Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಪುರಿ » ಆಕರ್ಷಣೆಗಳು » ಪಾವಾ ಜಲಪಾತ

ಪಾವಾ ಜಲಪಾತ, ಶಿವಪುರಿ

0

ಶಿವಪುರಿಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ಜಲಪಾತಗಳಿವೆ. ಅವುಗಳ ಪಟ್ಟಿಯಲ್ಲಿ ಮತ್ತೊಂದು ಸೇರ್ಪಡೆಯೆಂದರೆ ಪಾವಾ ಜಲಪಾತ. ಸುಲ್ತಾನ್ ಘರ್ ಜಲಧಾರೆ, ಭೂರ ಖೋನ್ ಜಲಪಾತ ತಮ್ಮದೇ ವೈಶಿಷ್ಟ್ಯ ಹೊಂದಿದ್ದರೆ, ಪಾವಾ ಜಲಪಾತ ಇವಕ್ಕಿಂತಲೂ ವಿಭಿನ್ನ. ಈ ಪ್ರವಾಸಿ ತಾಣವು ಧಾರ್ಮಿಕ ಮನರಂಜನಾ ತಾಣವಾಗಿದೆ. ಶಿವಪುರಿಯಿಂದ 40 ಕಿ.ಮೀ. ದೂರದಲ್ಲಿರುವ ಪೋಹರಿ ಪಟ್ಟಣದಲ್ಲಿ ಪಾವಾ ಜಲಪಾತವಿದೆ. ದುಮ್ಮಿಕ್ಕಿ ಹರಿಯುವ ಜಲಪಾತವನ್ನು ಕಣ್ಣು ಪಿಳುಕಿಸದೆ ನೋಡಲು ಮನಸ್ಸು ಹಾತೊರೆಯುತ್ತಿರುತ್ತದೆ.

ಭೋರ್ಗರೆದು ಹರಿಯುವ ಜಲಪಾತ 500 ಅಡಿ ಎತ್ತರದಿಂದ ಪಾವಾ ಕುಂಡದೊಳಗೆ ಬೀಳುತ್ತದೆ. ನಿಪುಣ ಈಜುಗಾರರಿಗೆ ಇಲ್ಲಿ ಡೈವ್ ಹೊಡೆಯುವುದು ಒಂದು ಮಜವಾದ ಅನುಭವ ನೀಡುತ್ತದೆ. ಆದರೆ, ದುರಾದೃಷ್ಟವೆಂದರೆ, ಸ್ಕೂಬಾ ಡೈವ್ ಹೊಡೆಯುವವರಿಗೆ ಇಲ್ಲಿ ಬೇಕಾದ ಸಲಕರಣೆಗಳು ಲಭ್ಯವಿರುವುದಿಲ್ಲ. ಇಲ್ಲಿನ ಬೃಹತ್ತಾದ ಶಿವನ ಪ್ರತಿಮೆ ಭಕ್ತಾದಿಗಳಿಗೆ ಮನಸ್ಸಿಗೆ ಆನಂದ ಮಾತ್ರವಲ್ಲ ಭಕ್ತಿಭಾವ ಮೂಡುವಂತಿದೆ. ಪವಾಡಗಳನ್ನು ನಂಬುವ ಭಕ್ತರಿಗೆ ಈ ದೇಗುಲ ಅತ್ಯಂತ ಫೆವರಿಟ್ ತಾಣವಾಗಿದೆ. ಸುತ್ತಲೂ ಸಾಲುಬೆಟ್ಟಗಳು, ಜಲಪಾತಗಳು, ಹಸಿರು ಬನಸಿರಿಯ ನಡುವೆ ಶಿವನ ಅತ್ಯುದ್ಭುತ ಪ್ರತಿಮೆ. ಈ ಸ್ಥಳಕ್ಕೆ ಭೇಟಿ ಕೊಡಲು ಇನ್ನೆಂಥ ಆಕರ್ಷಣೆಗಳು ಬೇಕು?

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue