Search
  • Follow NativePlanet
Share
ಮುಖಪುಟ » ಸ್ಥಳಗಳು » ಸುರ್ಗುಜಾ » ಆಕರ್ಷಣೆಗಳು » ದೇವಗಢ್

ದೇವಗಢ್, ಸುರ್ಗುಜಾ

1

ದೇವಗಢ್ ಎಂಬುದು ಅಂಬಿಕಾಪುರದಿಂದ 40 ಕಿ.ಮೀ ಮತ್ತು ಸುರಜ್‍ಪುರದಿಂದ 35 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ರಿಹಾಂಡ್ ಎಂಬ ನದಿಯ ತೀರದಲ್ಲಿ ನೆಲೆಗೊಂಡಿದೆ. ದೇವಗಢ್ ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರವಾದ ಪುಣ್ಯಕ್ಷೇತ್ರವಾಗಿದೆ.

ಇಲ್ಲಿ ಈಶ್ವರ ಅಥವಾ ಭೋಲೆನಾಥ್‍ರವರ ಮಂದಿರವಿದೆ. ಬಾಬಾ ಭೋಲೆನಾಥ್ ಭಾರತದಲ್ಲಿರುವ "ಜ್ಯೋತೀರ್ಲಿಂಗ"ಗಳಲ್ಲಿ ಒಂದಾಗಿದೆ. ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಇಲ್ಲಿ ಬೃಹತ್ ಜಾತ್ರೆಯು ನಡೆಯುತ್ತದೆ. ಈ ಉತ್ಸವವು ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರವಾದ ಉತ್ಸವವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಈ ಸಂದರ್ಭದಲ್ಲಿ ಇತರ ರಾಜ್ಯಗಳ ಭಕ್ತಾಧಿಗಳು ಸಹ ಇಲ್ಲಿಗೆ ಆಗಮಿಸುತ್ತಾರೆ. ಮಧ್ಯಪ್ರದೇಶ್, ಬಿಹಾರ್, ಉತ್ತರ್ ಪ್ರದೇಶ್, ಜಾರ್ಖಂಡ್, ಒರಿಸ್ಸಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಭಕ್ತಾಧಿಗಳು ಬಂದು ರಿಹಾಂಡ್ ನದಿಯ ತೀರದಲ್ಲಿ ಬೀಡು ಬಿಡುತ್ತಾರೆ.

ಅಲ್ಲಿರುವ ಗಾಯತ್ರಿ ಮಂದಿರದ ಬಳಿಯಲ್ಲಿ ಹರಿಯುವ ರಿಹಾಂಡ್ ನದಿಯಲ್ಲಿ ಸ್ನಾನಮಾಡಿ, ಅಲ್ಲಿನ ಪವಿತ್ರ ನೀರನ್ನು ಲಿಂಗಕ್ಕೆ ಅಭಿಷೇಕ ಮಾಡಲಾಗುತ್ತದೆ. ಶಿವರಾತ್ರಿಯ ಸಂದರ್ಭದಲ್ಲಿ ಇಲ್ಲಿ ಜಾಗರಣೆಯನ್ನು, ಭಜನೆಯನ್ನು ಸಹ ಕೈಗೊಳ್ಳಲಾಗುತ್ತದೆ. ಪುಣ್ಯ ಕ್ಷೇತ್ರವೆಂಬ ಅಭಿದಾನದ ಜೊತೆಗೆ ಡಿಯೊಗಢ್‍ನಲ್ಲಿ ಅದ್ಭುತವಾದ ಪ್ರಾಕೃತಿಕ ಸೌಂದರ್ಯವನ್ನು ಸಹ ಕಾಣಬಹುದು. ರಿಹಾಂಡ್ ನದಿಯ ದಂಡೆಯು ಅತ್ಯಂತ ಪ್ರಶಾಂತವಾಗಿದ್ದು, ಕಣ್ಣುಗಳಿಗೆ ಮುದವನ್ನು ನೀಡುತ್ತದೆ.

ದೇವಗಢ್ ಅನ್ನು ಡಿಯೊರಿಯ ಎಂದು ಸಹ ಕರೆಯುತ್ತಾರೆ. ಇಲ್ಲಿ ಹಲವಾರು ದೇವಾಲಯಗಳು ಅವಶೇಷಗಳಾಗಿ ಬಿದ್ದಿರುವುದನ್ನು ನಾವು ಕಾಣಬಹುದು. ಇಲ್ಲಿ ನಡೆದ ಉತ್ಖನನಗಳಲ್ಲಿ ಹಲವಾರು ದೇವರ ಮೂರ್ತಿಗಳು ಹೊರತೆಗೆಯಲ್ಪಟ್ಟವು. ಗೂರಿ- ಶಂಕರ್ ದೇವಾಲಯವು ಆ ಕಾಲದ ರಾಜರನ್ನು ಪ್ರತಿನಿಧಿಸುತ್ತ ನಿಂತಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed