ರೋಝಬಲ್, ಶ್ರೀನಗರದ ಖನ್ಯರ್ಜಿಲ್ಲೆಯಲ್ಲಿರುವ ವಿವಾದಾತ್ಮಕ ಧಾರ್ಮಿಕ ಸ್ಥಳ. ಈ ಸ್ಥಳ ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಎರಡೂ ಸಮುದಾಯದವರೂ ತಮ್ಮದೆಂದು ಹೇಳಿಕೊಳ್ಳುತ್ತಾರೆ. ಮುಸ್ಲಿಮರ ಪ್ರಕಾರ ಈ ಸ್ಥಳ, ಮುಸ್ಲೊಂ ಸಂತ ಜುಯ್ ಅಸಫ್ ನ ಸಮಾಧಿಯನ್ನು ಹೊಂದಿದ್ದರೆ, ಕ್ರೈಸ್ತರು ಯೇಸುಕ್ರಿಸ್ತನ ದೇಹವನ್ನು ಇಲ್ಲಿ ಸಮಾಧಿ ಮಾಡಲಾಗಿದೆ ಎಂದು ವಾದಿಸುತ್ತಾರೆ. ಈ ದೇವಾಲಯ ಜೈರತಿ ಹಝರತಿ ಯುಝಾ ಆಸುಫ್ ಎಂದೂ ಜನಪ್ರಿಯವಾಗಿದೆ.
ಕ್ರಿಶ್ಚಿಯನ್ ಧರ್ಮದ ಪ್ರವಾದಿ, ಜೀಸಸ್ ಕ್ರಿಸ್ತನನ್ನು ಶಿಲುಭೆಗೇರಿಸಿದ ನಂತರ ಅವನ ದೇಹವನ್ನು ಯಹೂದಿ ಪದ್ಧತಿಗಳು ಮತ್ತು ಸಂಪ್ರದಾಯಗಳ ಪ್ರಕಾರ ಈ ಸ್ಥಳದಲ್ಲಿಯೇ ಹೂಳಲಾಯಿತು ಎಂದು ಹೇಳಲಾಗುತ್ತದೆ. ಆದರೆ, ಸ್ಥಳೀಯ ನಂಬಿಕೆಗಳ ಪ್ರಕಾದ ಈ ಸ್ಥಳ, ಸ್ಥಳೀಯ ಮುಸ್ಲಿಂ ಸಂತ, ಮೀರ್ ಸಯ್ಯಿದ್ ನಸೀರುದ್ದೀನ್ ನ ದೇಹವನ್ನುಇಸ್ಲಾಮಿಕ್ ಸಂಪ್ರದಾಯಗಳ ಪ್ರಕಾರ ಇಲ್ಲಿ ಸಮಾಧಿ ಮಾಡಲಾಯಿತು ಎಂದು ನಂಬಲಾಗಿದೆ. ಪ್ರಸ್ತುತ ಈ ದೇಗುಲವನ್ನು ಸುನ್ನಿ ಮುಸ್ಲಿಮರ ನಿರ್ದೇಶಕರ ಮಂಡಳಿ ರೋಜಾ ಬಾಲ ದೇಗುಲದ ಆಡಳಿತವು ನೋಡಿಕೊಳ್ಳುತ್ತಿದೆ.


Click it and Unblock the Notifications