ಕಸ್ ಪತ್ಹರ್ ಅಥವಾ ಕಸ್ ಪ್ರಸ್ಥ ಭೂಮಿ ನಿಜಕ್ಕೂ ನೋಡುಗರನ್ನು ಸ್ಥಂಭೀಭೂತರನ್ನಾಗಿಸುವ ಪುಷ್ಪಗಳ ಕಣಿವೆ. ಇದು ಮಹಾರಾಷ್ಟ್ರ ರಾಜ್ಯದಲ್ಲಿದ್ದು ತಪೋಲದಲ್ಲಿದೆ. ಮುಂಗಾರು ಕಳೆದ ಮೇಲಿನ ಆಗಸ್ಟ್ ನಿಂದ ನವೆಂಬರ್ ನಡುವಿನ ಸಮಯದಲ್ಲಿ ಈ ಪ್ರಸ್ಥ ಭೂಮಿ ಸಂಪೂರ್ಣವಾಗಿ ಒಂದು ಹೂವಿನ ಹಾಸಿಗೆಯಾಗಿ ಬದಲಾಗುವುದನ್ನು ನೋಡುವುದೇ ಒಂದು ಅಧ್ಬುತ ಅನುಭವ. ಇಲ್ಲಿ ಸುಮಾರು 150 ಕ್ಕೂ ಹೆಚ್ಚಿನ ಬಗೆಯ ಹೂಗಳನ್ನು ನೋಡಬಹುದು. ಇಲ್ಲಿಗೆ ಹತ್ತಿರದ ಕಸ್ ನದಿ ಮುಂಗಾರು ಕಳೆದ ಬಳಿಕ ಅತ್ಯಂತ ಸುಂದರವಾಗಿ ಕಾಣುತ್ತದೆ.


Click it and Unblock the Notifications