ಸಿಕರ್ ಜಿಲ್ಲೆಯಲ್ಲಿರುವ ಗಾನೇಶ್ವರ್ ಒಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಈ ಹಳ್ಳಿಯಲ್ಲಿ ಕಾಣಬಹುದಾದ ಬಿಸಿಯಾದ ಗಂಧಕದ ಝರಿಗಳಿಂದಾಗಿ ಇದು ಜನಪ್ರಿಯವಾಗಿದೆ. ಈ ಝರಿಗಳಲ್ಲಿ ಒಮ್ಮೆ ಸ್ನಾನ ಮಾಡುವುದರಿಂದ ಚರ್ಮ ರೋಗಗಳು ಮಾಯವಾಗುತ್ತವೆ ಎನ್ನಲಾಗುತ್ತದೆ. ಇದಲ್ಲದೆ, ಪ್ರವಾಸಿಗರು, ಇಲ್ಲಿ 4000 ವರ್ಷಗಳ ಪುರಾತನ ನಾಗರಿಕತೆಯ ಅವಶೇಷಗಳನ್ನೂ ಸಹ ನೋಡಬಹುದಾಗಿದೆ.ಗಾನೇಶ್ವರ್ ಬಳಿಯಿರುವ ಬಾಲೇಶ್ವರ್ ನಗರವು ತನ್ನಲ್ಲಿರುವ ಪ್ರಾಚೀನ ಶಿವನ ದೇವಸ್ಥಾನದಿಂದಾಗಿ ಹೆಸರುವಾಸಿಯಾಗಿದೆ.


Click it and Unblock the Notifications