ಮುರುಗನ್ ದೇವಸ್ಥಾನ(ಅಥವಾ ಸ್ವಾಮಿನಾಥಸ್ವಾಮಿ ದೇವಸ್ಥಾನ) ವನ್ನು ಒಂದು ಕೃತಕ ಗುಡ್ಡದ ಮೇಲೆ ಕಟ್ಟಲಾಗಿದೆ. ಇದಕ್ಕೆ ಹತ್ತಲು 60 ಮೆಟ್ಟಿಲುಗಳಿದ್ದು, ಇದು ಮನುಷ್ಯನ ಜೀವಿತಾವಧಿಯಾದ 60 ವರ್ಷಗಳನ್ನು ಬಿಂಬಿಸುತ್ತದೆ ಎನ್ನುವುದು ಹಿಂದೂಗಳ ನಂಬಿಕೆ.
ಈ ದೇವಸ್ಥಾನಕ್ಕೆ ಮೂರು ಮಹಡಿಗಳಿದ್ದು, ಮೇಲಿನ ಮಹಡಿಗಳಿಗೆ ತುಂಬಾ ಕಡಿದಾದ ಮೆಟ್ಟಿಲುಗಳಿವೆ. ಇಲ್ಲಿನ ಕೊನೆಯ ಮಹಡಿಯಲ್ಲಿ ಗರ್ಭಗುಡಿಯಿದೆ. ಯಾರಾದರೂ ದೇವರಿಗೆ ಅಭಿಷೇಕ ಮಾಡಲು ಬಯಸಿದರೆ, ಅವರನ್ನು ಗರ್ಭಗುಡಿಯ ಒಳಗೆ ಕರೆದೊಯ್ಯಲಾಗುತ್ತದೆ. ಅಭಿಷೇಕವು ಸುಮಾರು 60 ನಿಮಿಷಗಳವರೆಗೆ ನಡೆದಿದ್ದು, ಈ ಸಂದರ್ಭದಲ್ಲಿ ದೇವರ ಸ್ತುತಿ ಹಾಗೂ ದೇವರಿಗೆ ವಿವಿಧ ಅರ್ಚನೆಗಳನ್ನು ಮಾಡಲಾಗುತ್ತದೆ. ಮಧ್ಯದ ಮಹಡಿಯಲ್ಲಿ ದೇವಸ್ಥಾನಕ್ಕೆ ಸುತ್ತು ಬರಬಹುದು. ಕೆಳಗಿನ ಮಹಡಿಯಲ್ಲಿ ಶಿವನ ದೇವಸ್ಥಾನವಿದೆ.
ದೇವಸ್ಥಾನದಲ್ಲಿ ವಸನ ಮತ್ತೆ ವಸತಿ ಸೌಕರ್ಯವಿದೆ. ಇದಲ್ಲದೆ, ಇಲ್ಲಿನ ಸುತ್ತಲಿನ ಉಪಹಾರಗೃಹವನ್ನೂ ಆರಿಸಿಕೊಳ್ಳಬಹುದು.


Click it and Unblock the Notifications