ಶ್ರೀನಗರ ಪರ್ವತಗಳ ನಡುವೆ ನೆಲೆಸಿರುವ ಅನ್ಚರ್ ಸರೋವರವು ವಾಣಿಜ್ಯೀಕರಣ, ಅಕ್ರಮ ನಿರ್ಮಾಣ, ಅತಿಕ್ರಮಣ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮಾಲಿನ್ಯದ ಕಾರಣದಿಂದಾಗಿ ಒಣಗಿದ ಸರೋವರದಂತಾಗಿದೆ. ಈ ಸರೋವರ, ಪ್ರಖ್ಯಾತ ದಾಲ್ ಸರೋವರದ ಸಂಪರ್ಕ ಹೊಂದಿದ್ದರಿಂದ ಅತ್ಯಂತ ಜನಪ್ರಿಯವಾಗಿತ್ತು. ಇಂದು ಈ ಸರೋವರವು ತೀವ್ರ ಮಾಲಿನ್ಯದಿಂದಾಗಿ ಹಚ್ಚಿನ ಪ್ರಮಾಣದ ಕ್ಷಾರಯುಕ್ತ ನೀರನ್ನು ಹೊಂದಿದ್ದು, ಅನೇಕ ಕಾಡು ಸಸ್ಯಗಳು ಮತ್ತು ಹೂವುಗಳಿಂದ ತುಂಬಿದೆ. ಆದ್ದರಿಂದ ಇಲ್ಲಿ ವಿಹಾರ ಮಾಡುವುದೂ ಕಷ್ಟಕರವಾಗಿದೆ.
ಆದರೂ, ಈ ಸರೋವರಪಕ್ಷಿಧಾಮ ವೀಕ್ಷಣೆಗೆ ಸೂಕ್ತವಾದ ಸ್ಥಳ ಎಂದು ಪರಿಗಣಿಸಲಾಗಿದೆ. ಪ್ರವಾಸಿರು ’ಶಿಖಾರಾ’ ಅಥವಾ ಮರದ ದೋಣಿ ಸವಾರಿಯನ್ನು ಈ ಸರೋವರದ ತುದಿಯಲ್ಲಿ ಆನಂದಿಸಬಹುದು. ಚಳಿಗಾಲದಲ್ಲಿ, ನೀರಿನ ಪಕ್ಷಿಗಳಾದ ಪೊಚರ್ಡ್, ಮಲ್ಲಾರ್ಡ್, ಉಲ್ಲಂಕಿ ಗಾಡ್ವಾಲ್ ಮತ್ತು ತಿಳಿ ನೀರಿನ ಪಕ್ಷಿಗಳನ್ನು ಸುಲಭವಾಗಿ ಇಲ್ಲಿ ಗುರುತಿಸಬಹುದು.


Click it and Unblock the Notifications