Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಮ್ಲಾ » ಆಕರ್ಷಣೆಗಳು » ವೈಸ್‍ರೀಗಲ್ ಲಾಡ್ಜ್ ಮತ್ತು ಬೊಟಾನಿಕಲ್ ಗಾರ್ಡನ್ಸ್

ವೈಸ್‍ರೀಗಲ್ ಲಾಡ್ಜ್ ಮತ್ತು ಬೊಟಾನಿಕಲ್ ಗಾರ್ಡನ್ಸ್, ಶಿಮ್ಲಾ

2

ವೈಸ್‍ರೀಗಲ್ ಲಾಡ್ಜ್ ಮತ್ತು ಬೊಟಾನಿಕಲ್ ಗಾರ್ಡನ್‍ಗಳು ಶಿಮ್ಲಾದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿವೆ. ಈ ನಯನ ಮನೋಹರವಾದ ಲಾಡ್ಜ್ 1888ರಲ್ಲಿ ಸ್ಥಾಪಿತವಾಯಿತು. ಇದು ಅಬ್ಸರ್ವೇಟರಿ ಬೆಟ್ಟದ ಮೇಲೆ ನೆಲೆಗೊಂಡಿದೆ. ಯೂರೋಪಿಯನ್ ಶೈಲಿಯ ಈ ಕಟ್ಟಡವು ಬ್ರಿಟೀಷ್ ಇಂಡಿಯಾದ ಕಾಲದಲ್ಲಿ ಭಾರತದ ವೈಸ್‍ರಾಯ್‍ಗಳ ಅಥವಾ ರಾಷ್ಟ್ರಪತಿಗಳ ನಿವಾಸವಾಗಿ ಬಳಸಲ್ಪಡುತ್ತಿತ್ತು.  ಹಾಗಾಗಿ ಇದನ್ನು " ರಾಷ್ಟ್ರಪತಿ ನಿವಾಸ್" ಎಂದು ಕರೆಯಲಾಗುತ್ತಿತ್ತು.

ಭಾರತದ ಸ್ವಾತಂತ್ರ್ಯಾನಂತರ ಪ್ರೋ|| ರಾಧಾಕೃಷ್ಣನ್‍ರವರ ಕಾಲದಲ್ಲಿ ಇದನ್ನು ಶೈಕ್ಷಣಿಕ ಇಲಾಖೆಯ ಸುಪರ್ದಿಗೆ ಒಪ್ಪಿಸಲಾಯಿತು. ಭಾರತದ ಅತ್ಯಂತ ವಿಶ್ವಾಸಾರ್ಹ ಸಂಶೋಧನಾ ಸಂಸ್ಥೆಯಾದ ಭಾರತೀಯ ಉನ್ನತ ಅಧ್ಯಯನ ಸಂಸ್ಥೆ ( ಐ ಐ ಎ ಎಸ್) ಯನ್ನು ಇಲ್ಲಿ 1964ರಲ್ಲಿ ಸ್ಥಾಪಿಸಲಾಯಿತು. ಇದೊಂದು ಆರು ಅಂತಸ್ತಿನ ಕಟ್ಟಡವಾಗಿದ್ದು,  ಸುತ್ತಲು ಸುಂದರವಾದ ಹುಲ್ಲು ಹಾಸು ಮತ್ತು ಉದ್ಯಾನವನಗಳನ್ನು ನಾವು ಇಲ್ಲಿ ಕಾಣಬಹುದು. ಇದರ ಒಳಾಂಗಣ ಮತ್ತು ಹೊರಾಂಗಣ ವಿನ್ಯಾಸವು ನೋಡುಗರನ್ನು ಸೆಳೆಯುತ್ತದೆ. ಇದು ಪುನರುಜ್ಜೀವನ ಕಾಲದ ವಾಸ್ತು ಶೈಲಿಯನ್ನು ಹೊಂದಿದೆ. ಈ ಕಟ್ಟಡವು ಶಿಮ್ಲಾ ಸಮಾವೇಶ (1945) ಮತ್ತು ಶಿಮ್ಲಾ ಒಪ್ಪಂದ (1947)ದಂತಹ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat