ಶ್ರವಣಬೆಳಗೊಳಕ್ಕೆ ಹೋಗುವ ಪ್ರವಾಸಿಗರು ಕಾಳಮ್ಮ ದೇವಸ್ಥಾನವನ್ನೂ ಕೂಡಾ ನೋಡಬೇಕು. ಇದು ಕಾಳಿ ದೇವಿಗೆಂದು ನಿರ್ಮಿಸಿದ ದೇಗುಲವಾಗಿದೆ. ಪ್ರಮುಖ ವಿಷಯವೆಂದರೆ, ಇಡೀ ಶ್ರವಣಬೆಳಗೊಳದಲ್ಲಿರುವ ಹಿಂದೂ ದೇವತೆಯೆಂದರೆ ಕಾಳಮ್ಮ ದೇವಸ್ಥಾನವೊಂದೇ ಆಗಿದೆ. ಕಾಳಮ್ಮ ದೇವಸ್ಥಾನವು ಅಕ್ಕನಬಸದಿಯ ಸಮೀಪದಲ್ಲೇ ಇದೆ.ಕಾಳಮ್ಮ ದೇವಸ್ಥಾನವನ್ನು ತಲುಪಿದ ಕೂಡಲೇ ನೀವು ನಾಲ್ಕು ಕೈಗಳಿರುವ ಕಾಳಿ ಮಾತೆಯ ಮೂರ್ತಿಯನ್ನು ನೋಡುತ್ತೀರಿ. ಅಲ್ಲದೇ ಪ್ರವಾಸಿಗರು, ಇಲ್ಲಿ ಸುತ್ತಲಿನ ಪ್ರದೇಶದಲ್ಲಿ ಇನ್ನೂ ಹಲವು ಸಣ್ಣ ದೇವರುಗಳನ್ನು ಕಾಣುತ್ತಾರೆ. ಈ ಮಂದಿರಗಳು ಹಿಂದೂ ದೇವರುಗಳಿಗಾಗಿ ಕಟ್ಟಲ್ಪಟ್ಟಿದೆ. ಕಾಳಮ್ಮ ದೇವಸ್ಥಾನವು ಹಿಂದೂಗಳು ಹಾಗೂ ಜೈನರಿಂದಲೂ ಕೂಡಾ ಪೂಜಿಸಲ್ಪಡುತ್ತದೆ.


Click it and Unblock the Notifications