ಪಲರುವಿ ಜಲಪಾತವು ಕೇರಳ - ತಮಿಳುನಾಡು ಗಡಿ ಭಾಗದಲ್ಲಿದೆ. ಇದು ತೇನ್‍ಮಲದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಪಲರುವಿ ಎಂದರೆ "ಕ್ಷೀರ ಧಾರೆ" ಎಂದರ್ಥ. ನೊರೆಯುಕ್ಕುವ ನೀರಿನ ಝರಿ, ಬೆಳ್ಳಿಯಂತೆ ಹೊಳೆಯುವ ನೀರಿನ ಕವಲುಗಳು ಮತ್ತು ತಂಪಾದ ವಾತಾವರಣವೆಲ್ಲವು ಕೂಡಿ ಈ ಜಲಪಾತವನ್ನು ನೋಡುಗರ ಕಣ್ಮನವನ್ನು ತಣಿಸುತ್ತವೆ....
ತೇನ್‍ಮಲದ ಜೈವಿಕ ಪ್ರವಾಸಿ ಯೋಜನೆಯು ಭಾರತದ ಪ್ರಪ್ರಥಮ ಜೈವಿಕ ಪ್ರವಾಸಿ ಯೋಜನೆಯೆಂಬ ಖ್ಯಾತಿಗೆ ಪಾತ್ರವಾಗಿದೆ. ಈ ಸ್ಥಳವು ಈ ಯೋಜನೆಗೆ ಪಾತ್ರವಾಗಲು ಇಲ್ಲಿರುವ ವಿಹಂಗಮ ಪರಿಸರ, ಜೀವ ವೈವಿಧ್ಯ ಮತ್ತು ಇಲ್ಲಿ ನಡೆಸಬಹುದಾದ ಕಾರ್ಯ ಚಟುವಟಿಕೆಗಳೆ ಕಾರಣವಾಗಿವೆ. ಈ ಸ್ಥಳವನ್ನು 5 ವಲಯಗಳನ್ನಾಗಿ ವಿಭಾಗಿಸಲಾಗಿದೆ. ಪ್ರತಿ...
ಕುಲತುಪುಳ ಎಂಬುದು ಕೊಲ್ಲಂ ಜಿಲ್ಲೆಯಲ್ಲಿರುವ ಒಂದು ಸುಂದರವಾದ ಹಳ್ಳಿಯಾಗಿದೆ. ಇದು ತೇನ್‍ಮಲ ಬೆಟ್ಟಗಾಡು ಪ್ರದೇಶಕ್ಕೆ ಸಮೀಪದಲ್ಲಿದೆ. ತಿರುವನಂತಪುರಂ - ಶೆಂಕೊಟ್ಟೈ ರಸ್ತೆಯಲ್ಲಿರುವ ಈ ಸುಂದರವಾದ ಹಳ್ಳಿಗೆ ತಿರುವನಂತಪುರಂ ಮತ್ತು ಕೊಲ್ಲಂಗಳಿಂದ ಸುಲಭವಾಗಿ ತಲುಪಬಹುದು. ಇವೆರಡು ನಗರಗಳು ಕ್ರಮವಾಗಿ 62 ಮತ್ತು 64 ಕಿ.ಮೀ...
ಸುತ್ತಾಡಲು ಬಯಸುವ ಉತ್ಸಾಹಿಗಳಿಗೆ ಚಾರಣವು ಒಂದು ಚೇತೋಹಾರಿಯಾದ ಚಟುವಟಿಕೆಯಾಗಿದೆ. ಈ ಗುಡ್ಡಾಗಾಡು ಪ್ರಾಂತ್ಯದಲ್ಲಿ ಅಂತಹವರಿಗಾಗಿ ಒಂದರಿಂದ ಮೂರು ದಿನಗಳ ಅವಧಿಯವರೆಗಿನ ಮಾರ್ಗದರ್ಶಿತ ಚಾರಣ ಪ್ರವಾಸಗಳು ಲಭ್ಯವಿವೆ. ಈ ಚಾರಣಗಳು ಚಾರಣಿಗರನ್ನು ಸಮ್ಮೋಹನಗೊಳಿಸುವಂತಿರುತ್ತವೆ. ಅಲ್ಲದೆ ಪಕ್ಷಿ ವೀಕ್ಷಣೆಯ ಹವ್ಯಾಸ...
ಅರ್ಯಂಕವು ತನ್ನಲ್ಲಿರುವ ಪಶ್ಚಿಮ ಘಟ್ಟಗಳ ಶ್ರೇಣಿಯ ಕಣಿವೆಗಳಿಗೆ ಹೆಸರುವಾಸಿಯಾಗಿದೆ. ಇದು ಕೊಲ್ಲಂ ಜಿಲ್ಲೆಯಿಂದ 73 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಹಳ್ಳಿಯು ತೇನ್‍ಮಲಗೆ ಸಮೀಪದಲ್ಲಿದೆ. ಅರ್ಯಂಕವು ಈ ಜಿಲ್ಲೆಯಲ್ಲಿರುವ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ.
ಅರ್ಯಂಕವು ಹಳ್ಳಿಯ ಪ್ರಮುಖ...