ಶಾಹ್ ಹಮ್ದಾನ್ ಅವರ ಖಾಂಕಾಹ್ ವನ್ನು ಷಾಹ್ ಇ ಹಮ್ದಾನ್ ಮಸೀದಿ ಹಾಗೂ ಖಾಂಕಾ ಎ ಮುಲ್ಲಾ ಎಂದೂ ಕರೆಯಲಾಗುತ್ತದೆ. ಇದನ್ನು ಸುಲ್ತಾನ್ ಸಿಕಂದರ್ ಕ್ರಿ.ಶ 1400 ರಲ್ಲಿ ಕಟ್ಟಿಸಿದನು. ಇದು ಝೀಲಮ್ ನದಿಯ ತೀರದಲ್ಲಿದೆ. ಇದನ್ನು ಕಾಶ್ಮೀರದಲ್ಲಿ ಇಸ್ಲಾಂ ಅನ್ನು ಪ್ರಚಾರ ಮಾಡಿದ ಮೀರ್ ಸಯ್ಯದ್ ಅಲಿ ಹಮ್ದಾನಿ ಎಂಬ ಮುಸ್ಲಿಮ್ ಸಂತನ ನೆನಪಲ್ಲಿ ಕಟ್ಟಲಾಗಿದೆ.
ಮೀರ್ ಸಯ್ಯದ್ ಅಲಿ ಹಮ್ದಾನಿ ಅವರ ಪುಣ್ಯತಿಥಿಯನ್ನು ಮುಸ್ಲಿಂ ಕ್ಯಾಲೆಂಡರ್ ನ ಕೊನೆಯ ತಿಂಗಳಾದ ಡಲ್ ಹಜ್ ನ ಆರನೆಯ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಪೂಜೆಗಾಗಿ ನೆರೆದಿರುತ್ತಾರೆ. ಸುಂದರವಾದ ಮರದ ಛಾವಣಿ ಮತ್ತು ಅದರಲ್ಲಿರುವ ಸೂಕ್ಷ್ಮ ಕೆತ್ತನೆಗಳು ಬಹಳ ಆಕರ್ಷಕವಾಗಿವೆ. ಇಲ್ಲಿನ ಗೋಡೆಗಳ ಮೇಲೆ ಇತಿಹಾಸದ ಕಥೆಗಳು ಮತ್ತು ಘಟನೆಗಳನ್ನು ಚಿತ್ರಿಸಲಾಗಿದೆ.


Click it and Unblock the Notifications