Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವನಂತಪುರಂ » ಆಕರ್ಷಣೆಗಳು » ಕರಮಣ ನದಿ

ಕರಮಣ ನದಿ, ತಿರುವನಂತಪುರಂ

1

ತಿರುವನಂತಪುರಂ ಮುಖಾಂತರ ಕರಮಣ ನದಿ ಪ್ರವಹಿಸುತ್ತದೆ. ಈ ನದಿಯ ಮೂಲ ಸ್ಥಾನ  ಅಗಸ್ತ್ಯರಕೂಡಂ ಶಿಖರ. ಪಶ್ಚಿಮ ಘಟ್ಟದ ದಕ್ಷಿಣ ಭಾಗದಲ್ಲಿ ಈ ಶಿಖರವಿದೆ. ನದಿ ಪನತ್ತುರ (Panatthura) ಎಂಬ ಪ್ರದೇಶದಲ್ಲಿ ಪಶ್ಚಿಮಾಭಿಮುಖವಾಗಿ ಕೊವಲಂ ಬಳಿ 68 ಕಿಮೀ ದೂರವನ್ನು ಆವರಿಸಿದ್ದು, ನಂತರ ಅರೇಬಿಯನ್ ಸಮುದ್ರಕ್ಕೆ ಸೇರುತ್ತದೆ. ತಿರುವನಂತಪುರಂ ನ ಉಪನಗರವಾದ ಕರಮಣದ ಮೂಲಕ  ಈ ನದಿ ಹರಿಯುವುದರಿಂದ ಇದಕ್ಕೆ ಈ ನಗರದ ಹೆಸರಿಡಲಾಗಿದೆ.

ಈ ಕರಮಣ ನದಿ ಉಳಿದ ನದಿಗಳಿಗೆ ಹೋಲಿಕೆ ಮಾಡಿದರೆ ಅಷ್ಟೇನು  ಉದ್ದವನ್ನು ಹೊಂದಿಲ್ಲ.  ಇದರಲ್ಲಿ ಎರಡು ಅಣೆಕಟ್ಟನ್ನು ಕಟ್ಟಲಾಗಿದೆ. ಈ ಅಣೆಕಟ್ಟುಗಳನ್ನು ಪೆಪ್ಪರಾ ಅಣೆಕಟ್ಟು ಮತ್ತು ಅರುವಿಕರಾ ಅಣೆಕಟ್ಟೆಂದು  ಹೆಸರಿಸಲಾಗಿದೆ. ಈ ಎರಡೂ ಅಣೆಕಟ್ಟನ್ನು ಬೇರೆ-ಬೇರೆ ಉದ್ದೇಶಕ್ಕೆ ಕಟ್ಟಲಾಗಿದೆ. ಪೆಪ್ಪರಾ ಅಣೆಕಟ್ಟನ್ನು ನದಿಯ ಮೇಲ್ಭಾಗದಲ್ಲಿ ಕಟ್ಟಲಾಗಿದ್ದು ವ್ಯವಸ್ಯಾಯದ ಉದ್ದೇಶಕ್ಕೆ ಕಟ್ಟಲಾಗಿದೆ. ಇದರಿಂದ ಇಲ್ಲಿನ ಸ್ಥಳೀಯರಿಗೆ ಸಾಕಷ್ಟು ನೀರಾವರಿ ನೀರು ದೊರೆಯುತ್ತದೆ. ಅರುವಿಕರಾ ಅಣೆಕಟ್ಟನ್ನು ಆ ಭಾಗದ ಜನರಿಗೆ ನೀರು ಸರಬರಾಜು ಮಾಡಲು ಕಟ್ಟಲಾಗಿದೆ, ಇದರ ನೀರನ್ನು ವ್ಯವಸಾಯಕ್ಕೂ ಉಪಯೋಗಿಸಲಾಗುತ್ತದೆ. ಈ ನದಿಯಲ್ಲಿ ಅನೇಕ ಸೇತುವೆಗಳನ್ನು ಕಟ್ಟಲಾಗಿದೆ.

ಈ ಕರಮಣ ನದಿ ತೀರದಲ್ಲಿ ಸ್ವಸ್ಛಂದವಾದ ನೀಲ ನೀರನ್ನು ನೋಡುತ್ತಾ, ಚಿಕ್ಕದಾದ ಮರಳಿನ ದಂಡೆಯ ಮೇಲೆ  ನಡೆಯುತ್ತಾ  ಪ್ರಕೃತಿಯ ಸೌಂದರ್ಯವನ್ನು ಸವೆಯಬಹುದು. ನಿಮ್ಮ ಪ್ರವಾಸದ ಮಜವನ್ನು ಪಡೆಯಬೇಕೆಂದಿದ್ದರೆ ಕರಮಣ ತೀರಕ್ಕೊಮ್ಮೆ ಬರಲೇ ಬೇಕು!

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed