Search
  • Follow NativePlanet
Share
ಮುಖಪುಟ » ಸ್ಥಳಗಳು » ಸುರ್ಗುಜಾ » ಆಕರ್ಷಣೆಗಳು » ದೀಪದಿಹ್

ದೀಪದಿಹ್, ಸುರ್ಗುಜಾ

5

ಪ್ರಾಚೀನ ಕಾಲದಲ್ಲಿ ಚತ್ತಿಸ್‍ಗಡ್ ದಕ್ಷಿಣ ಕೋಶಲ ಎಂದು ಕರೆಯಲ್ಪಡುತ್ತಿತ್ತು. ಈ ಹೆಸರು ರಾಮಾಯಣ ಮತ್ತು ಮಹಾಭಾರತಗಳೆರಡರಲ್ಲು ಉಲ್ಲೇಖಗೊಂಡಿದೆ. ಇದು ಹಲವಾರು ಹಿಂದೂ ರಾಜರುಗಳಿಂದ ಆಳಲ್ಪಟ್ಟಿದೆ. ಅವರು ಈ ರಾಜ್ಯದಲ್ಲಿ ಹಲವಾರು ದೇವಾಲಯಗಳನ್ನು ನಿರ್ಮಿಸಿದ್ದಾರೆ.  ಸುರ್ಗುಜಾವು ಹಲವಾರು ದೇವಾಲಯಗಳಿಗೆ ಖ್ಯಾತಿಯನ್ನು ಪಡೆದಿದೆ. ಸುರ್ಗುಜಾದಲ್ಲಿರುವ ದೀಪದಿಹ್ ಜಿಲ್ಲಾಕೇಂದ್ರವಾದ ಅಂಬಿಕಾಪುರದಿಂದ 70 ಕಿ,ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಸಮ್ರಿ ತಾಲ್ಲೂಕಿನಲ್ಲಿ ನೆಲೆಗೊಂಡಿದ್ದು, ಕುಟ್ಚ ರಸ್ತೆಯ ಮೂಲಕ ಸಂಪರ್ಕಿಸಬಹುದು.

ಇಲ್ಲಿ ಒಂದು ಶಂಕರ್ ದೇವಾಲಯವಿದೆ. ಇದರ ಸುತ್ತಲೂ ವಿಷ್ಣು, ಕಾರ್ತಿಕೇಯ, ಗಣೇಶ ಮತ್ತು ಮಹಾ ದುರ್ಗಾ ದೇವಿಯರ ದೇವಾಲಯಗಳನ್ನು ನಾವು ಕಾಣಬಹುದು. ಎಲ್ಲಾ ಮೂರು ದೇವರುಗಳನ್ನು ಈಶ್ವರನ ವಿವಿಧ ರೂಪಗಳೆಂದೆ ಪರಿಗಣಿಸಲಾಗುತ್ತದೆ. ಇವರೆಲ್ಲರು ನಮ್ಮನ್ನು ರಕ್ಷಿಸಲು ಹಾಗು ನಮಗೆ ಒಳ್ಳೆಯದನ್ನು ಮಾಡುವ ಸಲುವಾಗಿ ಇಲ್ಲಿ ನೆಲೆಗೊಂಡಿದ್ದಾರೆಂದು ನಂಬಲಾಗಿದೆ.

ಇಲ್ಲಿ ಅವಶೇಷಗಳ ರೂಪದಲ್ಲಿರುವ ಕೆಲವು ದೇವಾಲಯಗಳು ಮತ್ತು ಕಲ್ಯಾಣಿಗಳು ಹಿಂದೆ ಇಲ್ಲಿ ದ್ರಾವಿಡ ಸಾಮ್ರಾಜ್ಯವು ಹರಡಿತ್ತು ಎಂಬುದನ್ನು ತೋರಿಸುತ್ತದೆ. ಇಲ್ಲಿರುವ ಒಂದು ದೊಡ್ಡ ಕಲ್ಲಿನ ಚಿತ್ರವು ಈ ಪ್ರದೇಶವು ಸಾಮ್ನಿಸಿಂಗ್‍ರವರ ಸಾಮ್ರಾಜ್ಯಕ್ಕೆ ಸೇರಿತ್ತು ಎಂದು ಸಹ ತೋರಿಸುತ್ತದೆ. ಒಂದು ಶಿಥಿಲವಾದ ದೇವಾಲಯದಲ್ಲಿ ಮಹಿಷ ಮರ್ದಿನಿಯ ಸುಂದರವಾದ ವಿಗ್ರಹವನ್ನು ಸಹ ನಾವು ಕಾಣಬಹುದು.

ಇಲ್ಲಿನ ಕಲ್ಲುಗಳ ಮೇಲೆ ವಿವಿಧ ದೇವಾನುದೇವತೆಗಳ ವಿಗ್ರಹಗಳನ್ನು, ರಾಜ ಲಾಂಛನಗಳನ್ನು ಕಾಣಬಹುದಾಗಿದೆ. ಪೂರ್ವಕ್ಕೆ ಇಲ್ಲಿ ಒಂದು ನಂದಿಯ ವಿಗ್ರಹವನ್ನು ಉತ್ಖನನ ಮಾಡಿ ತೆಗೆಯಲಾಗಿದೆ. ಇದರ ಜೊತೆಗೆ ಭುರ್ಮ ಕಲೆಗೆ ಸಂಬಂಧಿಸಿದ ಕೆಲವು ವಿಗ್ರಹಗಳನ್ನು ಸಹ ಇಲ್ಲಿನ ಉತ್ಖನನದಲ್ಲಿ ಹೊರತೆಗೆಯಲಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed