Search
  • Follow NativePlanet
Share
ಮುಖಪುಟ » ಸ್ಥಳಗಳು » ತಲಕಾಡು » ಆಕರ್ಷಣೆಗಳು » ಮಲ್ಲಿಕಾರ್ಜುನ ದೇವಾಲಯ

ಮಲ್ಲಿಕಾರ್ಜುನ ದೇವಾಲಯ, ತಲಕಾಡು

1

ತಲಕಾಡಿಗೆ ಹೋಗುವ ಯಾತ್ರಿಕರು ತಪ್ಪದೆ ಅಲ್ಲಿನ ಮಲ್ಲಿಕಾರ್ಜುನ ದೇವಾಲಯಕ್ಕೆ ಭೇಟಿ ನೀಡಬೇಕು. ಈ ದೇವಾಲಯವು ಮುಖ್ಯವಾಗಿ ಭ್ರಮರಾಂಬಿಕ ದೇವಿಗೆ ಅರ್ಪಣೆಯಾಗಿದ್ದು, ಮಲ್ಲಿಕಾರ್ಜುನ ಸ್ವಾಮಿಯ ಚಿಕ್ಕಲಿಂಗವನ್ನು ಹೊಂದಿದೆ. ಭಕ್ತಾದಿಗಳು ಸೂಕ್ಷ್ಮವಾಗಿ ಗಮನಿಸಿದರೆ ಲಿಂಗದ ಮೇಲೆ ಹೆಜ್ಜೆ ಗುರುತುಗಳನ್ನು ನೋಡಬಹುದು. ಸ್ಥಳೀಯರ ಪ್ರಕಾರ ಈ ಹೆಜ್ಜೆ ಗುರುತುಗಳು ಕಾಮಧೇನುವಿನ ಹೆಜ್ಜೆ ಗುರುತುಗಳಂತೆ. ಈ ದೇವಾಲಯ ಸಂಕೀರ್ಣದೊಳಗೆ ಸಂಧ್ಯಾ ಗಣಪತಿ, ವೀರಭದ್ರ ಮತ್ತು ಚಾಮುಂಡೇಶ್ವರಿ ಸನ್ನಿಧಿಗಳನ್ನು ಕಾಣಬಹುದು.ಪಂಚಲಿಂಗ ದರ್ಶನದ ವೇಳೆ ಭಕ್ತಾದಿಗಳು ಮಲ್ಲಿಕಾರ್ಜುನ ದೇವಾಲಯಕ್ಕೆ ಭೇಟಿಕೊಟ್ಟೇ ತೀರುತ್ತಾರೆ. ಭಕ್ತಾದಿಗಳು ವೈದ್ಯನಾಥ ಸ್ವಾಮಿ ದೇವಾಲಯದ ಮುಂಭಾಗವಿರುವ ಮಂಟಪದಲ್ಲಿನ ಶಿವಲಿಂಗಕ್ಕೆ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ.  ಅಸಂಖ್ಯಾತ ಭಕ್ತರು ಜನವರಿ ಮತ್ತು ಫೆಬ್ರವರಿಯ ಕಡೆಯ ವಾರದಲ್ಲಿ ಒಂದು ವಾರಗಳ ಕಾಲ ನಡೆಯುವ ಮಲ್ಲಿಕಾರ್ಜುನ ದೇವಾಲಯದ ಕೃಷಿ ಉತ್ಸವಕ್ಕೆ ಆಗಮಿಸುತ್ತಾರೆ. ಭಕ್ತಾದಿಗಳು  ಇಲ್ಲಿಂದ ಮುಡುಕುತೊರೆಗೆ ಹೋಗುವಾಗ ಹತ್ತಿರದಲ್ಲೆ ಸಿಗುವ ಅನಾದಿ ವೈಕುಂಠನಾಥ ಮತ್ತು ವೀರ ಆಂಜನೇಯ ದೇವಾಲಯಗಳಿಗೆ ಬೇಟಿಕೊಡಬಹುದು.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue