1623 ರಲ್ಲಿ ನೂರ್ ಜಹಾನ್ ನಿರ್ಮಿಸಿದ ಪತ್ಥರ್ ಮಸೀದಿ, ಕಾಶ್ಮೀರದಲ್ಲಿ ಜೀವಂತವಾಗಿರುವ ಅತೀ ದೂಡ್ಡ ಮೊಘಲ್ ರಚನೆ ಎಂದು ಪರಿಗಣಿಸಲಾಗುತ್ತದೆ. ಝೀಲಂ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಮಸೀದಿ, ಷಾ ಹಮ್ದನ್ ಮಸೀದಿಗೆ ಎದುರಾಗಿದೆ. ಈ ಮಸೀದಿಯ ನಿರ್ಮಾಣ, ಪ್ರಸಿದ್ಧ ಮೊಘಲ್ ಇತಿಹಾಸಕಾರ ಮತ್ತು ವಾಸ್ತುಶಿಲ್ಪಿ, ಮಲ್ಲಿಕ್ ಹೈದರ್ ಚೌಧರಿ ಮೇಲ್ವಿಚಾರಣೆಯಲ್ಲಿ ನಡೆಯಿತು ಎಂದು ನಂಬಲಾಗಿದೆ. ಮಸೀದಿಯ ದ್ವಾರದ ಮಧ್ಯದಲ್ಲಿ ಒಂದು ದೊಡ್ಡ ಕಮಾನಿನ ಜೊತೆಗೆ ಇನ್ನೂ ಒಂಬತ್ತು ಕಮಾನುಗಳನ್ನು ಸಮತಲವಾಗಿ ನಿರ್ಮಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ, ಎಲ್ಲಾ ಕಮಾನುಗಳನ್ನು ಕಲ್ಲುಗಳ ಸಹಾಯದಿಂದ ಮುಚ್ಚಲಾಗಿದೆ.
ಈಗ ಈ ಮಸೀದಿಯು ಅವಶೇಷಗಳ ರೂಪದಲ್ಲಿದ್ದು, ಮೊಘಲ್ ವಾಸ್ತುಶಿಲ್ಪ ಶೈಲಿಯಲ್ಲಿ ಆಸಕ್ತಿಯುಳ್ಳ ಅನೇಕ ಪುರಾತತ್ತ್ವ ಶಾಸ್ತ್ರಜ್ಞರು ಮತ್ತು ಇತಿಹಾಸಕಾರರನ್ನು ಆಕರ್ಷಿಸುತ್ತದೆ.


Click it and Unblock the Notifications