ಈ ಸುಂದರವಾದ ಹ್ಯಾಪಿಲ್ಯಾಂಡ್ ವಾಟರ್ ಥೀಮ್ ಉದ್ಯಾನ ತಿರುವಂತಪುರದ ಹೊರಭಾಗದಲ್ಲಿರುವ ವೆಂಬಾಯಮ್ ಎಂಬ ಸ್ಥಳದಲ್ಲಿದೆ. ಇಲ್ಲಿಗೆ ಪ್ರವಾಸಕ್ಕೆಂದು ಬರುವವರ ಸಂಖ್ಯೆ ಅಪಾರ. ನೀರಿನಲ್ಲಿ ಆಡುವುದೇ ಇಲ್ಲಿನ ಮುಖ್ಯ ಆಕರ್ಷಣೆ.ಇಲ್ಲಿ ನೀರಿನಲ್ಲಿ ವಿನೋದವಾದ ಹಾಗೂ ಭಯ ಹುಟ್ಟಿಸುವ ರೋಮಾಂಚನಕಾರಿ ಅನೇಕ ಆಟಗಳನ್ನು ಆಡಬಹುದು. ಕೊಲಂಬೋ, ಅಪ್ ಹಿಲ್ ಡ್ರೈವ್, ಫ್ಲೈಯಿಂಗ್ ಫಾಕ್ಸ್, ಚಾಲೆಂಜರ್ ಇಂತಹ ಅನೇಕ ಆಟಗಳನ್ನು ಆಡಬಹುದು.
ಈ ಉದ್ಯಾನ ಅತ್ಯಂತವಾದ ಸುರಕ್ಷತೆವಾಗಿ ಕಟ್ಟಲಾಗಿದೆ. ಇಲ್ಲಿ ಆಟ ವಾಡಲು ಉಪಯೋಗಿಸುವ ನೀರು ಅತ್ಯಂತ ಸ್ವಚ್ಚವಾಗಿದೆ.
ಈ ವಾಟರ್ ಲ್ಯಾಂಡ್ (ನೀರಿನ ಪ್ರದೇಶ) ಅನ್ನು ಕುಟುಂಬದ ಮನೋರಂಜನೆಗಾಗಿ ಕೃತಕವಾಗಿ ನಿರ್ಮಿಸಲಾಗಿದೆ. ಕಿಡ್ಸ್ ವಿಲೇಜ್ ನಲ್ಲಿ ಮಕ್ಕಳಿಗಾಗಿಯೇ ರೈಡ್ಸ್ ಇದೆ. ಇಲ್ಲಿ ನಿಂತರೆ ಸಮುದ್ರ ತೀರ ಕಾಣುವಂತೆ ಈ ಉದ್ಯಾನವನ್ನು ನಿರ್ಮಿಸಲಾಗಿದೆ. ಈ ಹ್ಯಾಪಿ ಲ್ಯಾಂಡ್ ನಿಮಗೆ ಥ್ರಿಲ್/ ರೋಮಾಂಚನ ನೀಡುತ್ತದೆ.
ಇಲ್ಲಿ ಪ್ರವೇಶ ಶುಲ್ಕ (ಎಂಟ್ರಿ ಫೀಸ್) ನೀಡಬೇಕಾಗುತ್ತದೆ. ಇಲ್ಲಿಗೆ ಭೇಟಿ ನೀಡಲು ಸಮಯವನ್ನು ನಿಗದಿಪಡಿಸಲಾಗಿದ್ದು ಆ ಸಮಯ : 10.30 ರಿಂದ ಸಂಜೆ 6 ಗಂಟೆ. ಇದಕ್ಕೆ ಶನಿವಾರ, ಭಾನುವಾರ ಮತ್ತು ಸಾರ್ವಜನಿಕ ರಜೆ ನೀಡಲಾಗಿದ್ದು ಸಾರ್ವಜನಿಕರಿಗೆ ಆ ಎರಡು ದಿನಗಳು ಪ್ರವೇಶವಿರುವುದಿಲ್ಲ.


Click it and Unblock the Notifications