Search
  • Follow NativePlanet
Share
» »ಅಚ್ಚರಿ ಮೂಡಿಸುವ ಪ್ರಾಕೃತಿಕ ಕಲ್ಲಿನ ರಚನೆಗಳು

ಅಚ್ಚರಿ ಮೂಡಿಸುವ ಪ್ರಾಕೃತಿಕ ಕಲ್ಲಿನ ರಚನೆಗಳು

By Vijay

ಮಾನವನಿಗೆ ಬೇಕಾಗುವ ಮೂಲಭೂತ ಅವಶ್ಯಕತೆಗಳಿಗಿಂತಲೂ ಸಾಕಷ್ಟು ಪ್ರಮಾಣದಲ್ಲಿ ಕೊಡುಗೆಗಳನ್ನು ನೀಡಿದೆ ಪ್ರಕೃತಿ. ಪ್ರಕೃತಿಯ ಅದೇಷ್ಟೊ ಸೋಜಿಗಗಳು ಇಂದಿಗೂ ಸಹ ಮಾನವನ ಕುತೂಹಲಗಳಿಗೆ ಕಾರಣವಾಗಿವೆ. ಇದೆ ರೀತಿಯಾಗಿ ಪ್ರಕೃತಿ ಮಾತೆಯ ಕೈಗಳಿಂದ ಕೆತ್ತಲ್ಪಟ್ಟ ಕೆಲವು ಶಿಲೆಗಳು ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತವೆ. ಅಂತಹ ಕೆಲವು ಪ್ರಾಕೃತಿಕ ಶಿಲಾ ರಚನೆಗಳ ಕುರಿತು ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿದೆ.

ದೇಶದ ವಿವಿಧ ಭಾಗಗಳಲ್ಲಿರುವ ಈ ಪ್ರಾಕೃತಿಕ ವಿಸ್ಮಯಗಳು ಅದ್ಭುತವಾದ ಪ್ರವಾಸಿ ಆಕರ್ಷಣೆಗಳಾಗಿಯೂ ಹೆಸರುವಾಸಿಯಾಗಿವೆ. ನೀವೇನಾದರೂ ಈ ವಿಸ್ಮಯಗಳಿರುವ ಸ್ಥಳಗಳಿಗೆ ಭೇಟಿ ನೀಡಿದರೆ ಖಂಡಿತವಾಗಿಯೂ ಇವುಗಳನ್ನು ನೋಡಲು ಮರೆಯದಿರಿ ಎಂಬುದು ನಮ್ಮ ಆಶಯ.

ಇನ್ನೂ ಕೆಲವು ಪ್ರಾಕೃತಿಕ ವಿಸ್ಮಯಗಳ ಕುರಿತು ತಿಳಿಯಬೇಕೆ?

ಕಪ್ಪೆ ಕಲ್ಲು (ಟೋಡ್ ರಾಕ್):

ಕಪ್ಪೆ ಕಲ್ಲು (ಟೋಡ್ ರಾಕ್):

ರಾಜಸ್ಥಾನ ರಾಜ್ಯದ ಗಿರಿಧಾಮ ಪ್ರದೇಶವಾದು ಮೌಂಟ್ ಅಬುವಿನಲ್ಲಿ ಈ ಕಲ್ಲನ್ನು ಕಾಣಬಹುದು. ಮೌಂಟ್ ಅಬುವಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲೊಂದಾದ ನಕ್ಕಿ ಕೆರೆಯ ಬಳಿ ಈ ವಿಚಿತ್ರವಾದ ಕಲ್ಲಿನ ರಚನೆಯಿದೆ. ಈ ಕಲ್ಲಿನ ರಚನೆಯು ಹಾರಲು ಸಿದ್ಧವಾಗಿರುವ ಕಪ್ಪೆಯಂತೆ ಗೋಚರಿಸುವುದರಿಂದ ಇದಕ್ಕೆ ಟೋಡ್ ರಾಕ್ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Kondephy

ಯಾಣದ ವಿಶೀಷ್ಟ ಕಲ್ಲಿನ ಬೆಟ್ಟ:

ಯಾಣದ ವಿಶೀಷ್ಟ ಕಲ್ಲಿನ ಬೆಟ್ಟ:

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಯಾಣ ಹಳ್ಳಿಯು ಅಸಮಾನ್ಯವಾದ ಕಲ್ಲಿನ ರಚನೆಯ ಬೆಟ್ಟಗಳಿಗಾಗಿ ಹೆಸರುವಾಸಿಯಾಗಿದೆ. ಒಟ್ಟಾರೆಯಾಗಿ ಎರಡು ಬೆಟ್ಟಗಳು ಇಲ್ಲಿದ್ದು ಅವುಗಳನ್ನು ಭೈರವೇಶ್ವರ ಶಿಖರ ಹಾಗು ಮೋಹಿನಿ ಶಿಖರಗಳೆಂದು ಕರೆಯಲಾಗುತ್ತದೆ. ಯಾಣ ಗ್ರಾಮವನ್ನು ಸುಲಭವಗಿ ತಲುಪಬಹುದಾಗಿದ್ದು ಕಾರವಾರ ನಗರದಿಂದ 60 ಕಿ.ಮೀ, ಶಿರಸಿಯಿಂದ 40 ಕಿ.ಮೀ ಹಾಗೂ ಕುಮಟಾದಿಂದ 20 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Doc.aneesh

ಅಮೃತಶಿಲೆ ಬೆಟ್ಟ:

ಅಮೃತಶಿಲೆ ಬೆಟ್ಟ:

ಮಧ್ಯ ಪ್ರದೇಶದ ಜಬಲ್ಪುರ್ ನಗರದ ಬಳಿ ಹರಿದಿರುವ ನದಿಯ ದಂಡೆಯಗುಂಟ ಸಂಗಮರಿ ಕಲ್ಲಿನ ಈ ಬೆಟ್ಟಗಳನ್ನು ಕಾಣಬಹುದು. ನಗರದ ಪ್ರಮುಖ ಹಾಗೂ ಜನಪ್ರಿಯವಾದ ಪ್ರವಾಸಿ ಆಕರ್ಷಣೆಯಾಗಿರುವ ಈ ಬೆಟ್ಟಗಳ ಪ್ರದೇಶವನ್ನು ಭೇದಘಾಟ್ ಅಥವಾ ಮಾರ್ಬಲ್ ರಾಕ್ಸ್ ಎಂಬ ಹೆಸರಿನಿಂದ ಕರೆಯುತ್ತಾರೆ.

ಚಿತ್ರಕೃಪೆ: Sandyadav080

ಗಿಲ್ಬರ್ಟ್ ಬೆಟ್ಟ:

ಗಿಲ್ಬರ್ಟ್ ಬೆಟ್ಟ:

200 ಅಡಿಗಳಷ್ಟು ಎತ್ತರದ ಏಕ ಶಿಲಾ ರಚನೆಯ ಈ ಬೆಟ್ಟ ಮುಂಬೈ ನಗರದ ಅಂಧೇರಿ ಎಂಬ ಪ್ರದೇಶದಲ್ಲಿದೆ. ಭೂ ಒಡಲಿನ ಲಾವಾ ರಸವು ಹೊರಚಿಮ್ಮಿ ಈ ಬೃಹತ್ ಬೆಟ್ಟದ ರಚನೆಯಾಗಿದೆ. ಅದು ಸುಮಾರು 65 ಮಿಲಿಯನ್ ವರ್ಷಗಳ ಹಿಂದೆ.

ಚಿತ್ರಕೃಪೆ: Madhav Pai

ಫ್ಯಾಂಟಮ್ ರಾಕ್:

ಫ್ಯಾಂಟಮ್ ರಾಕ್:

ಫ್ಯಾಂಟಮ್ ಎಂಬುದು ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್ ತರಹದ ಒಂದು ಮಹಾನಾಯಕನ ಜನಪ್ರಿಯ ಕಾಲ್ಪನಿಕ ಪಾತ್ರವಾಗಿದೆ. ಇವನು ದುಷ್ಟರನ್ನು ಸೆದೆ ಬಡಿಯುವಾಗ ವಿಚಿತ್ರವಾದ ವೇಷ ಭೂಷಣಗಳನ್ನು ತೊಡುತ್ತಿರುತ್ತಾನೆ. ಆ ರೀತಿಯಾದ ವೇಷ ಭೂಷಣದಲ್ಲಿ ಫ್ಯಾಂಟಮ್ ಹೇಗೆ ಕಾಣಿಸುವನೋ ಅದೇ ರೀತಿಯಲ್ಲಿ ಈ ಕಲ್ಲು ಸ್ವಾಭಾವಿಕವಾಗಿ ರಚನೆಯಾಗಿರುವುದರಿಂದ ಇದನ್ನು ಫ್ಯಾಂಟಮ್ ಕಲ್ಲು ಎಂದು ಕರೆಯಲಾಗುತ್ತದೆ. ಪ್ರವಾಸಿ ಆಕರ್ಷಣೆಯಾದ ಈ ಕಲ್ಲು ಇರುವುದು ಕೇರಳದ ವಯನಾಡಿನಲ್ಲಿ.

ಚಿತ್ರಕೃಪೆ: Vinayaraj

ಸೇಂಟ್ ಮೇರಿ ದ್ವೀಪದ ಅಗ್ನಿ ಶಿಲೆಗಳು:

ಸೇಂಟ್ ಮೇರಿ ದ್ವೀಪದ ಅಗ್ನಿ ಶಿಲೆಗಳು:

ಕೊಕೊನಟ್ ದ್ವೀಪ ಎಂತಲೂ ಜನಪ್ರಿಯವಾಗಿರುವ ಸೇಂಟ್ ಮೇರೀಸ್ ದ್ವೀಪಗಳು ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಾಗಿವೆ. ಉಡುಪಿಯ ಮಲ್ಪೆ ಕಡಲ ತೀರದಿಂದ ತುಸು ದೂರದಲ್ಲಿರುವ ಅರೇಬಿಯನ್ ಸಮುದ್ರದ ಈ ದ್ವೀಪಗಳು ಖಂಬದ ಆಕಾರದಲ್ಲಿ ರಚಿತವಾಗಿರುವ ಪುರಾತನ ಅಗ್ನಿ ಶಿಲೆಗಳಿಗಾಗಿ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Man On Mission

ಪಿಲ್ಲರ್ ರಾಕ್ಸ್:

ಪಿಲ್ಲರ್ ರಾಕ್ಸ್:

ತಮಿಳುನಾಡಿನ ಕೊಡೈಕೆನಲ್ ನಲ್ಲಿ ಮೂರು ಬೃಹತ್ ಶಿಖರಗಳ ಈ ತ್ರಿವಳಿ ಪಿಲ್ಲರ್ ಕಲ್ಲು ಬೆಟ್ಟಗಳನ್ನು ಕಾಣಬಹುದು. ಸುಂದರ ದೃಶ್ಯಾವಳಿಗಳನ್ನು ನೋಡಲು ಪಕ್ಕದಲ್ಲೆ ಉತ್ತಮವಾದ ಸಾರ್ವಜನಿಕ ಉದ್ಯಾನವನ್ನೂ ಕಾಣಬಹುದು.

ಚಿತ್ರಕೃಪೆ: Dhanil K

ಪ್ರಾಕೃತಿಕ ಕಮಾನು:

ಪ್ರಾಕೃತಿಕ ಕಮಾನು:

ಸುಪ್ರಸಿದ್ಧ ಶ್ರೀ ಕ್ಷೇತ್ರವಾದ ತಿರುಮಲದಲ್ಲಿ ಕಂಡು ಬರುವ ಈ ಪ್ರಾಕೃತಿಕ ಕಮಾನು ಒಂದು ವಿಸ್ಮಯವೆ ಹೌದು. ಮಾನವನ ಇಂತಿಷ್ಟು ಸಹಾಯವಿಲ್ಲದೆ ಭವ್ಯವಾಗಿ ಕಮಾನಿನ ಆಕಾರದಲ್ಲಿ ನಿರ್ಮಿತವಾಗಿರುವ ಈ ರಚನೆ ಭೌಗೋಳಿಕ ವಿಸ್ಮಯ.

ಚಿತ್ರಕೃಪೆ: B.Sridhar Raju

ಸಮತೋಲನ ಕಲ್ಲು 1:

ಸಮತೋಲನ ಕಲ್ಲು 1:

ಅಚ್ಚರಿ ಮೂಡಿಸುವಂತಹ, ತನ್ನಷ್ಟಕ್ಕೆ ತಾನೆ ಸಮತೋಲನ ಕಾಯ್ದುಕೊಂಡಿರುವ ಪ್ರವಾಸಿ ಆಕರ್ಷಣೆಗಳಾಗಿ ಅನ್ವೇಷಿಸಲ್ಪಟ್ಟ ಎರಡು ಬಂಡೆಗಳನ್ನು ಭಾರತದಲ್ಲಿ (ಗಮನಕ್ಕೆ ಬಾರದ ಅದೇಷ್ಟೋ ಇರಲೂಬಹುದು!) ಕಾಣಬಹುದು. ಒಂದು ಬಂಡೆಯು ಮಹಾಬಲಿಪುರಂನಲ್ಲಿ ಕೃಷ್ಣನ ಬೆಣ್ಣೆಯ ಉಂಡೆ ಎಂದು ಪ್ರಸಿದ್ಧವಾಗಿದ್ದರೆ ಇನ್ನೊಂದನ್ನು ಜಬಲ್ಪುರ್ ನಲ್ಲಿ ಕಾಣಬಹುದು.

ಚಿತ್ರಕೃಪೆ: Procsilas Moscas

ಸಮತೋಲನ ಕಲ್ಲು 2 :

ಸಮತೋಲನ ಕಲ್ಲು 2 :

ಈ ಸಮತೋಲನದ ಕಲ್ಲನ್ನು ಮಧ್ಯ ಪ್ರದೇಶದ ಜಬಲ್ಪುರ್ ನಲ್ಲಿರುವ ಮದನ್ ಮಹಲ್ ಕೋಟೆಯ ಬಳಿ ಕಾಣಬಹುದು.

ಚಿತ್ರಕೃಪೆ: Mityrocks

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+