ರಸಿದ್ಧಿ ಹೊಂದಿದೆ ಎನ್ನಲಾಗುತ್ತದೆ. ಅಂತಹ ಶಕ್ತಿಪೀಠಗಳಲ್ಲಿ ಒಂದು ಗುಜರಾತ್‌ನಲ್ಲಿದೆ. ಇಲ್ಲಿ ದೇವಿಯ ದೇವಸ್ಥಾನವೇನೋ ಇದೆ . ಆದರೆ ವಿಗ್ರಹವಿಲ್ಲ. ಇಲ್ಲಿ ಬರುವ ಭಕ್ತರು ಭಕ್ತಿಯಿಂದ ಕಣ್ಣು ಮುಚ್ಚಿಕೊಂಡು ಪ್ರಾರ್ಥನೆ ಮಾಡಬೇಕು. ಇಲ್ಲವಾದಲ್ಲಿ ಕಷ್ಟಗಳು ಎದುರಾಗುತ್ತವೆ ಎನ್ನುವುದು ಭಕ್ತರ ನಂಬಿಕೆ. ಈ ಶಕ್ತಿ ಪೀಠದ ಸ್ವಲ್ಪ ದೂರದಲ್ಲಿ ರಾಜಸ್ಥಾನ ಪರ್ಯಾಟನಾ ಸ್ಥಳವಿದೆ. ಮೌಂಟ್ ಅಬುವಿದೆ. ಹಾಗೆಯೇ ಈ ದೇವಸ್ಥಾನಕ್ಕೆ ಸುಮಾರು 5 ಕಿ.ಮೀ ಸಮೀಪದಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ.

51ಭಾಗಗಳಾದ ಸತಿಯ ದೇಹ
PC: Unknown
ದಕ್ಷಯಾಗದಲ್ಲಿ ತನ್ನ ಗಂಡನಿಗೆ ಅವಮಾನವಾಯಿತೆಂದು ದಾಕ್ಷಾಯಿನಿ ಅಗ್ನಿ ಕುಂಡದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಪತ್ನಿವಿಯೋಗದಿಂದ ಕ್ರೋದಿತನಾದ ಶಿವ ಸತಿಯ ಶರೀರವನ್ನು ಹೆಗಲ ಮೇಲೆ ಹೊತ್ತು ರುದ್ರತಾಂಡವ ಆಡುತ್ತಾನೆ. ಶಿವ ಹೀಗೆ ಮಾಡುತ್ತಿದ್ದರೆ ಪರಿಸ್ಥಿತಿ ಕೈ ತಪ್ಪಿಹೋಗುತ್ತೆಂದು ವಿಷ್ಣುವು ಸತಿಯ ದೇಹವನ್ನು ತನ್ನ ಸುದರ್ಶನ ಚಕ್ರದಿಂದ ತುಂಡರಿಸುತ್ತಾನೆ. ಅವು 51 ಭಾಗಗಳಾಗಿ ಬೀಳುತ್ತವೆ.

ಸತಿಯ ಹೃದಯ
PC: anurag agnihotri
ವಿಷ್ಣುವು ಸತಿಯ ಶರೀರವನ್ನು ತುಂಡರಿಸುವಾಗ ಸತಿಯ ದೇಹದ ಒಂದೊಂದು ಭಾಗವು ಒಂದೊಂದು ಸ್ಥಳದಲ್ಲಿ ಬಿದ್ದಿದೆ. ಸತಿಯ ಹೃದಯದ ಭಾಗವು ಗುಜರಾತ್‌ನ ಈ ಸ್ಥಳದಲ್ಲಿ ಬಿದ್ದಿದೆ ಎನ್ನಲಾಗಿದೆ.

ಬೀಜಾಕ್ಷರದಲ್ಲಿ ಬರೆಯಲಾಗಿರುವ ಯಂತ್ರ
PC: youtube
ಇಲ್ಲಿ ದೇವಿಯ ಯಾವುದೇ ಪ್ರತಿಮೆ ಇಲ್ಲ . ಬದಲಾಗಿ ಬೀಜಾಕ್ಷರದಿಂದ ಬರೆದಿರುವ ಯಂತ್ರವಿದೆ. ಇದನ್ನು ಭಕ್ತರು ನೇರವಾಗಿ ನೋಡುವಂತಿಲ್ಲ. ಬದಲಾಗಿ ಕಣ್ಣಿಗೆ ಬಿಳಿ ಬಟ್ಟೆಯನ್ನು ಕಟ್ಟಿ ನೋಡುತ್ತಾರೆ. ಈ ದೇವಸ್ಥಾನವನ್ನು ನಿರ್ಮಿಸಿ ಸುಮಾರು 150 ವರ್ಷ ವಾಯಿತು ಎನ್ನಲಾಗುತ್ತದೆ.

ಇನ್ನೊಂದು ಕಥೆಯ ಪ್ರಕಾರ
PC: KartikMistry
ದೇವಿಯು ಗಬ್ಬರ್ ಎನ್ನುವ ಗುಡ್ಡದ ಮೇಲೆ ಸ್ಥಿತಳಾಗಿದ್ದಳು. ರಾಜನು ಆ ದೇವಿಯನ್ನು ತನ್ನ ಅಂತಪುರಕ್ಕೆ ಕರೆಸಬೇಕೆಂದು ಅಂಬಾಜಿ ದೇವಿಯ ತಪಸ್ಸು ಮಾಡುತ್ತಾನೆ. ತಪಸ್ಸಿಗೆ ಮೆಚ್ಚಿದ ದೇವಿಯು ಒಂದು ಷರತ್ತಿನ ಮೂಲಕ ಬರಲು ಒಪ್ಪುತ್ತಾಳೆ.ಅದೇನೆಂದರೆ ರಾಜನು ಹಿಂದಿರುಗಿ ನೋಡಬಾರದು. ಒಂದು ವೇಳೆ ನೋಡಿದ್ದಲ್ಲಿ ಅಲ್ಲೇ ಪ್ರತಿಷ್ಟಾಪನೆಯಾಗುವುದಾಗಿ ಹೇಳುತ್ತಾಳೆ. ಆದರೆ ರಾಜ ಹಿಂದಿರುಗಿ ನೋಡುತ್ತಾನೆ. ಪರಿಣಾಮವಾಗಿ ದೇವಿಯು ಅಲ್ಲೇ ನೆಲೆಯೂರುತ್ತಾಳೆ. ರಾಜನು ದೇವಿಗಾಗಿ ಅಲ್ಲಿಯೇ ಮಂದಿರವನ್ನು ನಿರ್ಮಿಸುತ್ತಾನೆ.

ಮೌಂಟ್ ಅಬುವಿಗೆ ಸಮೀಪದಲ್ಲಿದೆ
ಈ ದೇವಾಲಯವು ಮೌಂಟ್ ಅಬುವಿಗೆ ಬಹಳ ಸಮೀಪದಲ್ಲಿದೆ. ಹಾಗಾಗಿ ಮೌಂಟ್ ಅಬುವಿನ ವೀಕ್ಷಣೆಗೆ ಬರುವ ಪ್ರವಾಸಿಗರು ಈ ದೇವಸ್ಥಾನವನ್ನು ಭೇಟಿ ನೀಡುತ್ತಾರೆ. ಅಂಬಾಜಿ ದೇವಾಲಯದ ಸುತ್ತಲೂ ಅನೇಕ ಪ್ರೇಕ್ಷಣೀಯ ಸ್ಥಳಗಳಿವಡ. ಗಬ್ಬರ್ ಹಿಲ್ಸ್ ಹಾಗೂ ರಾಜಸ್ಥಾನದ ಇನ್ನಿತರ ಸ್ಥಳಗಳನ್ನು ಕಾಣಬಹುದು.


Click it and Unblock the Notifications

















