Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಮನಾಥ್ » ಹವಾಮಾನ

ಸೋಮನಾಥ್ ಹವಾಮಾನ

ಬೇಸಿಗೆಗಾಲ

ಈ ಪ್ರಾಂತದಲ್ಲಿ ಬೇಸಿಗೆಯು ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳಿನ ಅವಧಿಯಾಗಿರುತ್ತದೆ.  ಈ ಅವಧಿಯಲ್ಲಿ ಉಷ್ಣತೆಯು 42 ಡಿಗ್ರಿ ಸೆಲ್ಷಿಯಸ್ ನಿಂದ 24 ಡಿಗ್ರಿ ಸೆಲ್ಷಿಯಸ್ ನ ವ್ಯಾಪ್ತಿಯಲ್ಲಿರುತ್ತದೆ.  ಏಪ್ರಿಲ್ ಮತ್ತು ಮೇ ತಿಂಗಳುಗಳ ಅವಧಿಯು ಇಲ್ಲಿ ಕಡುಬೇಸಿಗೆಯ ಕಾಲವಾಗಿರುತ್ತದೆ.

ಮಳೆಗಾಲ

ಇಲ್ಲಿನ ಮಳೆಗಾಲದ ಅವಧಿಯು ಜೂನ್ ನಿಂದ ಸೆಪ್ಟೆಂಬರ್ ವರೆಗಿನದ್ದಾಗಿರುತ್ತದೆ.  ಈ ಅವಧಿಯಲ್ಲಿ ಈ ಪ್ರದೇಶವು ಅತೀ ಭೀಷಣವಾದ ಮಳೆಯನ್ನು ಮತ್ತು ಗುಡುಗಿನ ಆರ್ಭಟವನ್ನು ಅನುಭವಿಸುತ್ತದೆ.  ಮಳೆಗಾಲದಲ್ಲಿ ವಾತಾವರಣವು ತೇವಯುಕ್ತವಾಗಿದ್ದು, ತಂಪಾಗಿರುತ್ತದೆ.

ಚಳಿಗಾಲ

ಈ  ಪ್ರದೇಶದಲ್ಲಿ ಚಳಿಗಾಲವು ನವೆಂಬರ್ ನಿಂದ ಫೆಬ್ರವರಿಯವರೆಗಿನ ಅವಧಿಯಾಗಿದೆ.  ಈ ಅವಧಿಯಲ್ಲಿ ಉಷ್ಣತೆಯು 10 ಡಿಗ್ರಿ ಸೆಲ್ಷಿಯಸ್ ನಿಂದ 24 ಡಿಗ್ರಿ ಸೆಲ್ಷಿಯಸ್ ನಷ್ಟರವರೆಗೆ ವ್ಯತ್ಯಯಗೊಳ್ಳುತ್ತದೆ.  ಈ ಅವಧಿಯು ಸೋಮನಾಥಕ್ಕೆ ಭೇಟಿ ನೀಡಲು ಅತ್ಯುತ್ತಮ ಕಾಲವೂ ಹೌದು.