Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋನಭದ್ರ » ಆಕರ್ಷಣೆಗಳು » ಅಗೋರಿ ಕೋಟೆ

ಅಗೋರಿ ಕೋಟೆ, ಸೋನಭದ್ರ

1

ಅಗೋರಿ ಕೋಟೆ,  ಉತ್ತರಪ್ರದೇಶದ ಸೋನಭದ್ರ  ಜಿಲ್ಲೆಯ, ರಾಬರ್ಟ್ಸ್ ಗಂಜ್ ನಿಂದ 35 ಕಿ.ಮೀ ದೂರದಲ್ಲಿ ಮತ್ತು ಚೂಪಾನ್ ನಿಂದ  ಸುಮಾರು 10 ಕಿ.ಮೀ ದೂರದಲ್ಲಿರುವ ರೇಣುಕುತ್/ಟ್  ರಸ್ತೆಯ ಮೇಲೆ ನಿರ್ಮಿಸಲ್ಪಟ್ಟಿದೆ. ಇದು ಪ್ರಮುಖ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದ್ದು,  ಈ ಪ್ರದೇಶದ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.

ಮೊದಲು  ಖಾರವಾರ್ ಆಡಳಿತಗಾರ ಮಾಲೀಕತ್ವದಲ್ಲಿದ್ದ  ಕೋಟೆ ನಂತರ ಚಾಂಡೆಲ್ಸ್ ರಾಜವಂಶದ ಆಡಳಿತಗಾರರಿಗೆ ಹಸ್ತಾಂತರಿಸಲ್ಪಟ್ಟಿತು.  ಈ ಕೋಟೆಯನ್ನು ಆಳಿದ ಕೊನೆಯ ರಾಜ, ಓರ್ವ ಬುಡಕಟ್ಟು ರಾಜ ನಾಗಿದ್ದು, ನಂತರ ಇದು ಒಂದು ಬುಡಕಟ್ಟು ಕೋಟೆ ಎಂದು ಕರೆಯಲ್ಪಟ್ಟಿತು.

ಈ ಸ್ಮಾರಕವು ವಿಜುಲ್, ರೆಗು ಮತ್ತು ಸನ್  ಎಂಬ  ಮೂರು ನದಿಗಳ ಎಲ್ಲೆಯಲ್ಲಿರುವಂಥದ್ದು.  ಕೋಟೆಯನ್ನು ಸ್ವತಃ  ಸನ್ ನದಿಯ  ತೀರದಲ್ಲಿ ಕಟ್ಟಲಾಗಿದೆ.  ಈ ಕೋಟೆಯ ಸುತ್ತಲು ಕಂದಕಗಳನ್ನು ನಿರ್ಮಿಸಲಾಗಿದ್ದು, ಇದು ವಿಶೇಷವಾಗಿ ಶತ್ರುಗಳ ದಾಳಿಯನ್ನು ಪರಿಣಾಮಕಾರಿಯಾಗಿ ತಡೆಯಲು ಮಾಡಿದ ರಣತಂತ್ರವೆಂದು ಊಹಿಸಬಹುದು.

ಪ್ರವಾಸಿಗರು ರಿಹಾಂದ್  ನದಿಯ ಅಡ್ಡಲಾಗಿ ದೋಣಿ ಮೂಲಕ ಕೋಟೆಯನ್ನು ತಲುಪಬಹುದು. ಕೆಚ್ಚೆದೆಯ ಮನಸ್ಸುಳ್ಳವರು ಇಲ್ಲಿನ ಸೌಂದರ್ಯವನ್ನು ಆನಂದಿಸಲು ಸನ್ ನದಿಯ ಪಕ್ಕದಲ್ಲಿರುವ  ಕಣಿವೆಯ ಮೂಲಕ ಚಾರಣ ಕೂಡ ಮಾಡಬಹುದು.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue