ಮಖ್ ದುಮ್ ಸಾಹಿಬ್ ಮಸೀದಿಯ ಕೆಳಗೆ ಇರುವ ಅಖಂಡ ಮುಲ್ಲಾ ಮಸೀದಿ ಅಥವಾ ಅಖೂನ್ ಮುಲ್ಲಾ, ಶಹಜಹಾನನ ಪುತ್ರನಾದ ದಾರಾ ಶಿಖೊ ಕಟ್ಟಿಸಿದ ಒಂದು ಸಣ್ಣ ಮಸೀದಿಯಾಗಿದೆ. ದಾರಾ ಶಿಖೊ ತನ್ನ ಗುರು ಅಖುನ ಮುಲ್ಲಾ ನೆನಪಿಗಾಗಿ ಈ ಮಸೀದಿಯನ್ನು ಕಟ್ಟಿಸಿದನು. ಹೊಳೆಯುವ ಕಂದು ಬಣ್ಣದ ಸುಣ್ಣದ ಕಲ್ಲಿನಿಂದ ಕಟ್ಟಲಾಗಿರುವ ಈ ಮಸೀದಿಯನ್ನು ಮಸೀದಿಯ ಒಳಗಿನ ಮಸೀದಿ ಎಂದೇ ಕರೆಯುತ್ತಾರೆ. ಇದರ ಮುಖ್ಯ ಅಂಗಳ ಮತ್ತು ಪವಿತ್ರ ಸನ್ನಿಧಿಯು ಸುತ್ತಲೂ ಕಟ್ಟಲಾಗಿರುವ ಚಾವಡಿಯಿಂದ ಒಂದಕ್ಕೊಂದು ಬೇರ್ಪಟ್ಟಿವೆ.
ಈ ಮಸೀದಿಯ ಮುಖ್ಯ ವೇದಿಕೆಯನ್ನು ಕಮಲದ ಆಕಾರದ ಕಲ್ಲು ಆವರಿಸಿರುವುದು ಇಲ್ಲಿನ ಒಂದು ಪ್ರಧಾನ ಆಕರ್ಷಣೆ. ಇದರ ಮೇಲೆ 1649 ರ ಅವಧಿಯ ಶಾಸನವೂ ಇದೆ. ವಿಶೇಷವಾಗಿ ಕಟ್ಟಿದ ಪ್ರಾರ್ಥನಾ ಸಭಾಂಗಣ ಇಲ್ಲಿನ ಇನ್ನೊಂದು ವಿಶೇಷ.


Click it and Unblock the Notifications