Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀನಗರ » ಆಕರ್ಷಣೆಗಳು » ವುಲ್ಲಾರ್ ಸರೋವರ

ವುಲ್ಲಾರ್ ಸರೋವರ, ಶ್ರೀನಗರ

2

ವುಲ್ಲಾರ್ ಸರೋವರ, ಕಾಶ್ಮೀರದಲ್ಲಿದ್ದು ಇದು ಭಾರತದಲ್ಲಿಯೇ ಅತ್ಯಂತ ಸ್ವಚ್ಛ ನೀರಿನ ಸರೋವರ ಹಾಗೂ ಏಷ್ಯಾದಲ್ಲಿರುವ ಸ್ವಚ್ಛ ಸರೋವರಗಳಲ್ಲಿ ಒಂದು ಎಂಬ ಕೀರ್ತಿಗೆ ಪಾತ್ರವಾಗಿದೆ. ಈ ಸರೋವರ ಪ್ರಾಥಮಿಕವಾಗಿ ಮಹಾಪದ್ಮಸರ್ ಎಂದು ಕರೆಯಲ್ಪಟ್ಟಿದ್ದು, ಪ್ರಸಿದ್ಧವಾದ ಪಕ್ಷಿ ಅಭಯಾರಣ್ಯ, ನಾಲ್ ಸರೋವರ್ ದ ಹತ್ತಿರವಿದೆ. ಇದು ಹಲವಾರು ಪಕ್ಷಿಗಳ, ಮೀನುಗಳ ವಾಸಸ್ಥಾನವಾಗಿದ್ದು ಝೀಲಂ ನದಿಯಿಂದ ಇಲ್ಲಿಗೆ ನೀರನ್ನು ಪಡೆಯಲಾಗುತ್ತದೆ. ಈ ಸರೋವರದ ಜಲಾನಯನ ಪ್ರದೇಶವು ಋತುಗಳಿಗೆ ತಕ್ಕ ಹಾಗೆ ಬದಲಾವಣೆಯನ್ನು ಹೊಂದುತ್ತಿದ್ದು, ಸಾಮಾನ್ಯವಾಗಿ 30 ಚದರ ಕಿ.ಮೀನಿಂದ 260 ಚ. ಕಿ.ಮೀ ವಿಸ್ತಾರವಾಗಿರುತ್ತದೆ.  

ಇಲ್ಲಿ ಕಂಡುಬರುವ ಪ್ರಮುಖವಾದ ಮೀನುಗಳೆಂದರೆ ಸಾಮಾನ್ಯ ಕಾರ್ಪ್, ಗುಲಾಬಿ ಬಾರ್ಬ್, ಮೊಸ್ಕಿಟೊ ಫಿಷ್, ನೆಮಾಚೆಲಿಯಸ್, ಕ್ರೊಸೊಚೆಲಿಯಸ್ ಲಾಟಿಯಸ್ ಮತ್ತು ವಿವಿಧ ಹಿಮ ಟ್ರೌಟ್. ಮೀನು ಇಲ್ಲಿನ ಸ್ಥಳೀಯರ ಪ್ರಮುಖ ಆಹಾರವಾಗಿದ್ದು, ಸುಮಾರು 8,000 ಮೀನುಗಾರರು ಮೀನುಗಾರಿಕೆಯನ್ನೆ ತಮ್ಮ ಜೀವನಾಧಾರವನ್ನಾಗಿಸಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಕಂಡುಬರುವ ಜನಪ್ರಿಯ ಪಕ್ಷಿಗಳೆಂದರೆ ನೀಲಿ ರಾಕ್ ಪಾರಿವಾಳ, ಗೋಲ್ಡನ್ ಹೊನ್ನಕ್ಕಿ, ಆಲ್ಪೈನ್ ಸ್ವಿಫ್ಟ್, ಗುಬ್ಬಚ್ಚಿ ಗಿಡುಗ ಮತ್ತು ಸಣ್ಣ ಬೆರಳಿನ ಹದ್ದುಗಳು.

ಈ ಸರೋವರದ ಮಧ್ಯದಲ್ಲಿ ಚಕ್ರವರ್ತಿ ಝೈನ್ ಉಲ್ ಅಬಿದಿನ್ ನಿಂದ ನಿರ್ಮಿಸಲ್ಪಟ್ಟ ಪ್ರಾಚೀನ ದ್ವೀಪದ ಅವಶೇಷಗಳನ್ನು ಕಾಣಬಹುದು. ಪೊಹರು, ಎರಿನ್, ಹರ್ಬುಜಿ ಮತ್ತು ಆರಹ್ ಕಾಲುವೆಗಳು ಈ ಸರೋವರಕ್ಕೆ ಹರಿದು ಬರುತ್ತವೆ. ಈ ಸ್ಥಳಕ್ಕೆ ಭೇಟಿ ನೀಡಲು ಸೂಕ್ತ ಸಮಯ ಏಪ್ರಿಲ್ ಮತ್ತು ಜೂನ್ ತಿಂಗಳುಗಳ ನಡುವಿನ ಅವಧಿ.

One Way
Return
From (Departure City)
To (Destination City)
Depart On
06 Jun,Sat
Return On
07 Jun,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Jun,Sat
Check Out
07 Jun,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Jun,Sat
Return On
07 Jun,Sun