ತಮೆಂಗ್ಲಾಂಗಿನ ಮುಖ್ಯ ಕಛೇರಿಯಿಂದ 27 ಕಿ.ಮೀ. ದೂರ ತೇಲುವಾನ್ ಗುಹೆ ಇದೆ. ಈ ಗುಹೆಯು 655.6 ಮೀಟರ್ಸ್ ಉದ್ದವಿದೆ. ಗುಹೆಗೆ 5 ನಿರ್ಗಮನ ದ್ವಾರ ಮತ್ತು 34 ಜಂಟಿ(ಸಂಗಮ) ಗಳಿವೆ. ಗುಹೆ ಮೇಲೆ ಉತ್ಖನನ ಉತ್ತರ ವಿಯೆಟ್ನಾಂನ ಹೊಬಿನಿಯನ್ ಸಂಸ್ಕೃತಿಯ ಸಾಕ್ಷ್ಯಾಧಾರಗಳು ಕಂಡುಬಂದಿವೆ ಮತ್ತು ಅವು ಯುಗಾಂತರದಿಂದ ಇವೆ ಎಂದು ಕಂಡುಬಂದಿದೆ.
ಗುಹೆಗಳಲ್ಲಿನ ಒಳಭಾಗವನ್ನು ಅನ್ವೇಷಿಸಲು ಬಯಸುವವರಿಗೆ, ಇಡೀ 655.6 ಮೀಟರ್ ಉದ್ದದ ಗುಹೆಯ ನಕ್ಷೆಯನ್ನು ಗುಹೆಯ ಪ್ರವೇಶದ್ವಾರದಲ್ಲಿ ಚಿತ್ರಿಸಿದ್ದಾರೆ. ಈ ನಕ್ಷೆಯು ಗುಹೆಯೊಳಗಿನ ಪ್ರತಿಯೊಂದು ಮೂಲೆ ಮತ್ತು ತಿರುವುಗಳನ್ನು ಕಂದುಹಿಡಿಯಲು ಸಹಾಯಮಾಡುತ್ತದೆ ಮತ್ತು ಓಣಿದಾರಿಗಳನ್ನು ಗುರುತಿಸಲು ಅನುಕೂಲಮಾಡಿಕೊಡುತ್ತದೆ. ನಕ್ಷೆಯನ್ನು ದ್ವಾರದಲ್ಲಿರುವ ಕಲ್ಲಿನ ಮೇಲೆ ಕೊರೆದು ಬಣ್ಣಹಚ್ಚಿದ್ದಾರೆ.
ತೇಲುವಾನ್ ಗುಹೆಯು ಸಾಹಸಿಗರಿಗೆ ಒಂದು ಕುತೂಹಲಕರ ತಾಣವಾಗಿದೆ. ನೀವು ನಿಮ್ಮ ಜೀವಮಾನದಲ್ಲಿ ಈ ಒಂದು ಅನುಭವ ನೀಡುವ ತಾಣವನ್ನು ಖಂಡಿತವಾಗಿ ಒಂದುಸಲ ಮಣಿಪುರಕ್ಕೆ ಭೇಟಿನೀಡಿದಾಗ ನಿಮ್ಮ ಪ್ರವಾಸಸ್ಥಳದ ಪಟ್ಟಿಯಲ್ಲಿ ತೇಲುವಾನ್ ಗುಹೆಯನ್ನು ಸೇರಿಸಲು ಮರೆಯಬೇಡಿ.


Click it and Unblock the Notifications