ಕೌಮಾರಿಯಮ್ಮನ್ ದೇವಾಲಯವನ್ನು 14ನೇ ಶತಮಾನದ ಪಾಂಡ್ಯ ದೊರೆ ವೀರಪಾಂಡ್ಯ ಕಟ್ಟಬೊಮ್ಮನ್ ನಿರ್ಮಿಸಿದನು. ಸ್ಥಳೀಯ ನಂಬಿಕೆಗಳ ಪ್ರಕಾರ, ದೊರೆ ವೀರಪಾಂಡ್ಯನು ಕೌಮಾರಿಯಮ್ಮ ಮತ್ತು ಕನ್ನೇಶ್ವರಮುಡಿಯಾರ್ರನ್ನು ಪೂಜಿಸಿದ್ದರಿಂದ ತನ್ನ ದೃಷ್ಟಿಯನ್ನು ಮರಳಿ ಪಡೆದನು. ಕೌಮಾರಿಯಮ್ಮ ದೇವಿಯು ಭಕ್ತಾದಿಗಳ ಇಷ್ಟಾರ್ಥಗಳನ್ನು ಸಲ್ಲಿಸುತ್ತಾಳೆ ಮತ್ತು ಅವರ ಸಂಕಟಗಳನ್ನು, ರೋಗಗಳನ್ನು ಪರಿಹರಿಸುತ್ತಾಳೆ ಎಂಬ ನಂಬಿಕೆಯಿದೆ.
ಕೌಮಾರಿಯಮ್ಮನ ದೇವಾಲಯದ ಉತ್ಸವವನ್ನು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅಂದರೆ ತಮಿಳಿನ ಚಿತ್ತಿರೈ ತಿಂಗಳಲ್ಲಿ 8 ದಿನಗಳ ಕಾಲ ಆಚರಿಸಲಾಗುತ್ತದೆ. ಈ ದೇವಾಲಯವು ತೇಣಿಯಿಂದ 8 ಕಿಮೀ ದೂರದಲ್ಲಿರುವ ವೀರಪಾಂಡಿ ಎನ್ನುವ ಹಳ್ಳಿಯಲ್ಲಿದೆ. ಇದು ಮುಳೈ ಎನ್ನುವ ನದಿ ದಂಡೆಯಲ್ಲಿದೆ.


Click it and Unblock the Notifications