Search
  • Follow NativePlanet
Share
» »ಅಕ್ಕುಲಂ ಸರೋವರದ ಹಿನ್ನೀರಿನ ತಾಣದಲ್ಲಿನ ಪಿಕ್ನಿಕ್ ಅನುಭವ ಸೂಪರ್

ಅಕ್ಕುಲಂ ಸರೋವರದ ಹಿನ್ನೀರಿನ ತಾಣದಲ್ಲಿನ ಪಿಕ್ನಿಕ್ ಅನುಭವ ಸೂಪರ್

ಅಕ್ಕುಲಮ್ ಸರೋವರದ ದಡದಲ್ಲಿದೆ, ಅಕ್ಕುಲಂ ಟೂರಿಸ್ಟ್ ವಿಲೇಜ್ ದಕ್ಷಿಣ ಕೇರಳದ ಕೆಲವು ಪಿಕ್ನಿಕ್ ತಾಣಗಳನ್ನು ಹೊಂದಿದೆ. ಇದು ಶಾಂತ ಮತ್ತು ಪ್ರಶಾಂತ ವಾತಾವರಣದೊಂದಿಗೆ ಸುಂದರವಾದ ಹಿನ್ನೀರಿನ ತಾಣವಾಗಿದೆ.

ಅಕ್ಕುಲಂ ಟೂರಿಸ್ಟ್ ವಿಲೇಜ್ ಅಕ್ಕಲಮ್ ಸರೋವರದ ದಂಡೆಯಲ್ಲಿರುವ ಒಂದು ಅದ್ಭುತವಾದ ಹಿನ್ನೀರಿನ ತಾಣವಾಗಿದೆ . ಜೊತೆಗೆ ಒಂದು ಸುಂದರ ಪಿಕ್ನಿಕ್ ತಾಣವಾಗಿದೆ. ಶಾಂತ ಮತ್ತು ಪ್ರಶಾಂತವಾದ ವಾತಾವರಣವು ಈ ಗ್ರಾಮವನ್ನು ಪ್ರವಾಸಿಗರಿಗೆ ಸೂಕ್ತ ಸ್ಥಳವಾಗಿ ಮಾಡಿದೆ. ನಿಸ್ಸಂದೇಹವಾಗಿ ಇದು ಒಂದು ಆಕರ್ಷಕ ಅನುಭವವಾಗಿದೆ.

ಅಕ್ಕುಲಂ ಟೂರಿಸ್ಟ್ ವಿಲೇಜ್

ಅಕ್ಕುಲಂ ಟೂರಿಸ್ಟ್ ವಿಲೇಜ್

PC:Mohan K
ಅಕ್ಕುಲಮ್ ಸರೋವರದ ದಡದಲ್ಲಿದೆ, ಅಕ್ಕುಲಂ ಟೂರಿಸ್ಟ್ ವಿಲೇಜ್ ದಕ್ಷಿಣ ಕೇರಳದ ಕೆಲವು ಪಿಕ್ನಿಕ್ ತಾಣಗಳನ್ನು ಹೊಂದಿದೆ. ಇದು ಶಾಂತ ಮತ್ತು ಪ್ರಶಾಂತ ವಾತಾವರಣದೊಂದಿಗೆ ಸುಂದರವಾದ ಹಿನ್ನೀರಿನ ತಾಣವಾಗಿದೆ. ಇದು ತಿರುವನಂತಪುರಂ ನಗರದಿಂದ 10 ಕಿ.ಮೀ ದೂರದಲ್ಲಿದೆ. ಹಲವಾರು ಬೋಟಿಂಗ್ ಆಯ್ಕೆಗಳನ್ನು ಹೊಂದಿದೆ. ಇದು ಸುಸಜ್ಜಿತ ಮಕ್ಕಳ ಉದ್ಯಾನವನ, ಪ್ಯಾಡಲ್ ಪೂಲ್ ಮತ್ತು ವಯಸ್ಕರಿಗೆ ಈಜುಕೊಳವನ್ನು ಹೊಂದಿದೆ.

ಬೋಟ್ ಕ್ಲಬ್

ಬೋಟ್ ಕ್ಲಬ್

PC: Akhilan
ಬೋಟ್ ಕ್ಲಬ್ 1989 ರಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಬೋಯಿಂಗ್ ಸೌಕರ್ಯಗಳು ಉತ್ತಮವಾಗಿದೆ. ಸ್ಪೀಡ್ ದೋಣಿಗಳು, ಸಫಾರಿ ದೋಣಿಗಳು, ಪೆಡಲ್ ದೋಣಿಗಳು ಮತ್ತು ಅಕ್ಕುಲಮ್ ನಿಂದ ವೆಲಿ ಟೂರಿಸ್ಟ್ ವಿಲೇಜ್‌ವರೆಗೆ ರೋ ಬೋಟ್‌ಗಳನ್ನು ನೀವು ಕಾಣಬಹುದು. ಪೆಡಲ್ ದೋಣಿಗಳನ್ನು ನೀವು ಪ್ರಯತ್ನಿಸಬಹುದು. ಒಂದು ಸಾಂಪ್ರದಾಯಿಕ ಶೈಲಿಯ ಕೆಟ್ಟುವಲ್ಲಮ್ (ಮನೆ ದೋಣಿ) ಕೂಡ ರಾತ್ರಿಯ ತಂಗುವಿಕೆಗೆ ಲಭ್ಯವಿದೆ.

 ಸಂಗೀತ ಕಾರಂಜಿ

ಸಂಗೀತ ಕಾರಂಜಿ

PC:Suniltg
ವಯಸ್ಕರಿಗೆ ಸ್ವಿಮಿಂಗ್ ಸೂಟ್ ಕಡ್ಡಾಯವಾಗಿದೆ. ಗ್ಲೈಡರ್ ಮತ್ತು ಇತರ ಆಟದ ಸೌಲಭ್ಯಗಳೊಂದಿಗೆ ಸುಸಜ್ಜಿತವಾಗಿರುವ ಈಜುಕೊಳ ಇದೆ. ಹೊಸ ಸವಾರಿ ಮತ್ತು ಸ್ನ್ಯಾಕ್ ಬಾರ್ ಹೊಂದಿರುವ ಮಕ್ಕಳ ಪಾರ್ಕ್ ಮಕ್ಕಳ ಆಸಕ್ತಿದಾಯಕ ಆಕರ್ಷಣೆಯಾಗಿದೆ. ಹೊಸದಾಗಿ ಆರಂಭವಾದ ಸಂಗೀತ ಕಾರಂಜಿ ವಯಸ್ಕರು ಮತ್ತು ಮಕ್ಕಳಿಗಾಗಿ ಹೆಚ್ಚುವರಿ ಆಕರ್ಷಣೆಯಾಗಿದೆ.

ಮಾದಕ ಔಷಧ ಸೇವನೆ ನಿಷೇಧ

ಮಾದಕ ಔಷಧ ಸೇವನೆ ನಿಷೇಧ

PC: Akhilan
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ಅನುಮತಿಸಲಾಗುವುದಿಲ್ಲ. ಮಾದಕ ಔಷಧಗಳನ್ನು ಹೊಂದಿರುವ ವ್ಯಕ್ತಿಯ ಮೇಲೆ ಭಾರಿ ದಂಡ ಮತ್ತು ಜೈಲು ವಿಧಿಸಲಾಗುವುದು. ಜನರು ಸಾರ್ವಜನಿಕ ಸ್ಥಳಗಳಲ್ಲಿ ಚುಂಬನ ಮಾಡುವುದನ್ನು ಇಲ್ಲಿ ನಿಷೇಧಿಸಲಾಗಿದೆ. ಆಯುರ್ವೇದ ಮಸಾಜ್‌ಗಳಿಗೆ ಹೋಗುವಾಗ, ಪ್ರವಾಸೋದ್ಯಮ ಇಲಾಖೆ ಅನುಮೋದಿಸಿದ ಆಯುರ್ವೇದ ಕೇಂದ್ರದವೋ ಅಲ್ಲವೋ ಎನ್ನುವುದನ್ನು ತಿಳಿದುಕೊಳ್ಳಿ.

ಲೈಫ್‌ ಜಾಕೆಟ್‌

ಲೈಫ್‌ ಜಾಕೆಟ್‌

PC:Easa Shamih
ದೋಣಿಗಳಲ್ಲಿ ಸವಾರಿ ಮಾಡುವಾಗ ಲೈಫ್‌ ಜಾಕೆಟ್‌ಗಳನ್ನು ಧರಿಸುವುದು ಉತ್ತಮ. ಯಾವುದೇ ತುರ್ತುಸ್ಥಿತಿಗಾಗಿ ಸ್ಥಳೀಯ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಯನ್ನು ಇಟ್ಟುಕೊಳ್ಳಿ. ಪೆಡಲ್ ಬೋಟ್ ಅಥವಾ ರೋ ಬೋಟ್‌ನಲ್ಲಿ ಸವಾರಿ ಮಾಡುವ ಮೊದಲು ಸೂಚನೆಗಳನ್ನು ಓದಿರಿ.

ಯಾವಾಗ ಭೇಟಿ ಸೂಕ್ತ

ಯಾವಾಗ ಭೇಟಿ ಸೂಕ್ತ

PC:Rajithmohan
ವರ್ಷವಿಡೀ, ಗ್ರಾಮವು ಪ್ರವಾಸಿಗರಿಗೆ ತೆರೆದಿರುತ್ತದೆ. ಆದರೆ ಸಾಮಾನ್ಯವಾಗಿ ಅನೇಕ ಪ್ರವಾಸಿಗರು ಬೇಸಿಗೆ ಕಾಲದಲ್ಲಿ ಇಲ್ಲಿ ಸೇರುತ್ತಾರೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Suniltg
ಪ್ರವಾಸಿ ಗ್ರಾಮದಿಂದ 10 ಕಿ.ಮೀ ದೂರದಲ್ಲಿರುವ ತಿರುವನಂತಪುರಂ ಸೆಂಟ್ರಲ್ ರೈಲು ನಿಲ್ದಾಣವಿದೆ.
ಪ್ರವಾಸಿ ಗ್ರಾಮದಿಂದ ಸುಮಾರು 7 ಕಿ.ಮೀ ದೂರದಲ್ಲಿರುವ ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+