Search
  • Follow NativePlanet
Share
» »ಅಬ್ಬಬ್ಬಾ… ಭಾರತದ ಈ 5 ಸ್ಥಳಗಳು ಏನ್ ದುಬಾರಿ ರೀ…  

ಅಬ್ಬಬ್ಬಾ… ಭಾರತದ ಈ 5 ಸ್ಥಳಗಳು ಏನ್ ದುಬಾರಿ ರೀ…  

ಭೌಗೋಳಿಕತೆ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಶ್ರೀಮಂತ ಪರಂಪರೆಯಿಂದ ಕೂಡಿದ ದೇಶ ನಮ್ಮ ಭಾರತ. ಇಲ್ಲಿ ಪ್ರವಾಸಿ ಸ್ಥಳಗಳಿಗೆ ಕೊರತೆಯೇ ಇಲ್ಲ. ಭಾರತದ ಸೊಬಗನ್ನು ಕಣ್ತುಂಬಿಕೊಳ್ಳಲು ವಿದೇಶದಿಂದಲೂ ಬರುತ್ತಾರೆ. ಅದು ಒಂದಲ್ಲ ಎರಡಲ್ಲ ಹಲವು ಬಾರಿ ಭೇಟಿ ಕೊಟ್ಟವರು ಇದ್ದಾರೆ. ಆದ್ದರಿಂದ ವಿದೇಶಕ್ಕೆ ಹೋಗುವ ಬದಲು, ದೇಶದಲ್ಲಿರುವ ಸುಂದರವಾದ ಸ್ಥಳಗಳನ್ನು ಆರಿಸಿಕೊಂಡರೆ ಒಳ್ಳೆಯದು.

ಜೊತೆಗೆ ವಿದೇಶಿ ಪ್ರಯಾಣವು ತುಂಬಾ ದುಬಾರಿ ಎಂಬುದು ನಿಮಗೆ ಗೊತ್ತಿರುವ ವಿಚಾರ. ಆದರೆ ನಿಮ್ಮ ಜೇಬನ್ನು ಖಾಲಿ ಮಾಡುವ ಕೆಲವು ಸ್ಥಳಗಳು ನಮ್ಮ ದೇಶದಲ್ಲೂ ಇವೆ ಎಂಬುದು ನಿಮಗೆ ತಿಳಿದಿದೆಯೇ. ಹೌದು, ಭಾರತದಲ್ಲಿರುವ ಕೆಲವು ಸ್ಥಳಗಳು ಬಜೆಟ್ ವಿಷಯದಲ್ಲಿ ವಿದೇಶಿ ಸ್ಥಳಗಳಿಗೆ ಸ್ಪರ್ಧೆ ಕೊಡಬಲ್ಲವು. ಹಾಗಾದರೆ ಬನ್ನಿ ಆ ಸ್ಥಳಗಳು ಯಾವುವು ಎಂಬ ಬಗ್ಗೆ ತಿಳಿಯೋಣ.

ಅಂಡಮಾನ್

ಅಂಡಮಾನ್

ನೋಡಲು ಯಾವುದೇ ವಿದೇಶಿ ಸ್ಥಳಕ್ಕಿಂತಲೂ ಕಡಿಮೆಯಿಲ್ಲದ ಅಂಡಮಾನ್'ಗೆ ಹನಿಮೂನ್'ಗೆಂದು ಬರುವವರು ಹೆಚ್ಚು. ಈ ಸ್ಥಳವು ರಜೆಯನ್ನು ಆನಂದಿಸಲು ಸೂಕ್ತವಾಗಿದೆ. ಭಾರತದ ಬೇರೆ ಪ್ರವಾಸಿ ಸ್ಥಳಗಳಿಗೆ ಹೋಲಿಸಿದರೆ ಈ ಸ್ಥಳವು ಸಾಕಷ್ಟು ದುಬಾರಿಯಾಗಿದೆ. ಇಲ್ಲಿ ಎಲ್ಲವೂ ಸಾಕಷ್ಟು ದುಬಾರಿಯಾಗಿದೆ. ವಿಶೇಷವಾಗಿ ಹ್ಯಾವ್ಲಾಕ್ ದ್ವೀಪ, ಪೋರ್ಟ್ ಬ್ಲೇರ್ ಮತ್ತು ನೀಲ್ ದ್ವೀಪದಂತಹ ಅನೇಕ ಸ್ಥಳಗಳನ್ನು ಐಷಾರಾಮಿ ತಾಣಗಳು ಎಂದು ಗುರುತಿಸಲಾಗಿದೆ. ವಸತಿ ವಿಚಾರಕ್ಕೆ ಬಂದಾಗ, ನಿಮ್ಮ ಬಜೆಟ್'ಗೆ ಖಂಡಿತ ಕತ್ತರಿ ಬೀಳುತ್ತದೆ. ಏಕೆಂದರೆ ಇಲ್ಲಿ ಕೆಲವು ದುಬಾರಿ ರೆಸಾರ್ಟ್‌ಗಳು ಲಭ್ಯವಿದೆ. ಇದಲ್ಲದೆ, ಅಂಡಮಾನ್‌'ನಲ್ಲಿ ಸ್ಥಳೀಯ ಪ್ರಯಾಣವು ಸಾಕಷ್ಟು ದುಬಾರಿಯಿದೆ. ಏಕೆಂದರೆ ಪ್ರವಾಸಿಗರಿಗೆ ಇಲ್ಲಿ ಕ್ಯಾಬ್‌'ಗಳನ್ನು ಪಡೆಯುವುದು ಕಷ್ಟವಾಗುತ್ತದೆ. ಜನ್ಮಾಷ್ಟಮಿಯಂತಹ ವಿಶೇಷ ಸಂದರ್ಭದಲ್ಲಿ ಮುಂಜಾನೆ ಬೇಗ ಹೊರಡಿ. ಗೋಕುಲದಲ್ಲಿ ಗೋಪಾಲನನ್ನು ಹತ್ತಿರದಿಂದ ನೋಡಿ.

ಕುಮಾರಕೋಮ್

ಕುಮಾರಕೋಮ್

ಐಷಾರಾಮಿ ವಿಚಾರ ಬಂದಾಗ ಕೇರಳದ ಕುಮಾರಕೋಮ್ ಕೂಡ ಯಾವುದೇ ವಿದೇಶಿ ಸ್ಥಳಕ್ಕೆ ಕಡಿಮೆಯೇನಿಲ್ಲ. ಸುಂದರವಾದ ಹಿನ್ನೀರಿಗೆ ಸಾಕಷ್ಟು ಜನಪ್ರಿಯವಾಗಿರುವ ಈ ಸ್ಥಳವು ತುಂಬಾ ಸುಂದರವಾಗಿದೆ. ಜನರು ಹಿನ್ನೀರನ್ನು ಆನಂದಿಸಲು ಮಾತ್ರ ಇಲ್ಲಿಗೆ ಬರುತ್ತಾರೆ. ಕುಮಾರಕೋಮ್‌'ನಲ್ಲಿ ಹೆಚ್ಚಿನ ಐಷಾರಾಮಿ ರೆಸಾರ್ಟ್‌'ಗಳು ಮತ್ತು ಹೋಟೆಲ್‌'ಗಳು ಲಕ್ಸೂರಿ ಆಯುರ್ವೇದ ಸ್ಪಾ ಚಿಕಿತ್ಸೆಗೆ ಖ್ಯಾತಿಯಾಗಿವೆ. ಹೋಟೆಲ್'ನಲ್ಲಿ ಉಳಿಯಲು ಹೆಚ್ಚು ಖರ್ಚು ಮಾಡಿದಂತೆ ಆಹಾರಕ್ಕೂ ಹೆಚ್ಚು ಹಣ ಕೊಡಬೇಡಿ. ಬೇಕಾದರೆ ನೀವು ಬಜೆಟ್ ನೋಡಿಕೊಂಡು ಸ್ಟ್ರೀಟ್ ಫುಡ್ ಪ್ರಯತ್ನಿಸಬಹುದು. ಏಷ್ಯಾದ ಇಂತಹ ಕೆಲವು ಗಿರಿಧಾಮಗಳಲ್ಲಿ ಜನರು ತಿರುಗಾಡಲು ಹೆಚ್ಚು ಇಷ್ಟಪಡುತ್ತಾರೆ. ಭಾರತದ ಈ ಗುಡ್ಡಗಾಡು ಪ್ರದೇಶವು ವರ್ಷದ 12 ತಿಂಗಳ ಕಾಲವೂ ಜನಸಂದಣಿಯಿಂದ ಕೂಡಿರುತ್ತದೆ.

ಉದಯಪುರ

ಉದಯಪುರ

ಭವ್ಯವಾದ ಅರಮನೆಗಳ ನಾಡು ಎಂದು ಕರೆಯಲ್ಪಡುವ ಉದಯಪುರದಲ್ಲಿಯೂ ಕಡಿಮೆ ಹಣಕ್ಕೆ ಏನನ್ನು ನೋಡಲಾಗುವುದಿಲ್ಲ. ಇಲ್ಲಿ ಕಂಡುಬರುವ ರಾಜಮನೆತನದ ಶೈಲಿ ಜನರಿಗೆ ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತದೆ. ಆದರೆ ಪ್ರಯಾಣದ ವೆಚ್ಚ ಮತ್ತು ಜೀವನ ವೆಚ್ಚವು ಜನರ ಜೇಬುಗಳನ್ನು ಅರ್ಧಕರ್ಧ ಖಾಲಿ ಮಾಡುತ್ತವೆ. ಇಲ್ಲಿ ನಾವು ಅನೇಕ ಅರಮನೆಗಳನ್ನು ನೋಡಬಹುದು. ಅವುಗಳ ಸೌಂದರ್ಯವು ನೀವು ಖಂಡಿತವಾಗಿಯೂ ಇಲ್ಲಿ ಉಳಿಯುವಂತೆ ಮಾಡುತ್ತದೆ. ಆದರೆ ನೆನಪಿಡಿ, ಇವು ನಿಮ್ಮ ಬಜೆಟ್ ಅನ್ನು ಖಾಲಿ ಮಾಡುತ್ತವೆ. ಅಷ್ಟೇ ಅಲ್ಲ, ಉದಯಪುರವು ಭಾರತದಲ್ಲಿನ ಅತ್ಯಂತ ಜನಪ್ರಿಯ ಮದುವೆಯ ತಾಣವಾಗಿದೆ. ಒಬೆರಾಯ್ ಉದಯವಿಲಾಸ್, ತಾಜ್ ಪ್ಯಾಲೇಸ್ ಮತ್ತು ಲಲಿತ್ ಲಕ್ಷ್ಮಿ ವಿಲಾಸ್ ಅರಮನೆಯಂತಹ ಅನೇಕ ಐಷಾರಾಮಿ ಅರಮನೆಗಳು ಇಲ್ಲಿವೆ. ಐಷಾರಾಮಿಯಾಗಿ ರಜೆಯನ್ನು ಕಳೆಯಲು ಬಯಸುವವರು ಇಲ್ಲಿಗೆ ಬರಬಹುದು. ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಭಾರತದ ಈ ನಗರದ ಸೌಂದರ್ಯ ಇಂದಿಗೂ ಕಡಿಮೆಯಾಗಿಲ್ಲ.

ದಕ್ಷಿಣ ಗೋವಾ

ದಕ್ಷಿಣ ಗೋವಾ

ದುಬಾರಿ ಸ್ಥಳಗಳ ಬಗ್ಗೆ ಮಾತನಾಡುವಾಗ ನಾವು ಗೋವವನ್ನು ಮರೆಯಲು ಹೇಗೆ ಸಾಧ್ಯ. ಇಂತಹ ಸ್ಥಳಕ್ಕೆ 4 ದಿನ ಭೇಟಿ ನೀಡಲು ಒಬ್ಬ ವ್ಯಕ್ತಿಗೆ 20 ರಿಂದ 30 ಸಾವಿರ ವೆಚ್ಚವಾಗುತ್ತದೆ. ಆದರೆ ಇತರ ಸ್ಥಳಗಳಿಗೆ ಹೋಲಿಸಿದರೆ ಗೋವಾದಲ್ಲಿ ನೀವು ಬಜೆಟ್ ಸ್ನೇಹಿ ಸ್ಥಳದಲ್ಲಿಯೂ ಪ್ರಯಾಣಿಸಬಹುದು. ಆದರೆ ಐಷಾರಾಮಿ ಸ್ಥಳಗಳಲ್ಲಿ ಇರಲು ಇಷ್ಟಪಡುವವರಿಗೆ ಗೋವಾದಲ್ಲಿ ಸಾಕಷ್ಟು ಸೌಲಭ್ಯಗಳಿವೆ. ದಕ್ಷಿಣ ಗೋವಾದಲ್ಲಿ ಅನೇಕ ಐಷಾರಾಮಿ ರೆಸಾರ್ಟ್‌ಗಳಿವೆ. ಇಲ್ಲಿ ಹನಿಮೂನ್ ‘ಗೆಂದು ಬರುವ ದಂಪತಿಗಳು ಬಹಳಷ್ಟು ದಿನಗಳ ಕಾಲ ಉಳಿಯುತ್ತಾರೆ. ಪ್ರಶಾಂತವಾದ ವಾತವರಣ, ಕಡಿಮೆ ಜನಸಂದಣಿ ಇರುವ ಕಡಲತೀರಗಳಿಂದಾಗಿ ದಕ್ಷಿಣ ಗೋವಾ ರೆಸಾರ್ಟ್‌ಗಳು ಶಾಂತವಾದ ವಾತವರಣ ಬಯಸುವವರಿಗೆ ಅತ್ಯುತ್ತಮ ಸ್ಥಳವಾಗಿದೆ. ನೀಲಿ ಈಜುಕೊಳಗಳಿಂದ ಹಿಡಿದು ರುಚಿಕರವಾದ ಖಾದ್ಯಗಳನ್ನು ಹೊಂದಿರುವ ಐಷಾರಾಮಿ ಹೋಟೆಲ್‌'ಗಳು ಮತ್ತು ಸ್ಪಾಗಳು ಇಲ್ಲಿವೆ.

ಕಾಶ್ಮೀರ

ಕಾಶ್ಮೀರ

ಕಾಶ್ಮೀರವು ಭಾರತದ ಅತ್ಯಂತ ಜನಪ್ರಿಯ ಹನಿಮೂನ್ ತಾಣವಾಗಿದೆ. ‘ಹೆವೆನ್ ಆಫ್ ಅರ್ಥ್' ಎಂದು ಕರೆಯಲ್ಪಡುವ ಈ ಸ್ಥಳದಲ್ಲಿ ಯಾರು ತಿರುಗಾಡಲು ಬಯಸುವುದಿಲ್ಲ. ಆದರೆ ಕಾಶ್ಮೀರವು ಇತರ ಸ್ಥಳಗಳಂತೆ ದುಬಾರಿಯಾಗಿದೆ. ಇಲ್ಲಿ ಅನೇಕ ಶ್ರೇಷ್ಠ ಮತ್ತು ಐಷಾರಾಮಿ ರೆಸಾರ್ಟ್‌ಗಳಿವೆ. ಇದು ನೀವು ಉಳಿದಿರುವ ಸ್ಥಳದಿಂದಲೇ ಸಂಪೂರ್ಣವಾಗಿ ಸ್ವರ್ಗೀಯ ವೈಬ್ ಅನ್ನು ನೀಡುತ್ತದೆ. ಹಲವಾರು ಪ್ರವಾಸಿ ಚಟುವಟಿಕೆಗಳ ಕಾರಣಕ್ಕಾಗಿ ಇಲ್ಲಿ ಖರ್ಚು ಮತ್ತಷ್ಟು ಹೆಚ್ಚಾಗಬಹುದು. ಈ ಸ್ಥಳವು ಬೇಸಿಗೆಯಲ್ಲಿ ಭೇಟಿ ನೀಡಲು ಸೂಕ್ತ ಸ್ಥಳವಾಗಿದೆ. ಶ್ರೀನಗರದಲ್ಲಿರುವ ಹೋಟೆಲ್ ಮತ್ತು ಸ್ಪಾಗಳು ಸಾಕಷ್ಟು ಲಕ್ಸೂರಿ ಆಗಿವೆ. ನಿಶಾತ್ ಗಾರ್ಡನ್, ಟುಲಿಪ್ ಗಾರ್ಡನ್, ಶಾಲಿಮಾರ್ ಬಾಗ್, ಪಥರ್ ಮಸೀದಿ, ಚಶ್ಮೆ ಶಾಹಿ ಗಾರ್ಡನ್, ಹರಿ ಪರ್ಬತ್, ದಚಿಗಮ್ ನ್ಯಾಷನಲ್ ಪಾರ್ಕ್, ಸೋನ್ ಲ್ಯಾಂಕ್ ಶ್ರೀನಗರದಲ್ಲಿನ ಆಕರ್ಷಣೀಯ ಸ್ಥಳಗಳಾಗಿವೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+