ಶಿರಸಿಗೆ 30 ಕಿ.ಮೀ ದೂರದಲ್ಲಿರುವ ಉಂಚಳ್ಳಿ ಜಲಪಾತವು ಸಿದ್ದಾಪುರ ತಾಲ್ಲೂಕಿನಲ್ಲಿದೆ. ಇದು ಲುಶಿಂಗ್ ಟನ್ ಜಲಪಾತ ಎಂದು ಸಹ ಕರೆಯಲ್ಪಡುತ್ತದೆ. 1845ರಲ್ಲಿ ಜೆ.ಡಿ. ಲುಶಿಂಗ್ ಟನ್ (ಬ್ರಿಟೀಷ ಸರ್ಕಾರದಲ್ಲಿ ಜಿಲ್ಲಾಧಿಕಾರಿಯಾಗಿದ್ದರು) ಎಂಬುವರು ಇಲ್ಲಿನ ಜಲಪಾತವನ್ನು ಕಂಡು ಹಿಡಿದರು. ಹಾಗಾಗಿ ಈ ಜಲಪಾತಕ್ಕೆ ಲುಶಿಂಗ್ ಟನ್ ಜಲಪಾತವೆಂದು ಕರೆದರು. ಮುಂದೆ ಈ ಜಲಪಾತ ಅದೇ ಹೆಸರು ಪಡೆಯಿತು. ಉಂಚಳ್ಳಿ ಜಲಪಾತವು ಸ್ಥಳೀಯರ ಬಾಯಲ್ಲಿ ಕೆಪ್ಪ ಜೋಗ್ ಎಂದು ಕರೆಯಿಸಿಕೊಳ್ಳುತ್ತದೆ. ಇದರರ್ಥ ಕಿವುಡು ಜಲಪಾತ. ಇದು ಅಘನಾಶಿನಿ ನದಿಯಿಂದ ಹುಟ್ಟುತ್ತದೆ. ಈ ಜಲಪಾತವು 381 ಅಡಿ( 116 ಮೀಟರ್ ) ಎತ್ತರದಿಂದ ಧುಮುಕುತ್ತದೆ. ಶಿರಸಿಯ ಶಂಕರ ತೀರ್ಥ ತೊರೆಯು ಮಂಜಗುಣಿ ತೊರೆಯೊಂದಿಗೆ ಸೇರಿ ಅಘನಾಶಿನಿ ನದಿಯನ್ನು ಹುಟ್ಟುಹಾಕುತ್ತವೆ. ಇಲ್ಲಿಗೆ ವರ್ಷದ ಯಾವುದೇ ಸಮಯದಲ್ಲಿ ಬೇಕಾದರು ಭೇಟಿಕೊಡಬಹುದು. ಇಲ್ಲಿನ ಕಲ್ಲು ಬಂಡೆಗಳ ನಡುವೆ ಧುಮ್ಮಿಕ್ಕುವ ಜಲಪಾತವನ್ನು ನೋಡುತ್ತ ಸುತ್ತಲ ನಿಸರ್ಗಸೌಂದರ್ಯವನ್ನು ಸವಿಯಬಹುದು.


Click it and Unblock the Notifications