ಬ್ರಹ್ಮಪುರೀಶ್ವರರ್ ದೇವಾಲಯವು ಸೀರ್ಕಾಳಿಯಲ್ಲಿರುವ ಅತ್ಯಂತ ಪ್ರಸಿದ್ಧ ದೇವಾಲಯವಾಗಿದೆ. ಈ ದೇವಾಲಯವನ್ನು ಶಿವ ಮತ್ತು ಆತನ ಸಹ ಧರ್ಮಿಣಿಯಾದ ತಿರುಮಲ ನಾಯಕಿಯರಿಗಾಗಿ ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿ ಮೂರು ಗರ್ಭಗುಡಿಗಳಿವೆ. ಆ ಮೂರು ಗರ್ಭಗುಡಿಗಳು ಶಿವನಿಗಾಗಿ ನಿರ್ಮಿಸಲ್ಪಟ್ಟಿವೆ. ಇವುಗಳ ಜೊತೆಗೆ ತೋಣಿಯಪ್ಪರ್ ಮತ್ತು ಸಟ್ಟೈನಾಥರ್ ಎಂಬ ಇನ್ನಿತರ ಪ್ರಮುಖ ದೇವಾಲಯಗಳು ಸಹ ಇಲ್ಲಿವೆ.
ಬ್ರಹ್ಮಪುರೀಶ್ವರ್ ದೇವಾಲಯದಲ್ಲಿ 22 ತೀರ್ಥಗಳು ಇವೆ. ಈ ತೀರ್ಥಗಳಲ್ಲಿಯೇ ಬ್ರಹ್ಮ ತೀರ್ಥವು ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಈ ಅದ್ಭುತವಾದ ದೇವಾಲಯವು ಗೋಪುರಗಳಿಂದ ಆವೃತವಾಗಿದೆ. ದಂತಕಥೆಗಳ ಪ್ರಕಾರ, ಬಲಿ ಚಕ್ರವರ್ತಿಯನ್ನು ನರಕಕ್ಕೆ ಕಳುಹಿಸಿದ ನಂತರ ಬ್ರಹ್ಮನು ಇದ್ದಕಿದ್ದಂತೆ ಅಹಂ ಅತ್ತು ಕ್ರೋಧಾವೇಶ ಭರಿತನಾದನು. ಇದನ್ನು ನಿಯಂತ್ರಿಸಲು ಸಾಕ್ಷಾತ್ ಪರಶಿವನೇ ಬಂದನು. ಶಿವನು ಬ್ರಹ್ಮನ ಅಹಂ ಮತ್ತು ಕೋಪಾವೇಶಗಳನ್ನು ಹೊಡೆದೋಡಿಸಿದನು. ನಂತರ ಬ್ರಹ್ಮನು ತನ್ನ ತಪ್ಪನ್ನು ಅರಿತುಕೊಂಡನು. ಹಾಗಾಗಿಯೇ ಈ ದೇವಾಲಯವನ್ನು ಬ್ರಹ್ಮಪುರೀಶ್ವರರ್ ಎಂದು ಕರೆಯುತ್ತಾರೆ.


Click it and Unblock the Notifications