ಸೆಮರ್ ಸೊಟ್ ವನ್ಯಧಾಮವು ಸುರ್ಗುಜಾ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿರುವ ಅಂಬಿಕಾಪುರದಿಂದ 50 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಅಂಬಿಕಾಪುರ್- ಡಾಲ್ಟೊನ್‍ಗುಂಜ್ ರಸ್ತೆಯಲ್ಲಿ ನೆಲೆಗೊಂಡಿದೆ. ಈ ವನ್ಯಧಾಮವು 430.36 ಚ.ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ಜೈನಗರ್ ಇಲ್ಲಿಗೆ ಸಮೀಪದ ರೈಲು ನಿಲ್ದಾಣವಾಗಿದೆ ಮತ್ತು ಇಲ್ಲಿಂದ 31 ಕಿ.ಮೀ ದೂರದಲ್ಲಿರುವ ವಾರಣಾಸಿಯಲ್ಲಿ ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವು ನೆಲೆಗೊಂಡಿದೆ. ಈ ವನ್ಯಧಾಮವು ರಾಮ್‍ಗಢ್ ಬೆಟ್ಟಗಳಲ್ಲಿ ನೆಲೆಗೊಂಡಿದೆ. ಜೊತೆಗೆ ಇದು ಬಿಹಾರದೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಈ ಪ್ರದೇಶದ ಮೂಲಕ ಕರ್ಕಾಟಕ ವೃತ್ತವು ಹಾದು ಹೋಗುತ್ತದೆ.
ಮಿಶ್ರ ಬಗೆಯ ದಟ್ಟ ಕಾಡನ್ನು ಈ ವನ್ಯಧಾಮದಲ್ಲಿ ನಾವು ಕಾಣಬಹುದು. ಸಾಲ್ ಮರಗಳು ಇಲ್ಲಿ ಯಥೇಚ್ಛವಾಗಿ ಕಂಡು ಬರುತ್ತವೆ. ರಿವರೈನ್ ಫಾರೆಸ್ಟ್ ಎಂಬ ಜಾತಿಯ ಮರಗಳು ಇಲ್ಲಿ ಕಂಡು ಬರುತ್ತವೆ. ನೀಲ್‍ಗಾಯ್, ಸಾಂಬರ್, ಚಿಂಕರ, ಕಾಡು ಹಂದಿ, ನರಿ, ಕಾಡು ಬೆಕ್ಕುಗಳಂತಹ ವನ್ಯ ಮೃಗಗಳನ್ನು ಸೆಮರ್ ಸೊಟ್ ವನ್ಯಧಾಮದಲ್ಲಿ ಕಾಣಬಹುದು.
ಜನವರಿಯಿಂದ ಮೇವರೆಗಿನ ಅವಧಿಯು ಈ ವನ್ಯಧಾಮಕ್ಕೆ ಭೇಟಿ ನೀಡಲು ಹೇಳಿ ಮಾಡಿಸಿದ ಸಮಯವಾಗಿದೆ. ಸೆಮರ್ ಸೊಟ್ ಪಟ್ಟಣವು ಇಲ್ಲಿಂದ 50 ಕಿ.ಮೀ ದೂರದಲ್ಲಿದೆ. ಅಂಬಿಕಾಪುರವು ಪ್ರವಾಸಿಗರ ವಾಸ್ತವ್ಯಕ್ಕೆ ಅನುಕೂಲಕರವಾದ ಅಂಶಗಳನ್ನು ಹೊಂದಿದೆ.


Click it and Unblock the Notifications