ಪೋರ್ಚುಗೀಸ್ ಪದ 'ಸಿಲ್ವಾ' ಎಂಬ ಅರ್ಥದ ಸಿಲ್ವಸ್ಸ ನಗರದ ಲುಹಾರಿ ಈ ಪ್ರದೇಶದಲ್ಲಿರುವ ಅದ್ಭುತ ಸೌಂದರ್ಯ ಹೊಂದಿರುವ ಸ್ಥಳವಾಗಿದೆ. ಸಿಲ್ವಾಸ್ಸಾ ನಗರದಿಂದ ಸುಮಾರು 14 ಕಿ.ಮೀ ದೂರದಲ್ಲಿ ಈ ಸುಂದರ ತಾಣವಿದೆ.
ಜೀವನದ ಜಂಜಾಟದಿಂದ ಬೇಸತ್ತು ಸ್ವಲ್ಪ ದಿನ ವಿಶ್ರಾಂತಿ ತೆಗೆದುಕೊಳ್ಳಲು ಪ್ರಕೃತಿಯ ಮಡಿಲನ್ನು ಹುಡುಕುತ್ತಿದ್ದರೆ ಲುಹಾರಿ ಸೂಕ್ತವಾದ ಸ್ಥಳ. ಜನಸಂದಣಿಯಿಂದ ದೂರವಿರಲು ಅದ್ಬುತವಾದ ಸ್ಥಳ. ಲುಹಾರಿಯ ತಪ್ಪಲಿನಲ್ಲಿ ಪ್ರವಾಸಿಗರಿಗೆ ಕುಟೀರದ ರೀತಿಯ ತಂಗಲು ವ್ಯವಸ್ಥೆ ಕೂಡ ಇದೆ.
ಪ್ರವಾಸಿ ಇಲಾಖೆ ಕ್ರೀಡಾ ಉತ್ಸಾಹಿಗಳಿಗೆ ಸಾಕಷ್ಟು ಸಾಹಸ ಚಟುವಟಿಕೆಗಳನ್ನು, ಟ್ರೆಕಿಂಗ್ಗಳನ್ನೂ ಆಯೋಜಿಸುತ್ತದೆ. ಸಿಲ್ವಾಸ್ಸಾದ ಸುತ್ತಮುತ್ತಲ ಅಭಯಾರಣ್ಯ ಮತ್ತು ಕಾಡುಗಳಲ್ಲಿ ಕ್ಯಾಂಪ್ ಗಳನ್ನೂ ಕೂಡ ನಡೆಸುತ್ತದೆ.


Click it and Unblock the Notifications