Search
  • Follow NativePlanet
Share
ಮುಖಪುಟ » ಸ್ಥಳಗಳು » ತಲಕಾಡು » ಆಕರ್ಷಣೆಗಳು » ಕೀರ್ತಿನಾರಾಯಣ ದೇವಾಲಯ

ಕೀರ್ತಿನಾರಾಯಣ ದೇವಾಲಯ, ತಲಕಾಡು

2

ತಲಕಾಡು ನೋಡಲು ಹೋಗುವ ಪ್ರವಾಸಿಗರು ಇಲ್ಲಿನ ಕೀರ್ತಿನಾರಾಯಣ ದೇವಾಲಯಕ್ಕೆ ಒಮ್ಮೆ ಭೇಟಿ ಕೊಡಬಹುದು. ಈ ದೇವಾಲಯವನ್ನು 1911ರಲ್ಲಿ ಉತ್ಖನನ ಮಾಡಿ ಹೊರತೆಗೆಯಲಾಯಿತು. ಈ ದೇವಾಲಯ ಹೊಯ್ಸಳರ ಅರಸ ವಿಷ್ಣುವರ್ಧನನಿಂದ  ಕಟ್ಟಿಸಲ್ಪಟ್ಟಿತು. ಇಲ್ಲಿರುವ ಕೀರ್ತಿ ನಾರಾಯಣ ಮತ್ತು ರಂಗನಾಥ ಮೂರ್ತಿಗಳನ್ನು ಸ್ವತಃ ವಿಷ್ಣುವರ್ದನನೆ ಪ್ರತಿಷ್ಠಾಪಿಸಿದನಂತೆ.ಮೊದಲಿಗೆ ಇಲ್ಲಿ ಸುಂದರವಲ್ಲಿ ತಾಯರುರವರ ಸನ್ನಿಧಿ ಇಲ್ಲಿ ಇತ್ತಂತೆ, ನಂತರ ಅದರ ಸ್ಥಳದಲ್ಲಿ  ಕೀರ್ತಿ ನಾರಾಯಣ ಮೂರ್ತಿ ಇರುವ ನವರಂಗ ಮಂಟಪ ಸ್ಥಾಪಿತವಾಯಿತಂತೆ. ಈ ದೇವಾಲಯವು ತನ್ನ ಆವರಣದಲ್ಲಿ ನಮ್ಮಳ್ವರ್, ರಾಮಾನುಜಾಚಾರ್ಯ ಮತ್ತು ವೇದಾಂತ ದೇಸಿಕರರ ಮೂರ್ತಿಗಳನ್ನು ಒಳಗೊಂಡಿದೆ. ದೇವಾಲಯದ ಒಳಗೆ ಆರಾಧನ ಮಂಟಪವಿದ್ದು ಅದು ವಿಶ್ವಸೇನ ಮತ್ತು ಯೋಗ ನರಸಿಂಹರ ಮೂರ್ತಿಗಳನ್ನು ಒಳಗೊಂಡಿದೆ.ಕೀರ್ತಿನಾರಾಯಣ ದೇವಾಲಯದ ಮತ್ತೊಂದು ವಿಶೇಷತೆ  ಇಲ್ಲಿರುವ 9 ಅಡಿ ಎತ್ತರದ ವಿಷ್ಣು ಮೂರ್ತಿ, ಇದನ್ನು ಗರುಡ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಭಕ್ತಾದಿಗಳು ಈ ಮೂರ್ತಿ ನಾಲ್ಕು ಕೈಗಳಲ್ಲಿ ಚಕ್ರ, ಗದೆ, ಶಂಖ ಮತ್ತು ಕಮಲ ಹಿಡಿದಿರುವುದನ್ನು ಕಾಣಬಹುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat