ಇವುಗಳು ಗುಹೆಗಳ ಒಂದು ಗುಂಪಾಗಿದ್ದು, ಸೋಮನಾಥದಲ್ಲಿರುವ ಬೆಟ್ಟವೊಂದರ ಮೇಲೆ ಬೇರೆ ಬೇರೆ ಮಟ್ಟ ಅಥವಾ ಹಂತಗಳಲ್ಲಿವೆ. ತಜ್ಞರ ಪ್ರಕಾರ, ಈ ಗುಹೆಗಳು ಕ್ರಿಸ್ತ ಪೂರ್ವ 2 ನೆಯ ಶತಮಾನದಷ್ಟು ಹಿಂದೆ ನಿರ್ಮಾಣಗೊಂಡವು. ಸುದರವಾದ ಕೆತ್ತನೆಗಳು, ಸ್ತೂಪಗಳು, ಬಂಡೆಗಳನ್ನು ಕೆತ್ತಿ ರಚಿಸಿದ ದಿಂಬಿನಂತಹ ರಚನೆಗಳು, ಮತ್ತು ಚೈತ್ಯಗಳು ಈ ಗುಹೆಗಳನ್ನು ಪ್ರವಾಸಿಗರ ಪಾಲಿಗೆ ಮತ್ತಷ್ಟು ಅಸಕ್ತಿದಾಯಕವನ್ನಾಗಿ ಮಾಡುತ್ತವೆ.