Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವನಂತಪುರಂ » ಆಕರ್ಷಣೆಗಳು » ಶ್ರೀ ಚಿತ್ರಾ ಆರ್ಟ ಗ್ಯಾಲರಿ

ಶ್ರೀ ಚಿತ್ರಾ ಆರ್ಟ ಗ್ಯಾಲರಿ, ತಿರುವನಂತಪುರಂ

1

ಶ್ರೀ ಚಿತ್ರಾ ಆರ್ಟ ಗ್ಯಾಲರಿಯಲ್ಲಿ ಅದ್ಭುತವಾದ ಚಿತ್ರಕಲೆಗಳನ್ನು ಕಾಣಬಹುದು. ಈ ಚಿತ್ರಗಳೆಲ್ಲವೂ  ಪ್ರಸಿದ್ಧ ಚಿತ್ರಕಾರರು ರಚಿಸಿದ ಚಿತ್ರಗಳಾಗಿವೆ. ರವಿವರ್ಮನ ಕುಂಚದಲ್ಲಿ ಮೂಡಿ ಬಂದ ಚಿತ್ರಗಳು ಎಲ್ಲರ ಮನ ಸೂರೆಗೊಳ್ಳುತ್ತವೆ ಯಲ್ಲವೇ?  ಅಂತಹ ಅತ್ಯತ್ತಮ ಚಿತ್ರಗಳು ಚಿತ್ರ ಆರ್ಟ್ ಗ್ಯಾಲರಿಯಲ್ಲಿ ನೋಡಲು ಲಭ್ಯ. ಅಷ್ಟೇ ಅಲ್ಲದೇ ಇನ್ನೂ ಅನೇಕ ಪ್ರಸಿದ್ಧ ಚಿತ್ರಕಾರರು ರಚಿಸಿದ ಚಿತ್ರಗಳ ಸಂಗ್ರಹ ಇಲ್ಲಿದೆ. ಜೊತೆಗೆ ಇಲ್ಲಿ ನಾವು ರಾಜಾಸ್ಥಾನಿ ಮತ್ತು ಮೊಘಲ್ ಶೈಲಿಯ ಚಿತ್ರಕಲೆಯನ್ನು ನೋಡಬಹುದು. ಕುಂಚಕಾರರು, ಚಿತ್ರ ಪ್ರಿಯರು ಇಲ್ಲೊಮ್ಮೆ ಭೇಟಿ ನೀಡಿದರೆ ಹಿಂದಿರುಗುವುದನ್ನೇ ಮರೆಯುತ್ತಾರೋ ಏನೋ?

ಬಲಿನೆಸೆ ಮತ್ತು ತಂಜಾವೂರು ಶೈಲಿಯ ಅತ್ಯಾಕರ್ಷಕವಾದ ಚಿತ್ರಕಲೆಯನ್ನು  ಇಲ್ಲಿನ ಗ್ಯಾಲರಿಯಲ್ಲಿ  ಕಾಣಬಹುದು. ಈ ಚಿತ್ರಕಲೆಯನ್ನು ಸೂಕ್ಷ್ಮವಾದ ಕಲ್ಲುಗಳು ಹಾಗೂ ಅತ್ಯಾಧುನಿಕ, ಆಕರ್ಷಕವಾದ ಬಣ್ಣಗಳಿಂದ ಮನ ಮೋಹಕವಾಗಿ ಚಿತ್ರಿಸಲಾಗಿದೆ, ಈ ಗ್ಯಾಲರಿಯಲ್ಲಿ ಚೈನೀಸ್, ಟಿಬೆಟಿಯನ್ನರ ಹಾಗೂ ಜಪಾನಿಯ ಚಿತ್ರಕಲೆಗಳನ್ನು ನೋಡಬಹುದು. ಈ ಗ್ಯಾಲರಿಯಲ್ಲಿ ಮತ್ತೊಂದು ವಿಭಾಗವಿದೆ. ಅಲ್ಲಿ ತುಂಬಾ ಸೂಕ್ಷ್ಮವಾದ ಚಿತ್ರಕಲೆಯನ್ನು ಪ್ರದರ್ಶಿಸಲಾಗಿದೆ. ಈ ಚಿತ್ರಕಲೆಯನ್ನು ನೋಡಿದರೆ ಎಂತವರಿಗೂ ಅಚ್ಚರಿಯನ್ನು ಮೂಡಿಸುವಷ್ಟು  ಅದ್ಭುತವಾಗಿದೆ. ದೇಶಿ ಚಿತ್ರಗಳು ಮಾತ್ರವಲ್ಲದೇ ಅನೇಕ ವಿದೇಶಿಯ ಚಿತ್ರಗಳನ್ನೂ ಸಹ ನೋಡಬೇಕೆಂದಿದ್ದರೆ ಇವೆಲ್ಲವನ್ನು ಪ್ರವಾಸಿಗರಿಗಾಗಿ ಒಳಗೊಂಡ ಚಿತ್ರ ಗ್ಯಾಲರಿಗೊಮ್ಮೆ ಹೋಗಲೇ ಬೇಕು.

ಈ ಗ್ಯಾಲರಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿದೆ. ನೂರಾರು ಪ್ರವಾಸಿಗರು ಈ ಚಿತ್ರಕಲೆಯನ್ನು ನೋಡಲು ಪ್ರತಿನಿತ್ಯ ಬರುತ್ತಾರೆ. ಈ ಗ್ಯಾಲರಿಯಲ್ಲಿರುವ ಚಿತ್ರಗಳನ್ನು ಕುಂಚ ಕಲೆಗಳನ್ನು  ಸಂಪೂರ್ಣವಾಗಿ ನೋಡಬಯಸುವುದಾದರೆ ಇದಕ್ಕಾಗಿ ಕನಿಷ್ಠವೆಂದರೂ 2 ಗಂಟೆಯ ಸಮಯವನ್ನು ಮೀಸಲಿಡಬೇಕು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed