ಇದು ಪೂರ್ಣ ನದಿಯ ದಂಡೆಯಲ್ಲಿದೆ. ದಕ್ಷಿಣ ಸೂರತ್ನಿಂದ 30 ಕಿಮೀ ದೂರದಲ್ಲಿರುವ ಈ ಪ್ರದೇಶ ಇಂದು ಪ್ರಮುಖ ವ್ಯಾಪಾರಿ ಕೇಂದ್ರ. 1142ರಲ್ಲಿ ಇಲ್ಲಿ ಪಾರ್ಸಿಮಂದಿ ಬಂದು ನೆಲೆನಿಂತರು. ಇಲ್ಲಿ ಅಗ್ನಿ ದೇವಾಲಯ ಅಥವ ಆತಷ್ ಬೆಹ್ರಾಮ್ ಮತ್ತಿತರ ಸಣ್ಣ ಅಗೈರಿಸ್ಗಳಿವೆ. ಇದರೊಂದಿಗೆ ಪಾರ್ಶ್ವನಾಥ ಜೈನ ಮಂದಿರ, ಸೈಯದ್ ಸಾದತ್ ಕಿ ದರ್ಗಾ ಇವು ನವ್ಸಾರಿಯಲ್ಲಿ ಭೇಟಿ ನೀಡಬೇಕಾದ ಕೆಲವು ಸ್ಥಳಗಳು. ಭಾರತದಲ್ಲಿ ಮೊದಲ ಉಕ್ಕಿನ ಕಾರ್ಖಾನೆಯನ್ನು ಸ್ಥಾಪಿಸಿದ ಮತ್ತು ಟಾಟಾ ಕೈಗಾರಿಕಾ ಸಮೂಹಗಳ ಜನಕ ಜಂಶೆಡ್ಜಿ ಟಾಟಾ ಇಲ್ಲಿನವರು. ಇವರ ಮನೆಯನ್ನು ಇಂದು ಕೂಡ ಸಂರಕ್ಷಿಸಿಡಲಾಗಿದೆ.


Click it and Unblock the Notifications