Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿರಸಿ » ಆಕರ್ಷಣೆಗಳು » ಮಾರಿಕಾಂಬ ದೇವಾಲಯ

ಮಾರಿಕಾಂಬ ದೇವಾಲಯ, ಶಿರಸಿ

2

ಪ್ರವಾಸಿಗರು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿನ ಶಿರಸಿಗೆ ಭೇಟಿಕೊಟ್ಟಾಗ 17ನೇ ಶತಮಾನದ ಶ್ರೀ ಮಾರಿಕಾಂಬ ದೇವಾಲಯಕ್ಕೆ ಭೇಟಿ ಕೊಡಲೆಬೇಕು, ಭಕ್ತಾದಿಗಳು ಈ ದೇವಾಲಯದಲ್ಲಿನ 7 ಅಡಿಗಳಷ್ಟು ಎತ್ತರದ ಮರದಲ್ಲಿ ಕೆತ್ತಿದ ದೇವಿಯ ವಿಗ್ರಹಕ್ಕೆ ಪೂಜೆ ಸಲ್ಲಿಸಬಹುದು. ಈ ದೇವಿಯ ಉತ್ತರ ಮತ್ತು ದಕ್ಷಿಣ ಕನ್ನಡದಲ್ಲಿನ ಜನರು ಆರಾಧಿಸುತ್ತಾರೆ. ದಂತಕಥೆಗಳ ಪ್ರಕಾರ ಈ ದೇವಿಯ ಮೂರ್ತಿಯು 1611ರಲ್ಲಿ ಈ ಊರಿನ ಸರಹದ್ದಿನಲ್ಲಿರುವ ಕೆರೆಯಲ್ಲಿ ದೊರೆಯಿತಂತೆ. ಆಗ ಸೊಂಡದ ರಾಜ ಇಮ್ಮಡಿ ಸದಾಶಿವರಾವ್ ಈ ಮರದ ಮೂರ್ತಿಯನ್ನು ಪ್ರತಿಷ್ಠಾಪಿಸುವಂತೆ ಆಙ್ಞೆ ಮಾಡಿದನಂತೆ ಹಾಗೆ ಈ ದೇವಾಲಯವು ನಿರ್ಮಾಣವಾಯಿತು. ಈ ಮೂರ್ತಿಯು ಕರ್ನಾಟಕದಲ್ಲಿನ ಮಾರಿಕಾಂಬ ದೇವಿಗಳಲ್ಲಿಯೆ ದೊಡ್ಡದು ಎಂದು ಖ್ಯಾತಿ ಪಡೆದಿದೆ.ಭಕ್ತಾದಿಗಳು ಮಾರಿಕಾಂಬ ದೇವಾಲಯದಲ್ಲಿ  ಈ ಮರದ ಮೂರ್ತಿಯನ್ನು ಹೊರತು ಪಡಿಸಿ ದೇವಾಲಯದಲ್ಲಿನ ಗೋಡೆಗಳಲ್ಲಿ ಇಲ್ಲಿನ ಪ್ರಸಿದ್ಧ ಕಾವಿಕಲೆಯ ಚಿತ್ರಗಳನ್ನು ನೋಡಬಹುದು. ಮಾರಿಕಾಂಬ ದೇವಾಲಯದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಗೆ ದೇಶದ ನಾನಾ ಭಾಗಗಳಿಂದ ಭಕ್ತಾದಿಗಳು ಬಂದು ಸೇರುತ್ತಾರೆ. ಭಕ್ತಾದಿಗಳ ನಂಬಿಕೆಯಂತೆ ಈ ಪ್ರಾಂತ್ಯವನ್ನು ಪ್ರಾಕೃತಿಕ ವಿಕೋಪಗಳು ಮತ್ತು ದುಷ್ಟಶಕ್ತಿಗಳು ಬರದಂತೆ ಕಾಪಾಡಲು ಮಾರಿಕಾಂಬ ದೇವಾಲಯದ ಅಸ್ತಿತ್ವವು ಮುಖ್ಯ ಕಾರಣವಂತೆ. ಈ ದೇವಾಲಯವು ಸಮುದ್ರ ಮಟ್ಟದಿಂದ 2500 ಅಡಿಗಳಷ್ಟು ಎತ್ತರದಲ್ಲಿ ನೆಲೆಗೊಂಡಿದ್ದು, ಪರ್ವತಗಳ, ದಟ್ಟ ಎಲೆ ಉದುರುವ ಕಾಡಿನ ಮತ್ತು ಕೆಲವು ಜಲಪಾತಗಳ ಸುಂದರನೋಟವನ್ನು ಒದಗಿಸುತ್ತದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat