'ಚಿರಂತನ, ಅಮರ ದೇಗುಲ' ಎಂದೂ ಕರೆಯಲ್ಪಡುವ ಸೋಮನಾಥ ಮಹಾದೇವ ದೇವಸ್ಥಾನವು ಗುಜರಾತ್ ನ ಸೋಮನಾಥದಲ್ಲಿದೆ. ಈ ದೇವಸ್ಥಾನವು ನಾಶಗೊಳಿಸಲ್ಪಟ್ಟು ಮತ್ತೆ ಪುನಃ 7 ಬಾರಿ ಪುನರ್ನಿರ್ಮಾಣಗೊಂಡಿತು. ಈ ದೇವಸ್ಥಾನವು ಚಂದ್ರ ದೇವನಾದ ಸೋಮನಿಂದ ಚಿನ್ನದಲ್ಲಿ ಕಟ್ಟಲ್ಪಟ್ಟು, ಸೂರ್ಯ ದೇವನಾದ ರವಿಯಿಂದ ಬೆಳ್ಳಿಯಲ್ಲಿ ಕಟ್ಟಲ್ಪಟ್ಟು, ಭಗವಾನ್ ಕೃಷ್ಣನಿಂದ ಕಟ್ಟಿಗೆಯಲ್ಲಿ ಕಟ್ಟಲ್ಪಟ್ಟು, ತದನಂತರ ಸೋಲಂಕಿ ರಾಜಪೂತರಿಂದ ಶಿಲೆಯಲ್ಲಿ 11 ನೆಯ ಶತಮಾನದಲ್ಲಿ ಕಟ್ಟಲ್ಪಟ್ಟಿತು. ಕೊನೆಯ ಬಾರಿಯ ಪುನರ್ನಿರ್ಮಾಣವು 1951 ರಲ್ಲಿ ಆಯಿತು.
ಈ ದೇವಸ್ಥಾನದ ಅಪಾರ ಶ್ರೀಮಂತಿಕೆ ಮತ್ತು ಉಜ್ವಲ ಕೀರ್ತಿಯು, ಈ ದೇವಸ್ಥಾನವು ಅನೇಕ ಬಾರಿ ದಾಳಿಗೊಳಗಾಗುವಂತೆ ಮಾಡಿತು. ಈ ದೇವಸ್ಥಾನವು ಇಲ್ಲಿರುವ ಅದ್ಬುತವಾದ ಕೆತ್ತನೆ, ಬೆಳ್ಳಿಯ ಬಾಗಿಲುಗಳು, ನಂದಿಯ ಪ್ರತಿಮೆ, ಮತ್ತು ಕೇಂದ್ರ ಸ್ಥಾನದಲ್ಲಿರುವ ಶಿವಲಿಂಗಕ್ಕಾಗಿ ಬಹಳ ಪ್ರಸಿದ್ಧಿಯನ್ನು ಹೊಂದಿದೆ. ಕಾರ್ತಿಕ್ ಪೂರ್ಣಿಮ ಹಬ್ಬವು, ದೇವಸ್ಥಾನವು ಜನಜಂಗುಳಿಯಿಂದ ತುಂಬಿರುವ ಒಂದು ಸಂದರ್ಭವಾಗಿದೆ. ಇದು ಹಿಂದೂ ಪಂಚಾಂಗದ ಪ್ರಕಾರ ಕಾರ್ತಿಕ್ ಸುದಾದ 14 ರಂದು ಆರಂಭಗೊಂಡು 4 ದಿನಗಳ ಪರ್ಯಂತ ನಡೆಯುತ್ತದೆ.


Click it and Unblock the Notifications