ಕಾಳಿಸಿಂಧ್ ನ ಪೂರ್ವಭಾಗದಲ್ಲಿ ನಾರವಾರ ಕೋಟೆ ಉಪಸ್ಥಿತವಿದೆ. ಶಿವಪುರಿಯಿಂದ 42 ಕಿ.ಮೀ. ದೂರದಲ್ಲಿರುವ ಈ ಕೋಟೆ ರಾಜರ ಕಾಲದ ಗಡಿಭಾಗವಾಗಿ ಅನೇಕ ಯುದ್ಧಗಳಿಗೆ ಸಾಕ್ಷಿಯಾಗಿದೆ. ಈ ಪಟ್ಟಣವು ಐತಿಹಾಸಿಕ ಮಹತ್ವ ಹೊಂದಿದ್ದು, 12ನೇ ಶತಮಾನದವರೆಗೆ ಇದನ್ನು ನಳಪುರ ಎಂದು ಕರೆಯಲಾಗುತ್ತಿತ್ತು. ಮಹಾಭಾರತ ಕಾವ್ಯದಲ್ಲಿ ಇದರ ಹೆಸರು ಉಲ್ಲೇಖಿಸಲಾಗಿದ್ದು, ಅದರಲ್ಲಿ ಬರುವ ನಳ ದಮಯಂತಿಯರ ಪ್ರೇಮ ಕಾವ್ಯದ ಕುರುಹಾಗಿ ಈ ಪ್ರದೇಶಕ್ಕೆ ರಾಜ ನಳನ ಹೆಸರು ಇಡಲಾಗಿದೆ.
ಸಮುದ್ರಮಟ್ಟದಿಂದ ಸುಮಾರು 500 ಅಡಿ ಎತ್ತರದ ಬೆಟ್ಟದ ಮೇಲೆ ಈ ಕೋಟೆ ನಿಂತಿದೆ. 8 ಚದರ ಕಿ.ಮೀ. ವಿಸ್ತೀರ್ಣ ಹೊಂದಿರುವ ಈ ಕೋಟೆ ಅತ್ಯಂತ ಶಕ್ತಿಶಾಲಿ ಸಾಮ್ರಾಜ್ಯದ ಇತಿಹಾಸವನ್ನು ಸಾರುತ್ತದೆ. ಕಾಲದ ಹೊಡೆತಕ್ಕೆ ಕೋಟೆ ಸಿಲುಕಿದರೂ ಕೋಟೆಯ ಶಿಲ್ಪಕಲೆಯ ಅಚ್ಚಳಿಯದೆ ಹಾಗೆಯೇ ಉಳಿದಿದೆ. ರಜಪೂತರ ಶೈಲಿಯ ಶಿಲ್ಪಕಲೆಯ ಪ್ರಭಾವ ಇಲ್ಲಿದೆ ಎಂಬುದಕ್ಕೆ ಕೋಟೆಯ ಮೇಲ್ಛಾವಣಿ ಮತ್ತು ಕಂಬಗಳೇ ಸಾಕ್ಷಿಯಾಗಿವೆ.


Click it and Unblock the Notifications