ಕಾಥಿ ದರ್ವಾಜಾ ದಾಲ್ ಸರೋವರದ ದಡದಲ್ಲಿದ್ದು ಹರಿ ಪರ್ಬತ್ ಕೋಟೆಯ ಆಗಮನ ದ್ವಾರವೆಂದೇ ಇದನ್ನು ಪರಿಗಣಿಸಬಹುದಾಗಿದೆ. ಸಂಗೀನ್ ದರ್ವಾಜಾ ಕೋಟೆಯ ಇನ್ನೊಂದು ಮುಖ್ಯವಾದ ದ್ವಾರವಾಗಿದೆ. ಮಧ್ಯದಲ್ಲಿ ಗೊಮ್ಮಟಾಕಾರ ಹೊಂದಿರುವ ಎರಡು ಬದಿಯಲ್ಲಿ ಕೊಲ್ಲಿಗಳಿರುವ ಕಟ್ಟಡವು ಕಾಥಿ ದರ್ವಾಜಾವನ್ನು ನಿರ್ಮಿಸುತ್ತದೆ.
ಗೋಡೆ ಹಾಗೂ ಛಾವಣಿಯ ಮೇಲೆ ಪರ್ಷಿಯನ್ ಬರಹಗಳಿವೆ ಇವು ಮೊಘಲ್ ಸುಲ್ತಾನರು ಪಾಲಿಸಿದ ಪರ್ಷಿಯನ್ ಸಂಸ್ಕೃತಿ ಮತ್ತು ಸಂಪ್ರದಾಯದ ಮೇಲೆ ಬೆಳಕು ಚೆಲ್ಲುತ್ತವೆ.


Click it and Unblock the Notifications