ಪ್ರವಾಸಿಗರು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿನ ಶಿರಸಿಗೆ ಭೇಟಿಕೊಟ್ಟಾಗ 17ನೇ ಶತಮಾನದ ಶ್ರೀ ಮಾರಿಕಾಂಬ ದೇವಾಲಯಕ್ಕೆ ಭೇಟಿ ಕೊಡಲೆಬೇಕು, ಭಕ್ತಾದಿಗಳು ಈ ದೇವಾಲಯದಲ್ಲಿನ 7 ಅಡಿಗಳಷ್ಟು ಎತ್ತರದ ಮರದಲ್ಲಿ ಕೆತ್ತಿದ ದೇವಿಯ ವಿಗ್ರಹಕ್ಕೆ ಪೂಜೆ ಸಲ್ಲಿಸಬಹುದು. ಈ ದೇವಿಯ ಉತ್ತರ ಮತ್ತು ದಕ್ಷಿಣ ಕನ್ನಡದಲ್ಲಿನ ಜನರು ಆರಾಧಿಸುತ್ತಾರೆ. ದಂತಕಥೆಗಳ ಪ್ರಕಾರ ಈ ದೇವಿಯ ಮೂರ್ತಿಯು 1611ರಲ್ಲಿ ಈ ಊರಿನ ಸರಹದ್ದಿನಲ್ಲಿರುವ ಕೆರೆಯಲ್ಲಿ ದೊರೆಯಿತಂತೆ. ಆಗ ಸೊಂಡದ ರಾಜ ಇಮ್ಮಡಿ ಸದಾಶಿವರಾವ್ ಈ ಮರದ ಮೂರ್ತಿಯನ್ನು ಪ್ರತಿಷ್ಠಾಪಿಸುವಂತೆ ಆಙ್ಞೆ ಮಾಡಿದನಂತೆ ಹಾಗೆ ಈ ದೇವಾಲಯವು ನಿರ್ಮಾಣವಾಯಿತು. ಈ ಮೂರ್ತಿಯು ಕರ್ನಾಟಕದಲ್ಲಿನ ಮಾರಿಕಾಂಬ ದೇವಿಗಳಲ್ಲಿಯೆ ದೊಡ್ಡದು ಎಂದು ಖ್ಯಾತಿ ಪಡೆದಿದೆ.ಭಕ್ತಾದಿಗಳು ಮಾರಿಕಾಂಬ ದೇವಾಲಯದಲ್ಲಿ ಈ ಮರದ ಮೂರ್ತಿಯನ್ನು ಹೊರತು ಪಡಿಸಿ ದೇವಾಲಯದಲ್ಲಿನ ಗೋಡೆಗಳಲ್ಲಿ ಇಲ್ಲಿನ ಪ್ರಸಿದ್ಧ ಕಾವಿಕಲೆಯ ಚಿತ್ರಗಳನ್ನು ನೋಡಬಹುದು. ಮಾರಿಕಾಂಬ ದೇವಾಲಯದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಗೆ ದೇಶದ ನಾನಾ ಭಾಗಗಳಿಂದ ಭಕ್ತಾದಿಗಳು ಬಂದು ಸೇರುತ್ತಾರೆ. ಭಕ್ತಾದಿಗಳ ನಂಬಿಕೆಯಂತೆ ಈ ಪ್ರಾಂತ್ಯವನ್ನು ಪ್ರಾಕೃತಿಕ ವಿಕೋಪಗಳು ಮತ್ತು ದುಷ್ಟಶಕ್ತಿಗಳು ಬರದಂತೆ ಕಾಪಾಡಲು ಮಾರಿಕಾಂಬ ದೇವಾಲಯದ ಅಸ್ತಿತ್ವವು ಮುಖ್ಯ ಕಾರಣವಂತೆ. ಈ ದೇವಾಲಯವು ಸಮುದ್ರ ಮಟ್ಟದಿಂದ 2500 ಅಡಿಗಳಷ್ಟು ಎತ್ತರದಲ್ಲಿ ನೆಲೆಗೊಂಡಿದ್ದು, ಪರ್ವತಗಳ, ದಟ್ಟ ಎಲೆ ಉದುರುವ ಕಾಡಿನ ಮತ್ತು ಕೆಲವು ಜಲಪಾತಗಳ ಸುಂದರನೋಟವನ್ನು ಒದಗಿಸುತ್ತದೆ.


Click it and Unblock the Notifications