ಅಹ್ಮೆದ್ಪುರ್ ಮಾಂಡ್ವಿ ಬೀಚ್ (Ahmedpur Mandvi Beach), ಗುಜರಾತ್ ರಾಜ್ಯದ ಅತೀ ಸಂದರ್ಶಿತ ಬೀಚ್ ಗಳಲ್ಲಿ ಒಂದಾಗಿದೆ. ಇದು ಗುಜರಾತ್ ಮತ್ತು ದೀವ್ ಗಳು ಹತ್ತಿರವಾಗುವ ಗುಜರಾತ್ ನ ಕರಾವಳಿಯ ಗುಂಟ ಇದೆ. ಹೀಗಾಗಿ, ಈ ಪ್ರದೇಶವು ಸೌರಾಷ್ಟ್ರದ ಸಂಸ್ಕೃತಿಗಳು ಮತ್ತು ದೀವ್ ಪ್ರದೇಶದ ಪೋರ್ಚುಗೀಸ್ ಪ್ರಭಾವ, ಇವೆರಡರ ಸಂಗಮವಾಗಿದೆ. ನೀವು ಮರಳಿನ ಮೇಲೆ ಅಡ್ಡಾಡಲು ಇಚ್ಚಿಸುವವರಾದರೆ ಅಥವಾ ನೀವು ಇಲ್ಲಿನ ಉಪ್ಪು ನೀರಿನಲ್ಲಿ ಒಂದು ಮುಳುಗನ್ನು ಹಾಕಲು ಬಯಸುತ್ತೀರಾದರೆ, ಇಲ್ಲಿನ ಬೀಚ್ ನಿಮಗೆ ಹೇಳಿ ಮಾಡಿಸಿದಂತಿದೆ. ಡಾಲ್ಫಿನ್ ಗಳ ವೀಕ್ಷಣೆ ಮತ್ತು ಜಲಕ್ರೀಡಾ ಸಾಹಸಗಳು, ಈ ಬೀಚ್ ಸುಪ್ರಸಿದ್ಧವಾಗಿ ಬೆಳೆಯಲು ಅನುವಾದ ಇತರೆ ಕಾರಣಗಳಾಗಿವೆ.


Click it and Unblock the Notifications