ಮಹಾಮಾಯ ಮಂದಿರ್ ಸುರ್ಗುಜಾದಲ್ಲಿರುವ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿರುವುದಲ್ಲದೆ, ಪ್ರಸಿದ್ಧ ಯಾತ್ರಸ್ಥಳವಾಗಿ ಸಹ ಗುರುತಿಸಲ್ಪಟ್ಟಿದೆ. ಇದು ಸುರಜ್‍ಪುರದಿಂದ 4 ಕಿ.ಮೀ ದೂರದಲ್ಲಿರುವ ದೇವಿಪುರದಲ್ಲಿ ನೆಲೆಗೊಂಡಿದೆ. ದೇಶದ ನಾನಾ ಮೂಲೆಗಳಿಂದ ಭಕ್ತಾಧಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ. ಹಾಗಾಗಿ ಇದು ಈ ರಾಜ್ಯದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ಗುರುತಿಸಲ್ಪಟ್ಟಿದೆ. ನವರಾತ್ರಿ ಸಂದರ್ಭದಲ್ಲಿ ಇಲ್ಲಿನ ನಿವಾಸಿಗಳು ಮೇಲಾವನ್ನು ಆಚರಿಸುತ್ತಾರೆ. ಭಕ್ತಾಧಿಗಳು ಮಹಾಮಾಯ ದೇವಿಗೆ ಅಪಾರ ಶ್ರದ್ಧೆ ಮತ್ತು ಭಕ್ತಿಗಳಿಂದ ನಡೆದುಕೊಳ್ಳುತ್ತಾರೆ.
ಇಲ್ಲಿ ನಡೆಯುವ ಉತ್ಸವಗಳಲ್ಲಿ ಪ್ರಮುಖವಾಗಿ ಹೊರರಾಜ್ಯದ ಜನರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಸುರಜ್‍ಪುರದ ಭಕ್ತಿ ಮಂಡಳಿಯು ಯಾತ್ರಾರ್ಥಿಗಳಿಗೆ ದೇವಿಪುರದವರೆಗೆ ಉಚಿತ ಬಸ್ ಸೌಕರ್ಯವನ್ನು ಒದಗಿಸುತ್ತದೆ. ಇದು ಪ್ರತಿನಿತ್ಯ ದೊರೆಯುತ್ತದೆ. ಈ ಸ್ಥಳವು ಪ್ರಸಿದ್ಧಿಪಡೆಯಲು ಸರ್ಕಾರಿ ಅಂಗ ಸಂಸ್ಥೆಗಳು ಮತ್ತು ಸ್ಥಳೀಯ ಜನರು ತಮ್ಮ ಕೈಲಾದ ಸಹಕಾರವನ್ನು ನೀಡಿದ್ದಾರೆ. ಶ್ಯಾಮ್ ಬಾಬಾ ದೇವಾಲಯವು ಸುರಜ್‍ಪುರದಲ್ಲಿರುವ ಮತ್ತೊಂದು ಪ್ರಮುಖ ಧಾರ್ಮಿಕ ತಾಣವಾಗಿದೆ. ಇಲ್ಲಿ ಶ್ಯಾಮ ದೇವರ ಹುಟ್ಟು ಹಬ್ಬದಂದು ದೊಡ್ಡ ಮೇಲಾ ನಡೆಯುತ್ತದೆ. ಸುರ್ಗುಜಾದ ಎಲ್ಲಾ ಕಡೆಗಳಿಂದ ಜನರು ಈ ಮೇಲಾ ನೋಡಲು ಆಗಮಿಸುತ್ತಾರೆ.


Click it and Unblock the Notifications